Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MS Dhoni: ಈ ವಿಷಯದಲ್ಲಿ ಧೋನಿ ಎಲ್ಲರಿಗೂ ಮಾದರಿ

ಮೈದಾನದಲ್ಲಿ ತಮ್ಮ ಬಿರುಸಿನ ಆಟದ ಮೂಲಕ ಅಪಾರ ಅಭಿಮಾನಿಗಳನ್ನು ಗೆದ್ದಿರುವ ಆಟಗಾರ ಮಹೇಂದ್ರ ಸಿಂಗ್ ಧೋನಿ. ಈ ಬಾರಿಯ ಐಪಿಎಲ್‌ನಲ್ಲಿ ಇನ್ನು ಒಂದೇ ಒಂದು ಪಂದ್ಯವನ್ನು ಆಡದೇ ಸುದ್ದಿಯಲ್ಲಿದ್ದಾರೆ. ಆದರೆ ಈಗ ಅವರು ಬೇರೆ ಸುದ್ದಿಯಿಂದ ಭಾರೀ ಸದ್ದು ಮಾಡುತ್ತಿದ್ದಾರೆ. ಈ ಮೂಲಕ ಧೋನಿ ಮೈದಾನದಲ್ಲಿ ಮಾತ್ರವಲ್ಲ, ಮೈದಾನದ ಹೊರಗೂ ದೇಶದ ಜವಾಬ್ದಾರಿಯುತ ಪ್ರಜೆ ಎಂಬುದನ್ನು ಸಾರಿ ಹೇಳಿದ್ದಾರೆ.

ಹಿಂದುಳಿದ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬಿಹಾರ ಹಾಗೂ ಜಾರ್ಖಂಡ್ 2025-26ರ ವರ್ಷದಲ್ಲಿ ಒಟ್ಟು 20000 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿದೆ. ಜಾರ್ಖಂಡ್್‌ನಿಂದ 12 ಸಾವಿರ ಕೋಟಿ ರೂ. ಹಾಗೂ ಬಿಹಾರದಿಂದ 8 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. ವರದಿಯ ಪ್ರಕಾರ ಈ ಎರಡೂ ರಾಜ್ಯಗಳಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟಿದ ಖ್ಯಾತಿ ಕೂಲ್‌ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಲ್ಲುತ್ತದೆ.

MS Dhoni

ಸಂಗ್ರಹಿಸಲಾದ ತೆರಿಗೆಯಲ್ಲಿ ಶೇಕಡಾ 70 ರಷ್ಟು ಮೊತ್ತವು ವೇತನ, ಕಾರ್ಪೊರೇಟ್‌ ಸಂಸ್ಥೆಗಳು, ಸಂಘಟಿತ ವಲಯದ ಮೂಲಕ ಟಿಡಿಎಸ್‌ ರೂಪದಲ್ಲಿ ಬಂದಿದೆ. ರಾಂಚಿ ಮೂಲದ ಮಹೇಂದ್ರ ಸಿಂಗ್ ಧೋನಿ ಒಂದು ದಶಕಗಳಿಗೂ ಹೆಚ್ಚು ಕಾಲ ಅತಿ ಹೆಚ್ಚು ವೈಯಕ್ತಿಕ ತೆರಿಗೆ ಪಾವತಿಸಿದವರ ಪಟ್ಟಿಯಲ್ಲಿ ಈ ಭಾಗದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ತೆರಿಗೆ ಕಟ್ಟುವಲ್ಲೂ ನಂಬರ್ 1

ಮಹೇಂದ್ರ ಸಿಂಗ್ ಧೋನಿ 2007-08 ರಿಂದ ತೆರಿಗೆ ಪಾವತಿಸುವಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. 2017-18 ರ ಸಾಲಿನಲ್ಲಿ ಧೋನಿ ಅಂದಾಜು 12.17 ಕೋಟಿ ರೂ. ತೆರಿಗೆ ಕಟ್ಟಿದ್ದಾರೆ. ಆದರೆ ಈ ಹಣಕಾಸು ವರ್ಷದಲ್ಲಿ ಧೋನಿ ಎಷ್ಟು ತೆರಿಗೆ ಕಟ್ಟಿದ್ದಾರೆ ಎಂದು ಅಧಿಕಾರಿಗಳು ಬಹಿರಂಗ ಪಡಿಸಿಲ್ಲ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ವರ್ಷಗಳೇ ಕಳೆದಿವೆ. ಆದರೂ ತೆರಿಗೆ ಕಟ್ಟುವ ವಿಚಾರದಲ್ಲಿ ಇವರೇ ಬಿಹಾರ-ಜಾರ್ಖಂಡ್್ ಪ್ರಾಂತ್ಯದಲ್ಲಿ ನಂಬರ್ 1.

ಆದಾಯದ ಮೂಲ

ಮಹೇಂದ್ರ ಸಿಂಗ್ ಧೋನಿ ಅವರ ನಿವ್ವಳ ಮೌಲ್ಯ ₹1,000 ಕೋಟಿಯಿಂದ ₹1,200 ಕೋಟಿಯವರೆಗೆ ಇದೆ ಎಂದು ಅಂದಾಜಿಸಲಾಗಿದೆ. ಜಾಹೀರಾತು ಒಪ್ಪಂದ, ರಾಂಚಿಯಲ್ಲಿ ಹೋಟೆಲ್ ಮಾಹಿ ರೆಸಿಡೆನ್ಸಿ, ಸ್ಪೋರ್ಟ್ಸ್‌ಫಿಟ್ ಜಿಮ್‌ಗಳು, ಸ್ಪೋರ್ಟ್ಸ್‌ವೇರ್ ಲೇಬಲ್ ಸೆವೆನ್, ಪ್ರೊಡಕ್ಷನ್ ಹೌಸ್ ನಂತಹ ವಿವಿಧ ಉದ್ಯಮದಿಂದ ಧೋನಿ ಹಣವನ್ನು ಗಳಿಸುತ್ತಿದ್ದಾರೆ.

MS Dhoni

ಮಹೇಂದ್ರ ಸಿಂಗ್ ಧೋನಿ ತಮ್ಮ 44ನೇ ವರ್ಷದಲ್ಲೂ ಫಿಟ್ ಆಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಇನ್ನು ಕಣಕ್ಕೆ ಇಳಿದಿಲ್ಲ. ಮಾಹಿ ಅಭಿಮಾನಿಗಳು ಇವರು ಕಣಕ್ಕೆ ಇಳಿಯುವುದು ಯಾವಾಗ ಎಂದು ಎದುರು ನೋಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಐಕಾನಿಕ್ ಪ್ಲೇಯರ್ ಧೋನಿ, ಐಪಿಎಲ್‌ನ ಯಶಸ್ವಿ ನಾಯಕರಲ್ಲಿ ಒಬ್ಬರು. ಇವರ ಮುಂದಾಳತ್ವದಲ್ಲಿ ಸಿಎಸ್‌ಕೆ ಐದು ಬಾರಿ ಐಪಿಎಲ್‌ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

Story first published: Saturday, May 9, 2026, 11:31 [IST]
Other articles published on May 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+