ಬೆಂಗಳೂರಿನ ಅಭಿಮಾನಿಗಳಿಗೆ ನಿರಾಸೆ: ಆರಂಭಿಕ ಪಂದ್ಯಗಳಿಗೆ ಧೋನಿ ಅಲಭ್ಯ
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿದೆ. ಈ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೈದಾನಕ್ಕೆ ಇಳಿಯುವ ಮುನ್ನವೇ ಪೆಟ್ಟು ಬಿದ್ದಿದೆ. ಚೆನ್ನೈ ತಂಡದ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ಆರಂಭಿಕ ಎರಡು ವಾರಗಳು ಮೈದಾನಕ್ಕೆ ಇಳಿಯುತ್ತಿಲ್ಲ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಆರಂಭಿಕ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ಎಂದು ಫ್ರಾಂಚೈಸಿ ಖಚಿತ ಪಡಿಸಿದೆ. ಇದರಿಂದ ಎಂಎಸ್ ಧೋನಿ ಅವರನ್ನು ನೋಡಲು ಉತ್ಸುಕರಾಗಿದ್ದ ಬೆಂಗಳೂರಿನ ಅಭಿಮಾನಿಗಳಿಗೆ ನಿರಾಸೆ ಆಗಿದೆ.
ಮಹೇಂದ್ರ ಸಿಂಗ್ ಧೋನಿ ಕಳೆದ ಕೆಲವು ವರ್ಷಗಳಿಂದ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇವರು ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಚೆನ್ನೈ ತಂಡದ ಪರ ಕಣಕ್ಕೆ ಇಳಿಯುತ್ತಿಲ್ಲ. ಧೋನಿ ಅವರ ಅನುಪಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್ ಅಥವಾ ಉರ್ವಿಲ್ ಪಟೇಲ್ ವಿಕೆಟ್ ಕೀಪಿಂಗ್ ಕಾರ್ಯವನ್ನು ಮಾಡುವ ಸಾಧ್ಯತೆ ಇದೆ.

ಯಾವೆಲ್ಲಾ ಪಂದ್ಯಗಳನ್ನು ಧೋನಿ ಮಿಸ್ ಮಾಡಿಕೊಳ್ಳಲಿದ್ದಾರೆ?
ಮಾರ್ಚ್ 30, ಸಿಎಸ್‌ಕೆ ವಿರುದ್ಧ ರಾಜಸ್ಥಾನ್ ರಾಯಲ್ಸ್
ಏಪ್ರಿಲ್ 3, ಸಿಎಸ್‌ಕೆ ವಿರುದ್ಧ ಪಂಜಾಬ್ ಕಿಂಗ್ಸ್
ಏಪ್ರಿಲ್ 5, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸಿಎಸ್‌ಕೆ
ಏಪ್ರಿಲ್ 11, ಸಿಎಸ್‌ಕೆ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್
ಆರಂಭಿಕ ಪಂದ್ಯಗಳಲ್ಲಿ ಧೋನಿ ಅವರ ಅನುಪಸ್ಥಿತಿ ನಿಶ್ಚಿತವಾಗಿ ಸಿಎಸ್‌ಕೆ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ. ಅದರಲ್ಲೂ ಫಿನಿಷರ್ ಹಾಗೂ ಲೀಡರ್‌ಶಿಪ್ ಗುಣಗಳನ್ನು ಚೆನ್ನೈ ಮಿಸ್ ಮಾಡಿಕೊಳ್ಳಲಿದೆ.
ಧೋನಿ ಅವರು 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇವರು ಈಗಲೂ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಧೋನಿ ಅವರು ಆಡಿದ 14 ಪಂದ್ಯಗಳಲ್ಲಿ 196 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 135 ಆಗಿದೆ. ರುತುರಾಜ್ ಗಾಯಕ್ವಡ್ ಅವರು ಗಾಯದ ಸಮಸ್ಯೆಯಿಂದ ಕಳೆದ ಆವೃತ್ತಿಯಲ್ಲಿ ಮೈದಾನದಿಂದ ದೂರ ಉಳಿದಾಗ ಧೋನಿ ತಂಡವನ್ನು ಮುನ್ನಡೆಸಿದ್ದರು.
ವಿಕೆಟ್ ಕೀಪರ್ ಯಾರು?
44 ವರ್ಷದ ಧೋನಿ ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ಹೊರುವ ಸಾಧ್ಯತೆ ಇದೆ. ಸಂಜು ಅವರನ್ನು ರಾಜಸ್ಥಾನ ರಾಯಲ್ಸ್‌ನಿಂದ ಚೆನ್ನೈ ತಂಡ ಹರಾಜಿಗಿಂತ ಮುನ್ನ ಟ್ರೇಡ್ ಮಾಡಿತ್ತು. ಇನ್ನು ಚೆನ್ನೈ ತಂಡ 27 ವರ್ಷದ ಉರ್ವಿಲ್ ಪಟೇಲ್ ಅವರಿಗೂ ಅವಕಾಶ ನೀಡುವ ಸಾಧ್ಯತೆ ಇದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮೊದಲ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಮಾರ್ಚ್ 30 ರಂದು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications