Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನೀವು ಆರ್‌ಸಿಬಿ ಸೇರಿಕೊಳ್ಳಿ: RCB ಅಭಿಮಾನಿಗೆ ಖಡಕ್ ಉತ್ತರ ನೀಡಿದ ಎಂಎಸ್ ಧೋನಿ- ವಿಡಿಯೋ ವೈರಲ್

ಭಾರತ ಕ್ರಿಕೆಟ್ ತಂಡದ ಮಾಜಿ ಎಂಎಸ್ ಧೋನಿ ಅವರು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಐದು ಟ್ರೋಫಿಗಳನ್ನು ಗೆದ್ದು ರೋಹಿತ್ ಶರ್ಮಾ ಜೊತೆ ಜಂಟಿ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ.

ಎಂಎಸ್ ಧೋನಿ ಅವರ ನಾಯಕತ್ವ ಕೌಶಲ್ಯವು ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಉತ್ತುಂಗಕ್ಕೇರಲು ಸಹಾಯ ಮಾಡಿದೆ ಮತ್ತು ಅವರ ಫಿನಿಶಿಂಗ್ ಆಟ, ಶಾಂತ ಸ್ವಭಾವ ಹಾಗೂ ನಾಯಕತ್ವದ ಸಾಮರ್ಥ್ಯದಿಂದಾಗಿ ಅಭಿಮಾನಿಗಳು ಅವರನ್ನು 'ಗೇಮ್‌ಚೇಂಜರ್' ಎಂದು ಶ್ಲಾಘಿಸುತ್ತಾರೆ.

What did MS Dhoni Say to the RCB Fan when He Asked for Helping RCB win the IPL Trophy

ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಯೊಬ್ಬರು ಆರ್‌ಸಿಬಿ ಫ್ರಾಂಚೈಸಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಬೆಂಬಲಿಸುವಂತೆ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಎಂಎಸ್ ಧೋನಿ ಎಲ್ಲರನ್ನೂ ಮೆಚ್ಚಿಸುವ ಪ್ರತಿಕ್ರಿಯೆ ನೀಡಿದರು.

"ನಿಮಗೆ ಗೊತ್ತಾ, ಆರ್‌ಸಿಬಿ ತುಂಬಾ ಒಳ್ಳೆಯ ತಂಡ. ಅಲ್ಲದೆ, ನೀವು ನೋಡಬೇಕಾದದ್ದು ಎಲ್ಲವೂ ಯೋಜನೆಯ ಪ್ರಕಾರ ನಡೆಯುತ್ತಿಲ್ಲ ಎಂದು. ಐಪಿಎಲ್‌ನಲ್ಲಿ ಎಲ್ಲಾ 10 ತಂಡಗಳು, ಪೂರ್ಣ ಆಟಗಾರರನ್ನು ಹೊಂದಿದ್ದರೆ, ಅವು ತುಂಬಾ ಬಲಿಷ್ಠ ತಂಡಗಳಾಗಿವೆ".

"ಗಾಯದಿಂದಾಗಿ ನೀವು ಕೆಲವು ಆಟಗಾರರನ್ನು ಕಳೆದುಕೊಂಡರೆ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಅವರದು ಉತ್ತಮ ತಂಡವಾಗಿದ್ದು, ಐಪಿಎಲ್‌ನಲ್ಲಿ ಎಲ್ಲರಿಗೂ ತಕ್ಕಮಟ್ಟಿಗೆ ಅವಕಾಶವಿದೆ. ಸದ್ಯಕ್ಕೆ, ನನ್ನ ಸ್ವಂತ ತಂಡದಲ್ಲಿ ನಾನು ಚಿಂತಿಸಬೇಕಾದ ಹಲವು ವಿಷಯಗಳಿವೆ. ನಾನು ಪ್ರತಿ ತಂಡಕ್ಕೂ ಶುಭ ಹಾರೈಸುತ್ತೇನೆ, ಆದರೆ ಸದ್ಯಕ್ಕೆ ನಾನು ಹೆಚ್ಚು ಮಾಡಲು ಸಾಧ್ಯವಿಲ್ಲ".

"ಇನ್ನೊಂದು ತಂಡವನ್ನು ಬೆಂಬಲಿಸಲು ಅಥವಾ ಸಹಾಯ ಮಾಡಲು ನಾನು ಹೊರಬರುತ್ತಿದ್ದೇನೆ ಎಂದು ಕಲ್ಪಿಸಿಕೊಳ್ಳಿ. ನಮ್ಮ ಅಭಿಮಾನಿಗಳಿಗೆ ಹೇಗನಿಸುತ್ತದೆ? ನಿಮಗೆ ಹೇಗನಿಸುತ್ತದೆ?," ಎಂದು ಎಂಎಸ್ ಧೋನಿ ಸೂಕ್ಷ್ಮವಾಗಿ ಉತ್ತರಿಸಿದರು.

ಆರ್‌ಸಿಬಿ ಅಭಿಮಾನಿಯೊಬ್ಬರು ಆರ್‌ಸಿಬಿಗೆ ಪ್ರಶಸ್ತಿ ಗೆಲ್ಲಲು ಬಂದು ಬೆಂಬಲಿಸುವಂತೆ ಕೇಳಿದಾಗ ಎಂಎಸ್ ಧೋನಿ ಅವರಿಂದ ಬಂದ ಪ್ರತಿಕ್ರಿಯೆ ಇದು.

ಇದೇ ವೇಳೆ 2024ರ ಐಪಿಎಲ್‌ಗಾಗಿ ನಡೆದ ಮಿನಿ ಹರಾಜಿನ ಪತ್ರಿಕಾಗೋಷ್ಠಿಯಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು, ಕಳೆದ 10 ವರ್ಷಗಳಿಂದ ಎಂಎಸ್ ಧೋನಿಗಾಗಿ ಸಿಎಸ್‌ಕೆ ಉತ್ತರಾಧಿಕಾರಿ ಯೋಜನೆಗಳನ್ನು ಹೊಂದಿತ್ತು. ಆದರೆ ಅವರು ಎಂದಿನಂತೆ ಉತ್ಸಾಹದಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.

"ನಾವು ಸುಮಾರು 10 ವರ್ಷಗಳಿಂದ ಎಂಎಸ್ ಧೋನಿಗಾಗಿ ಉತ್ತರಾಧಿಕಾರದ ಯೋಜನೆಗಳನ್ನು ಹೊಂದಿದ್ದೆವು. ಅಂದಿನಿಂದಲೂ ಇದು ಮಾತನಾಡುವ ವಿಷಯವಾಗಿತ್ತು. ಆದರೆ ಅವರು ಪ್ರತಿ ವರ್ಷವೂ ಮೈದಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಮತ್ತು ಅಷ್ಟೇ ಉತ್ಸಾಹಭರಿತರಾಗಿದ್ದಾರೆ. ಆ ಉತ್ಸಾಹ ತಂಡ ಮತ್ತು ಫ್ರಾಂಚೈಸಿಗೆ ಇದ್ದರೂ, ನಾವು ಮುಂದುವರಿಯುತ್ತೇವೆ," ಎಂದು ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Story first published: Thursday, December 21, 2023, 11:00 [IST]
Other articles published on Dec 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+