Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೆನ್ನೈನಲ್ಲಿ ಪಂದ್ಯ ಮುಗಿದ ಬಳಿಕ 'ಕಿಂಗ್' ಧೋನಿ ಮಾಡಿದ್ದೇನು?

ಚೆನ್ನೈ, ಸೆ. 19: ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂಗೆ ಮಾಜಿ ನಾಯಕ ಎಂಎಸ್ ಧೋನಿ ಅವರು ಆಡಲು ಮೈದಾನಕ್ಕೆ ಕಾಲಿಡುತ್ತಿದ್ದಂತೆ 'ಕಿಂಗ್' ಬಂದರು ಎಂದರು ಸ್ವಾಗತಿಸಿ ಟ್ವೀಟ್ ಮಾಡಿದ್ದ ಬಿಸಿಸಿಐ, ಮತ್ತೊಮ್ಮೆ ಧೋನಿ ಇರುವ ಚಿತ್ರವೊಂದನ್ನು ಟ್ವೀಟ್ ಮಾಡಿ ಅಭಿಮಾನಿಗಳ ಮೆಚ್ಚುಗೆ ಪಡೆದುಕೊಂಡಿದೆ.

ಕ್ರಿಕೆಟ್ ನಲ್ಲಿ ವಿಶಿಷ್ಟವಾದ 'ಶತಕ' ಬಾರಿಸಿದ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿಯಾಗಿ ಬ್ಯಾಟ್ ಬೀಸಿದ ಬಳಿಕ ಏನು ಮಾಡಿದರು? ತಂಡದ ಜತೆ ಕೋಲ್ಕತಾಗೆ ಪ್ರಯಾಣ ಬೆಳೆಸಿದರು. ಈಗ ಟೀಂ ಇಂಡಿಯಾ ಕೋಲ್ಕತಾ ತಲುಪಿದ್ದು, ಸೆ. 21ರಂದು ಎರಡನೇ ಏಕದಿನ ಪಂದ್ಯವಾಡಲಿದೆ.

See pic: MS Dhoni sleeps on the floor, Virat Kohli and boys relax at Chennai airport

ಆದರೆ, ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ಟೀಂ ಇಂಡಿಯಾಕ್ಕೆ ವಿಮಾನ ವಿಳಂಬವಾಗಿದೆ ಎಂಬ ಸುದ್ದಿ ಸಿಕ್ಕಿದೆ. ತಡಮಾಡದ ಧೋನಿ, ಅಲ್ಲೇ ನೆಲದ ಮೇಲೆ ಮಲಗಿಕೊಂಡಿದ್ದಾರೆ. ಅವರ ಅಕ್ಕ ಪಕ್ಕದಲ್ಲಿ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮುಂತಾದವರು ಕುಳಿತು ಹರಟೆ ಹೊಡೆದು ಸಮಯ ಕಳೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು 26ರನ್ ಗಳಿಂದ ಗೆದ್ದ ಭಾರತ ತಂಡ, ಸರಣಿಯಲ್ಲಿ 1-0 ಮುನ್ನಡೆ ಗಳಿಸಿ ವಿಶ್ರಾಂತಿ ಪಡೆಯುತ್ತಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಖಾತೆಯಿಂದ ಚಿತ್ರವನ್ನು ಟ್ವೀಟ್ ಮಾಡಿದೆ.

ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಲಂಕಾದ ಪ್ರೇಕ್ಷಕರು ಬಾಟಲಿ, ಕಲ್ಲು ಎಸೆದಿದು ಪಂದ್ಯಕ್ಕೆ ಅಡ್ಡಿಪಡಿಸಿದ ಸಂದರ್ಭದಲ್ಲಿ ಮೈದಾನದಲ್ಲಿ ಆಡುತ್ತಿದ್ದ ಧೋನಿ, ಅಲ್ಲೇ ಮಲಗಿದ್ದರು. ಪಂದ್ಯ ಅರ್ಧ ಗಂಟೆ ಸ್ಥಗಿತಗೊಂಡು ನಂತರ ಆರಂಭವಾಗಿತ್ತು.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+