ಕ್ರಿಕೆಟ್ ನಲ್ಲಿ ವಿಶಿಷ್ಟವಾದ 'ಶತಕ' ಬಾರಿಸಿದ ಧೋನಿ

Posted By:

ಚೆನ್ನೈ, ಸೆ. 17: ಟೀಂ ಇಂಡಿಯಾ ಅತ್ಯಂತ ಯಶಸ್ವಿ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಎಸ್ ಧೋನಿ ಅವರು ಮತ್ತೊಂದು ದಾಖಲೆ ಬರೆದಿದ್ದಾರೆ. ವಿಕೆಟ್ ಕೀಪರ್ ಆಗಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ನೂರನೇ ಸ್ಟಂಪಿಂಗ್ ಸಾಧನೆ ಮಾಡಿದ್ದರು. ಈಗ ಎಲ್ಲಾ ಮಾದರಿ ಸೇರಿ ನೂರನೇ ಅರ್ಧಶತಕ ಸಾಧಿಸಿದ್ದಾರೆ.

ಸ್ಕೋರ್ ಕಾರ್ಡ್

ಆಸ್ಟ್ರೇಲಿಯಾ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಭಾನುವಾರದಂದು ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗ, ಧೋನಿ ಅವರು ಅರ್ಧಶತಕ ಗಳಿಸಿ ಆಸರೆಯಾದರು.

MS Dhoni completes 100 fifties in international cricket

79 ರನ್ ಸಿಡಿಸಿದ ಧೋನಿ ಅವರು ಏಕದಿನ ಕ್ರಿಕೆಟ್‌ ನಲ್ಲಿ 66ನೇ ಅರ್ಧ ಶತಕ ಗಳಿಸಿದರು.ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 66 ಅರ್ಧ ಶತಕ(302ನೇ ಏಕದಿನ ಪಂದ್ಯ), 90ಟೆಸ್ಟ್‌‌ ನಲ್ಲಿ 33 ಅರ್ಧ ಶತಕ ಹಾಗೂ 78 ಟಿ-20 ಪಂದ್ಯಗಳಿಂದ ಒಂದು ಅರ್ಧ ಶತಕ ಸಿಡಿಸಿ ಒಟ್ಟು ನೂರು ಅರ್ಧಶತಕ ಗಳಿಸಿದ ಸಾಧನೆ ಮಾಡಿದರು.

ಇದಕ್ಕೂ ಮೊದಲು ಭಾರತದ ಸಚಿನ್‌ ತೆಂಡೂಲ್ಕರ್‌‌(164), ರಾಹುಲ್‌ ದ್ರಾವಿಡ್‌(146) ಹಾಗೂ ಸೌರವ್ ಗಂಗೂಲಿ(107) ಈ ಸಾಧನೆ ಮಾಡಿದ್ದಾರೆ.

ಮೊದಲ ಪಂದ್ಯದ ವರದಿ

ಧೋನಿ ಅವರು ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ತವರು ನೆಲದಲ್ಲಿ 4,000ರನ್ ಪೂರೈಸಿದರು. ಸಚಿನ್ ನಂತರ ಈ ಸಾಧನೆ ಮಾಡಿದ ಭಾರತೀಯ ಕ್ರಿಕೆಟರ್ ಆಗಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ 9,737ರನ್ ಗಳಿಸಿರುವ ಧೋನಿ ಅವರು 263ರನ್ ಗಳಿಸಿ 10 ಸಾವಿರ ರನ್ ಗಡಿ ದಾಟುವ ದಿನವನ್ನು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

Story first published: Sunday, September 17, 2017, 21:37 [IST]
Other articles published on Sep 17, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ