ಧೋನಿ ಟೆಸ್ಟ್‌ನಲ್ಲಿ ಮೊದಲ ಶತಕ ಸಿಡಿಸಿದ ದಿನವೇ ನಿವೃತ್ತಿ ಹೇಳುತ್ತೇನೆ ಎಂದಿದ್ದರು: ವಿವಿಎಸ್ ಲಕ್ಷ್ಮಣ್

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಹಾಗೂ ಆಟಗಾರನಾಗಿ ಸಾಕಷ್ಟು ಸ್ಮರಣೀಯ ಕ್ಷಣಗಳನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನೀಡಿದ್ದಾರೆ. ಒಂದೂವರೆ ದಶಕದ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ನಂತರ ಕಳೆದ ಶನಿವಾರ ಸ್ವಾತಂತ್ರ್ಯೋತ್ಸವ ದಿನದಂದು ನಿವೃತ್ತಿಯನ್ನು ಘೋಷಿಸಿದ್ದಾರೆ.
ಆದರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ವಿಚಿತ್ರ ಸನ್ನಿವೇಶವೊಂದನ್ನು ನೆನಪಿಸಿಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ತನ್ನ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನ ಚೊಚ್ಚಲ ಶತಕವನ್ನು ಸಿಡಿಸಿದ ದಿನವೇ ನಿವೃತ್ತಿ ಘೋಷಿಸಿಬಿಡುತ್ತೇನೆ ಎಂದಿದ್ದರು ಎಂಬ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಚೊಚ್ಚಲ ಟೆಸ್ಟ್ ಸಿಡಿಸಿದ ದಿನವೇ ನಿವೃತ್ತಿಯ ಮಾತುಗಳನ್ನೇಕೆ ಆಡಿದ್ದರು. ಅಮದು ನಡೆದಿದ್ದೇನು ಎಂಬುದನ್ನು ಸಂಪೂರ್ಣವಾಗಿ ಮುಂದೆ ಓದಿ

ಫೈಸಲಾಬಾದ್‌ನಲ್ಲಿ ನಡೆದ ಪಂದ್ಯ
ಅದ್ಭುತ ನಾಯಕ ಎಂದು ಕರೆಸಿಕೊಂಡಿರುವ ಧೋನಿ ತನ್ನಲ್ಲಿರುವ ಫಿನಿಷಿಂಗ್ ಕಲೆಯ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಹತ್ತಿರವಾದವರು. ಕ್ರಿಕೆಟ್ ಬದುಕಿನ ಆರಂಭದಲ್ಲಿ ಬೃಹತ್ ಸಿಕ್ಸರ್‌ಗಳ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಿದ್ದರು. ಅದರಲ್ಲಿ ಒಂದು 2006ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಫೈಸಲಾಬಾದ್‌ನಲ್ಲಿ ನಡೆದ ಟೆಸ್ಟ್ ಪಂದ್ಯ.

ಪಠಾಣ್ ಜೊತೆಗೂಡಿ ಧೋನಿ ಸಾಹಸ
ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಇನ್ಜಮಾಮ್ ಉಲ್ ಹಕ್ ಹಾಗೂ ಶಾಹಿದ್ ಅಫ್ರಿದಿ ಶತಕದ ನೆರವಿನಿಂದ 588 ರನ್ ಗಳಿಸಿತ್ತು. ಭಾರತ ಭ್ಯಾಟಿಂಗ್‌ಗೆ ಇಳಿದಾಗ ಧೋನಿ 6ನೇ ವಿಕೆಟ್‌ಗೆ ಇರ್ಫಾನ್ ಪಠಾಣ್ ಜೊತೆಗೂಡಿದರು. ಈ ಪಂದ್ಯದಲ್ಲಿ ಚೊಚ್ಚಲ ಶತಕವನ್ನು ಸಿಡಿಸಿದ್ದರು. ಭರ್ಜರಿ 148 ರ್‌ಗಳಿಸಿದ ಬಳಿಕ ಸ್ಪಿನ್ನರ್ ದಾನಿಶ್ ಕನೆರಿಯಾಗೆ ವಿಕೆಟ್ ಒಪ್ಪಿಸಿದ್ದರು.

ನಿವೃತ್ತಿ ಬಗ್ಗೆ ಮಾತು
ವಿಕೆಟ್ ಒಪ್ಪಿಸಿ ಡ್ರೆಸ್ಸಿಂಗ್ ರೂಮ್‌ಗೆ ಬಂದ ಮಹೇಂದ್ರ ಸಿಂಗ್ ಧೋನಿ ತನ್ನ ಪ್ರದರ್ಶನದಿಂದ ಸಂತೋಷಗೊಂಡು ನಿವೃತ್ತಿಯ ಬಗ್ಗೆ ತಮಾಷೆಯಾಗಿ ಮಾತುಗಳನ್ನಾಡಿದ್ದರು. ಈ ವಿಚಾರವನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹಂಚಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಇಷ್ಟು ಸಾಕು
"ನನಗೆ ತುಂಬಾ ಚೆನ್ನಾಗಿ ನೆನಪಿದೆ. ತನ್ನ ಮೊದಲ ಶತಕವನ್ನು ಸಿಡಿಸಿದ ಬಳಿಕ ಧೋನಿ ಡ್ರೆಸ್ಸಿಂಗ್ ರೂಮ್‌ಗೆ ಬಂದು ಜೋರಾಗಿ 'ನಾನು ನನ್ನ ನಿವೃತ್ತಿಯನ್ನು ಘೋಷಿಸಿಬಿಡುತ್ತೇನೆ, ನಾನು ಟೆಸ್ಟ್‌ನಲ್ಲಿ ಶತಕವನ್ನು ಬಾರಿಸಿದ್ದೇನೆ, ಇಷ್ಟು ಸಾಕು" ಎಂದು ಹೇಳಿದ್ದರು ಎಂದು ವಿವಿಎಸ್ ಲಕ್ಷ್ಮಣ್ ಸ್ಟಾರ್ ಸ್ಪೊರ್ಟ್ಸ್‌ನ ಕ್ರಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಧೋನಿ ಇದ್ದಿದ್ದೇ ಹಾಗೆ
ಟೆಸ್ಟ್ ಕ್ರಿಕೆಟ್‌ನಲ್ಲಿ ಇದಕ್ಕಿಂತ ಹೆಚ್ಚಿನದನ್ನು ನಾನು ಬಯಸುವುದಿಲ್ಲ' ಎಂದು ಧೋನಿ ಹೇಳುತ್ತಿದ್ದರೆ ನಾವೆಲ್ಲಾ ಅದನ್ನ ಕೇಳಿ ಆಶ್ಚರ್ಯ ಗೊಂಡಿದ್ದೆವು. ಆದರೆ ಎಂಎಸ್ ಧೋನಿ ಇದ್ದಿದ್ದೇ ಹಾಗೆ ಎಂದು ಲಕ್ಷ್ಮಣ್ ಮುಂದುವರಿಯುತ್ತಾ ಹೇಳಿದರು. ಅಂದಿನ ಪಂದ್ಯವನ್ನು ಭಾರತ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಧೋನಿಯ ಸಾಹಸದಿಂದಾಗಿ ಆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿತ್ತು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications