Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಾಕ್ಷಿ ಕಾಲೆಳೆದ ಧೋನಿ, ವಿಡಿಯೋ ಮೂಲಕ ನೆನಪು ಹಂಚಿಕೊಂಡ ಮಾಹಿ

MS Dhoni Shared Old Video With Wife Sakshi

ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಬಳಿಕ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಮಹೇಂದ್ರ ಸಿಂಗ್ ಧೋನಿ ತಮ್ಮ ಖಾಸಗಿ ಬದುಕನ್ನು ತುಂಬಾ ಚೆನ್ನಾಗಿ ಎಂಜಾಯ್ ಮಾಡ್ತಿದ್ದಾರೆ. ಪತ್ನಿ ಸಾಕ್ಷಿ ಹಾಗೂ ಮಗಳು ಝೀವಾ ಜೊತೆ ಕಾಲ ಕಳೆಯುತ್ತಾ ಜಾಲಿ ಮೂಡ್‌ನಲ್ಲಿದ್ದಾರೆ. ಈ ವೇಳೆ ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಪತ್ನಿ ಸಾಕ್ಷಿಯ ಕಾಲನ್ನು ಎಳೆದಿದ್ದಾರೆ.

ಸದ್ಯ ಕ್ರಿಕೆಟ್‌ನಿಂದ ಹೊರಗಿದ್ದರೂ ಸದಾ ಸುದ್ದಿಯಲ್ಲಿರುವ ಮಹೇಂದ್ರ ಸಿಂಗ್ ಧೋನಿ, ಇದ್ದಕ್ಕಿದ್ದಂತೆ ತಮ್ಮ ಹಳೆಯ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಾಕ್ಷಿ ಏನೋ ಸಂವಾದವೊಂದನ್ನು ಓದಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದನ್ನು ಸರಿಯಾಗಿ ಹೇಳಲು ಸಾಧ್ಯವಾಗದೇ ಪದೇ ಪದೇ ಕಾಗದವನ್ನು ನೋಡಿಕೊಂಡು ಹೇಳುತ್ತಿದ್ದಾರೆ. ಪಕ್ಕದಲ್ಲೇ ಇದ್ದ ಮಹೇಂದ್ರ ಸಿಂಗ್ ಧೋನಿ ಈ ಕುರಿತಾಗಿ ಸಾಕ್ಷಿಯ ಕಾಲೆಳೆದಿದ್ದಾರೆ.

ಈ ವಿಡಿಯೋ ಜಾಹೀರಾತು ಶೂಟಿಂಗ್ ವೇಳೆ ತೆಗೆಯಲಾಗಿದ್ದು, ಪೆಟ್ರೋಲ್ ಬಂಕ್‌ವೊಂದರಲ್ಲಿ ಸಾಕ್ಷಿ ಹಾಗೂ ಧೋನಿ ಕುಳಿತುಕೊಂಡು ಸಂವಾದವೊಂದನ್ನು ಪೂರ್ವಾಭ್ಯಾಸ ಮಾಡುತ್ತಿದ್ದಾರೆ. ಈ ವೇಳೆ ಸಂವಾದವನ್ನು ಓದುತ್ತಿದ್ದ ಸಾಕ್ಷಿ ಅಭ್ಯಾಸ ಮಾಡುತ್ತಾ ತೊದಲುತ್ತಿದ್ದಾರೆ. ಕ್ಯಾಮೆರಾವನ್ನು ನೋಡದೇ ಸಾಕ್ಷಿ ಕಾಗದವನ್ನು ನೋಡಿಕೊಂಡು ಹೇಳುತ್ತಿದ್ದರು. ಇದನ್ನು ನೋಡಿದ ಪತಿ ಧೋನಿ ಹಾಗೂ ಸುತ್ತಮುತ್ತಲಿನ ಜನರು ನಗುತ್ತಾರೆ.

ಸಾಕ್ಷಿ ಎರಡರಿಂದ ಮೂರು ಬಾರಿ ಪ್ರಯತ್ನಿಸಿದರೂ ಸರಿಯಾಗಿ ಸಂಭಾಷಣೆ ಹೇಳಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಸಾಕ್ಷಿಗೆ ಸಲಹೆ ನೀಡುತ್ತಲೇ ಧೋನಿ ಪತ್ನಿಯ ಕಾಲೆಳೆದಿದ್ದಾರೆ. ಹಾಗಿದ್ದರೆ ಧೋನಿ ಹೇಳಿದ್ದೇನು ಎಂಬುದನ್ನ ಈ ವಿಡಿಯೋದಲ್ಲಿ ನೋಡಿ

ಈ ವಿಡಿಯೋ ಇತ್ತೀಚಿನ ವಿಡಿಯೋ ಏನಲ್ಲ. ಕಳೆದ ಒಂದು ವರ್ಷದ ಹಳೆಯ ವಿಡಿಯೋ ಇದಾಗಿದ್ದು, 'ಸಮಯ ಓಡುತ್ತಿದೆ ಇದು ಒಂದು ವರ್ಷದ ಹಳೆಯ ವಿಡಿಯೋ' ಎಂದು ಧೋನಿ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

Story first published: Tuesday, December 17, 2019, 14:17 [IST]
Other articles published on Dec 17, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+