ಚೆನ್ನೈ, ಏಪ್ರಿಲ್ 26: ಚೆನ್ನೈಯ ಚಿದಂಬರಂ ಸ್ಟೇಡಿಯಂನಲ್ಲಿನ ಶುಕ್ರವಾರ (ಏಪ್ರಿಲ್ 26) ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಐಪಿಎಲ್ ಪಂದ್ಯದಿಂದ ಸಿಎಸ್ಕೆ ನಾಯಕ ಎಂಎಸ್ ಧೋನಿ ಹೊರಗುಳಿಸಿದ್ದರು. ಇದಕ್ಕೆ ಜ್ವರ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.
ಐಪಿಎಲ್ 2019: ಚೆನ್ನೈ vs ಮುಂಬೈ ಪಂದ್ಯ, Live ಸ್ಕೋರ್ಕಾರ್ಡ್
'ತಲಾ (ಧೋನಿ) ಐಪಿಎಲ್ನಲ್ಲಿ ಇದು ಎರಡನೇ ಬಾರಿಗೆ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ. ಈ ಬಾರಿ ಜ್ವರದ ಕಾರಣ ಧೋನಿ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿಲ್ಲ' ಎಂದು ಸಿಎಸ್ಕೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ. ಈ ಹಿಂದೆ ಧೋನಿ ಬೆನ್ನು ನೋವಿನಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಆ ಪಂದ್ಯವನ್ನು ಚೆನ್ನೈ ಸೋತಿತ್ತು.
It’s @msdhoni vs @ImRo45 again in the @IPL 🔥
— Mumbai Indians (@mipaltan) April 26, 2019
Watch as we preview tonight’s big clash 📹#OneFamily #CricketMeriJaan #MumbaiIndians #CSKvMI pic.twitter.com/oo6d9ZzRWN
'ಎಂಎಸ್ಡಿ ಮತ್ತು ಜಡ್ಡು (ರವೀಂದ್ರ ಜಡೇಜಾ) ಆರೋಗ್ಯ ಸರಿಯಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದರೊಂದಿಗೆ ಫಾ ಡು ಪ್ಲೆಸಿಸ್ ಕೂಡ ಮೈದಾನಕ್ಕಿಳಿಯುತ್ತಿಲ್ಲ. ಈ ಮೂವರ ಬದಲಿಗೆ ಮುರಳಿ ವಿಜಯ್, ಮಿಚೆಲ್ ಸ್ಯಾಂಟ್ನರ್ ಮತ್ತು ಧೃವ್ ಶೋರೆ ಆಡುತ್ತಿದ್ದಾರೆ' ಎಂದು ತಂಡದ ನಾಯಕತ್ವ ವಹಿಸಿದ್ದ ರೈನಾ ಟಾಸ್ ವೇಳೆ ಮಾಹಿತಿ ನೀಡಿದರು.