Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಎಸ್ ಧೋನಿ ರಣ ತಂತ್ರ ಇಂದಿಗೂ ಎಂದೆಂದಿಗೂ

ಸಿಡ್ನಿ, ಮಾ.25: ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಹೊಸ ರಣತಂತ್ರವನ್ನು ರೂಪಿಸಿದ್ದಾರೆ. ಆಸೀಸ್ ವೇಗದ ಬೌಲರ್ ಗಳ ಬೌನ್ಸರ್, ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸುವುದು ಹೇಗೆ ಎಂಬುದನ್ನು ತಂಡಕ್ಕೆ ಧೋನಿ ತೋರಿಸಿಕೊಟ್ಟಿದ್ದಾರೆ. ಧೋನಿ ತಂತ್ರ ಫಲಕೊಡುವುದೇ ಇಲ್ಲವೇ ಮಾ.26ರಂದು ಬೆಳಗ್ಗೆ 9 ಗಂಟೆ ನಂತರ ತಿಳಿಯಲಿದೆ.

ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಸಿಡ್ನಿ ಮೈದಾನದಲ್ಲಿ ಅಭ್ಯಾಸ ನಿರತರಾಗಿದ್ದಾರೆ. ನಾಯಕ ಧೋನಿ ನೆಟ್ ಅಭ್ಯಾಸ ನಡೆಸುತ್ತಿದ್ದ ಬ್ಯಾಟ್ಸ್ ಮನ್ ಗಳ ಬಳಿ ಟೆನಿಸ್ ರಾಕೆಟ್ ಹಿಡಿದುಕೊಂಡು ಬಂದರು. ಟೆನಿಸ್ ರಾಕೆಟ್ ಹಾಗೂ ಟೆನಿಸ್ ಬಾಲ್ ಹಿಡಿದುಕೊಂಡು ಬಂದ ಧೋನಿ ಕಳೆದ ಎರಡು ದಿನಗಳಿಂದ ಆಟಗಾರರಿಗೆ ಉತ್ತಮ ತರಬೇತಿ ನೀಡಿದ್ದಾರೆ. ಧೋನಿ ಜೊತೆಗೆ ಕೋಚ್ ಡಂಕನ್ ಫ್ಲೆಚರ್ ಕೂಡಾ ಸೇರಿದ್ದಾರೆ.

MS Dhoni's tennis racquet formula to handle Australian pacers in World Cup semi-final

ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರಿಗೆ ಟೆನಿಸ್ ಬಾಲ್ ನಲ್ಲಿ ಬೌನ್ಸರ್ ಹಾಕಿ ರಾಕೆಟ್ ಮೂಲಕ ಹೊಡೆಯುವುದು ಹೇಗೆ ಎಂಬುದನ್ನು ಧೋನಿ ತೋರಿಸಿಕೊಟ್ಟಿದ್ದಾರೆ. ಪ್ರತಿದಿನ 15-20 ನಿಮಿಷಗಳ ಕಾಲ ಟೆನಿಸ್ ರಾಕೆಟ್ ಹಿಡಿದು ಕ್ರಿಕೆಟ್ ಪಿಚ್ ನಲ್ಲಿ ಆಟಗಾರ ಆಡಲು ಶುರು ಮಾಡಿದ್ದಾರೆ ಎಂದು ಬಿಸಿಸಿಐ ತನ್ನ ವೆಬ್ ಸೈಟ್ ನಲ್ಲಿ ಹೇಳಿಕೊಂಡಿದೆ.

ರೈನಾ ಟೆನಿಸ್ ರಾಕೆಟ್ ಹಿಡಿದು ಬ್ಯಾಟಿಂಗ್ ಮಾಡುವುದನ್ನು ಕಂಡ ಶಿಖರ್ ಧವನ್ ಕೂಡಾ ಇದೇ ರೀತಿ ಅಭ್ಯಾಸ ಮಾಡಲು ಪ್ರಾರಂಭಿಸಿದ್ದಾರೆ. ಈ ನಡುವೆ ಆಸ್ಟ್ರೇಲಿಯಾ ಆಟಗಾರರ 'ಸ್ಲೇಡ್ಜಿಂಗ್' ಗೆ ಕಿವಿಗೊಡದಂತೆ ಧೋನಿ ಕಿವಿಮಾತು ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+