ಮನೆಗೆ ಹಳದಿ ರಂಗು ತುಂಬಿ ಅಭಿಮಾನ ಮೆರೆದ ಧೋನಿ ಸೂಪರ್ ಫ್ಯಾನ್

ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಮೇಲಿನ ಅಭಿಮಾನವನ್ನು ಬೇರೇ ಬೇರೆ ರೀತಿಯಾಗಿ ವ್ಯಕ್ತಪಡಿಸುವುದು ಸಾಮಾನ್ಯವೇ ಆಗಿದೆ. ಕೆಲ ಅಭಿಮಾನಿಗಳು ಅತಿರೇಕವಾಗಿ ವರ್ತಿಸಿದರೆ ಇನ್ನೂ ಕೆಲವರು ಎಲ್ಲರೂ ಮೆಚ್ಚವಂತಾ ರೀತಿಯಲ್ಲಿ ಅಭಿಮಾನವನ್ನು ಮೆರೆಯುತ್ತಾರೆ. ಇಲ್ಲೊಬ್ಬರು ಧೋನಿಯ ಅಭಿಮಾನಿ ತಮ್ಮದೇ ರೀತಿಯಲ್ಲಿ ಅಭಿಮಾನವನ್ನು ತೋರ್ಪಡಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಧೋನಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಈ ಅಭಿಮಾನಿ ಮಾತ್ರ ಹೆಚ್ಚು ಸುದ್ದಿಯಾಗಿದ್ದಾರೆ. ಅದಕ್ಕೆ ಕಾರಣ ಅವರ ಮನೆ ಹಾಗೂ ಅದಕ್ಕೆ ಬಳಿದಿರುವ ಬಣ್ಣ. ಈ ಮೂಲಕ ಧೋನಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಅರಂಗೂರು ಎಂಬಲ್ಲಿನ ಗೋಪಿ ಕೃಷ್ಣನ್ ಎಂಬವರೇ ಧೋನಿ ಮೇಲಿನ ಅಭಿಮಾನದಿಂದ ಸುದ್ದಿಯಾದವರು. ಚೆನ್ನೈ ಸೂಪರ್ ಕಿಂಗ್ಸ್ ಹಾಗೀ ಧೋನಿಯ ಅಪ್ಪಟ ಅಭಿಮಾನಿಯಾಗಿರುವ ಇವರು ಸಂಪೂರ್ಣ ಮನೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಣ್ಣವಾದ ಹಳದಿ ಹಾಗೂ ಧೋನಿಯ ಕಲಾಚಿತ್ರದಿಂದ ತುಂಬಿದ್ದಾರೆ.
ಈ ಮನೆಗೆ ಗೋಪಿ ಕೃಷ್ಣನ್ ಅವರು "ಧೋನಿಯ ಅಭಿಮಾನಿಯ ಮನೆ" ಎಂದೇ ಬರೆಸಿಕೊಂಡಿದ್ದಾರೆ. ಸಂಪೂರ್ಣ ಹಳದಿ ಬಣ್ಣ ಹಾಗೂ ಧೋನಿಯ ಚಿತ್ರ ಹಾಗೂ ಸಿಎಸ್‌ಕೆ ಲೋಗೋವನ್ನು ಹೊಂದಿರುವ ಈ ಮನೆ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಈ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆಗಳು ಬರುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications