Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MS Dhoni: ಎಂಎಸ್ ಧೋನಿಯ ಅಂತಿಮ ಐಪಿಎಲ್!: ವಿದಾಯದ ಪಂದ್ಯ ಯಾವುದು?

MS Dhoni set to retire after IPL 2023? Know His Farewell Match Date and venue- Report

ದಿಗ್ಗಜ ಕ್ರಿಕೆಟಿಗ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ ಐಪಿಎಲ್‌ನಲ್ಲಿ ಧೋನಿ ಆಟವನ್ನು ನೋಡುವ ಅವಕಾಶ ಅಭಿಮಾನಿಗಳಿಗೆ ಇನ್ನೂ ಇದೆ. ಆದರೆ ಇದು ಈ ಬಾರಿಯ ಆವೃತ್ತಿಗೆ ಅಂತ್ಯವಾಗುವುದು ಬಹುತೇಕ ನಿಶ್ಚಿತ. 2023ನೇ ಸಾಲಿನಲ್ಲಿ ಧೋನಿ ತಮ್ಮ ವೃತ್ತಿ ಜೀವನದ ಕೊನೇಯ ಐಪಿಎಲ್ ಟೂರ್ನಿ ಆಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಧೋನಿ ಅಧಿಕೃತವಾಗಿ ಹೇಳದಿದ್ದರೂ ಈ ಹಿಂದೆ ನೀಡಿರುವ ಸುಳಿವುಗಳು ಇದನ್ನೇ ದೃಢಪಡಿಸುತ್ತಿವೆ.

ಟೂರ್ನಿಯ ಆರಂಭಕ್ಕೂ ಮುನ್ನ ಅಧಿಕೃತ ಮಾಹಿತಿ: ಇನ್ನು ಧೋನಿಯ ನಿವೃತ್ತಿಯ ವಿಚಾರವಾಗಿ ಈವರೆಗೆ ಅಧಿಕೃತವಾಗಿ ಧೋನಿ ಅಥವಾ ಫ್ರಾಂಚೈಸಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಇನ್‌ಸೈಡ್ ಸ್ಪೋರ್ಟ್ ಈಬಗ್ಗೆ ವರೆದಿಯೊಂದನ್ನು ಪ್ರಕಟಿಸಿದ್ದು ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ಈ ಬಗ್ಗೆ ಅಧಿಕೃತ ಘೋಷಣೆ ಸಾಧ್ಯತೆಯಿದೆ ಎನ್ನಲಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯ ಮೊಲದ ಪಂದ್ಯದಲ್ಲಿಯೇ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.

2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಧಾರಸ್ಥಂಭವಾಗಿದ್ದಾರೆ ಎಂಎಸ್ ಧೋನಿ. ಈ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ ಭಾರತದ ದಿಗ್ಗಜ ಆಟಗಾರ. ಐಪಿಎಲ್ ಇತಿಹಾಸದಲ್ಲಿ ಈವರೆಗೆ ನಾಲ್ಕು ಬಾರಿ ಚಾಂಪಿಯನ್ ಎನಿಸಿಕೊಂಡಿರುವ ಸಿಎಸ್‌ಕೆ ಕಳೆದ ಬಾರಿ ಮಾತ್ರ ನೀರಸ ಪ್ರದರ್ಶನ ನೀಡಿ ಪ್ಲೇಆಫ್‌ಗೆ ಕುಡ ಪ್ರವೇಶ ಪಡೆಯಲು ಸಾಧ್ಯವಾಗಿರಲಿಲ್ಲ. ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದಲ್ಲಿ ಕೆಲ ಗೊಂದಲಗಳು ಕೂಡ ಇದ್ದವು ಎಂಬುದು ಗಮನಾರ್ಹ ಅಂಶ. ನಾಯಕತ್ವ ವಹಿಸಿಕೊಂಡಿದ್ದ ರವೀಂದ್ರ ಜಡೇಜಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಬಳಿಕ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ನಂತರ ಮಾಹಿ ಮತ್ತೆ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.

ಧೋನಿ ವಿದಾಯದ ಪಂದ್ಯ ಯಾವುದು?
ಈ ಬಾರಿಯ ಐಪಿಎಲ್ ಟೂರ್ನಿ ಎಂಎಸ್ ಧೋನಿಯ ವಿದಾಯದ ಟೂರ್ನಿ ಎನ್ನಲಾಗುತ್ತಿದೆ. ಅದರಲ್ಲೂ ಸದ್ಯ ಧೋನಿಯ ವಿದಾಯದ ಪಂದ್ಯ ಯಾವುದು ಎಂಬುದು ಕೂಡ ಸಾಕಷ್ಟು ಚರ್ಚೆಯ ವಿಷಯವಾಗಿದೆ. ಇತ್ತೀಚಿನ ಕೆಲ ವರದಿಗಳ ಪ್ರಕಾರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಮೇ 14ರಂದು ನಡೆಯಲಿರುವ ಪಂದ್ಯ ಎಂಎಸ್ ಧೋನಿಯ ವಿದಾಯದ ಪಂದ್ಯ ಎನ್ನಲಾಗಿದೆ. ಈ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಮೈದಾನದಲ್ಲಿಯೇ ನಡೆಯಲಿದೆ. ಆದರೆ ಸಿಎಸ್‌ಕೆ ತಂಡ ಪ್ಲೇಆಫ್‌ಗೆ ಪ್ರವೇಶಿಸಿದರೆ ಪ್ಲೇಆಫ್ ಹಂತದಲ್ಲಿಯೂ ಧೋನಿ ಆಡಬಹುದು ಎನ್ನಲಾಗುತ್ತಿದೆ.

ಧೋನಿ ಬಳಿಕ ಸಿಎಸ್‌ಕೆ ನಾಯಕ ಯಾರು? ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಆರಂಭದ ಬಳಿಕ ಎಂಎಸ್ ಧೋನಿ ಅವರನ್ನು ಮಾತ್ರವೇ ಪೂರ್ಣ ಪ್ರಮಾಣದ ನಾಯಕನನ್ನಾಗಿ ನೋಡಿದೆ. ಕಳೆದ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ಹೆಗಲಿಗೆ ನಾಯಕತ್ವದ ಜವಾಬ್ಧಾರಿ ನೀಡಲಾಗಿತ್ತಾದರೂ ಅದನ್ನು ನಿರ್ವಹಿಸಲು ಜಡ್ಡು ವಿಫಲವಾದರು. ಮಾಹಿ ಬಳಿಕ ಸಿಎಸ್‌ಕೆ ನಾಯಕತ್ವಕ್ಕೆ ಜಡೇಜಾ ಹೆಸರು ಕೇಳಿ ಬರುತ್ತಿದೆಯಾದರೂ ಅದರ ಜೊತೆಗೆ ಅಜಿಂಕ್ಯಾ ರಹಾನೆ ಹಾಗೂ ಬೆನ್ ಸ್ಟೋಕ್ಸ್ ಹೆಸರುಗಳು ಕೂಡ ನಾಯಕತ್ವದ ಸ್ಪರ್ಧೆಯಲ್ಲಿ ಕೇಳಿ ಬರುತ್ತಿದೆ.

Story first published: Friday, February 24, 2023, 9:54 [IST]
Other articles published on Feb 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+