ಧೋನಿ ಇನ್ನೆಷ್ಟು ಕಾಲ ಐಪಿಎಲ್‌ನಲ್ಲಿ ಆಡ್ತಾರೆ? ಇಲ್ಲಿದೆ ಕುತೂಹಲಕಾರಿ ಉತ್ತರ!

ಬೆಂಗಳೂರು: ಟೀಮ್ ಇಂಡಿಯಾಕ್ಕೆ ಚಾಂಪಿಯನ್ಸ್ ಟ್ರೋಫಿ ಸೇರಿ ಎರಡು ವಿಶ್ವಕಪ್‌ಗಳನ್ನು ಗೆಲ್ಲಿಸಿಕೊಟ್ಟ ಮಾಜಿ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ತಂಡವನ್ನು ವಿಶ್ವ ಮಟ್ಟದಲ್ಲಿ ಮಿನುಗಿಸಿದ್ದ 'ಕೂಲ್ ಕ್ಯಾಪ್ಟನ್'ನ ನಿವೃತ್ತಿ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ನೀಡಿದ್ದು ಸುಳ್ಳಲ್ಲ. ಆದರೆ ತಲೈವಾ ಧೋನಿ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿಲ್ಲ ಅನ್ನೋದು ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿದೆ.
ಟೆಸ್ಟ್ ಕ್ರಿಕೆಟ್‌ಗೆ 2014ರಲ್ಲಿ ನಿವೃತ್ತಿ ಘೋಷಿಸಿದ್ದ ಧೋನಿ ಸದ್ಯ ಉಳಿದೆರಡು ಅಂತಾರಾಷ್ಟ್ರೀಯ ಕ್ರಿಕೆಟ್ ಮಾದರಿಗಳಾದ ಟಿ20ಐ ಮತ್ತು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಐಪಿಎಲ್‌ನಲ್ಲಿ ಧೋನಿ ಇನ್ನೂ ಮುಂದುವರೆಯಲಿದ್ದಾರೆ.
ಧೋನಿ ಇನ್ನೆಷ್ಟು ಕಾಲ ಐಪಿಎಲ್‌ನಲ್ಲಿ ಆಡಲಿದ್ದಾರೆ? ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಸಿ ವಿಸ್ವನಾಥನ್ ಕುತೂಹಲಕಾರಿ ಪ್ರತಿಕ್ರಿಯೆ ನೀಡಿದ್ದಾರೆ.

1929ಕ್ಕೆ ನಿವೃತ್ತಿ ಘೋಷಿಸಿದ್ದರ ರಹಸ್ಯ
ಆಗಸ್ಟ್ 15ರ ಶನಿವಾರ ಎಂಎಸ್ ಧೋನಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸುವಾಗ, 'ನನ್ನನ್ನು ಪ್ರೀತಿಸಿದ್ದಕ್ಕಾಗಿ, ಬೆಂಬಲಿಸಿದಕ್ಕಾಗಿ ಅನಂತ ಧನ್ಯವಾದಗಳು. 1929 ಗಂಟೆಗಳಿಂದ ನಾನು ನಿವೃತ್ತಿಯಾಗಿದ್ದೇನೆಂದು ಪರಿಗಣಿಸಿ,' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು. ಇದರ ಹುಟ್ಟೇನೆಂದು ಹುಡುಕಲಾಯಿತು. 2019ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತು ಹೊರ ಬಿದ್ದಿದ್ದು 19:29ಕ್ಕೆ. ಅಂದರೆ 7: 29 pmಗೆ. ತಂಡದ ಸೋಲಿನಿಂದ ಬೇಸರಗೊಂಡಿದ್ದ ಧೋನಿ ಇದೇ ಸಮಯಕ್ಕೆ ಆಗಸ್ಟ್ 15ರಂದು ನಿವೃತ್ತಿ ಘೋಷಿಸಿದ್ದರು.

ಧೋನೀನ ಬಿಡಲೊಲ್ಲದ ಸಿಎಸ್‌ಕೆ
ಧೋನಿಯ ಐಪಿಎಲ್ ಮೌಲ್ಯ 15 ಕೋ.ರೂ. ಇಷ್ಟು ದೊಡ್ಡ ಬೆಲೆ ಧೋನಿಗಿದೆಯಾದರೂ 2020ರ ಐಪಿಎಲ್ ಆಟಗಾರರ ಹರಾಜಿನ ವೇಳೆ ಸಿಎಸ್‌ಕೆ ಫ್ರಾಂಚೈಸಿ, ಧೋನಿಯನ್ನು ಹರಾಜು ಕಣಕ್ಕಿಳಿಸದೆ ತನ್ನಲ್ಲೇ ಉಳಿಸಿಕೊಂಡಿತ್ತು. ಮುಂದಿನ ಬಾರಿಯೂ ಧೋನಿಯನ್ನು ಉಳಿಸಿಕೊಳ್ಳುತ್ತೇವೆ ಎಂದು ಸಿಎಸ್‌ಕೆ ಸಿಇಒ ಹೇಳಿದ್ದಾರೆ. '2021ರ ಐಪಿಎಲ್‌ಗೂ ನಾವು ಧೋನಿಯನ್ನು ಉಳಿಸಿಕೊಳ್ಳಲು ಯೋಚಿಸಿದ್ದೇವೆ,' ಎಂದು ಕಾಸಿ ವಿಸ್ವನಾಥನ್ ಮಾಹಿತಿ ನೀಡಿದ್ದಾರೆ.

ಇನ್ನೆಷ್ಟು ಕಾಲ ಐಪಿಎಲ್ ಆಡ್ತಾರೆ?
ಎಂಎಸ್ ಧೋನಿ ನಿವೃತ್ತಿಯ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ಮಾಜಿ ಚಾಂಪಿಯನ್ಸ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಸ್ವನಾಥನ್ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ. 'ಆತ (ಧೋನಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರ ಬಿಟ್ಟಿದ್ದಾರೆ. ಅವರಿನ್ನು ಸಿಎಸ್‌ಕೆ ಪರ ಆಡಲಿದ್ದಾರೆ. ಅವರು ಬಯಸಿದಷ್ಟು ಕಾಲ ಸಿಎಸ್‌ಕೆಯಲ್ಲಿ ಆಡಲು ನಾವು ಬಯಸಿದ್ದೇವೆ,' ಎಂದು ಕಾಸಿ ಸ್ವಿಸ್ವನಾಥನ್ ಹೇಳಿದ್ದಾರೆ.

ಮಾಹಿ ಪ್ರಮುಖ ಸಾಧನೆಗಳು
ಹತ್ತಿರ 16 ವರ್ಷಗಳ ವೃತ್ತಿ ಬದುಕು ಕಂಡಿರುವ ಧೋನಿ ಟೀಮ್ ಇಂಡಿಯಾಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಭಾರತದ ಅತೀ ಯಶಸ್ವಿ ನಾಯಕನಾಗಿ ಧೋನಿ ಗುರುತಿಸಿಕೊಂಡಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದು ವಿಶ್ವದಲ್ಲಿ ಮಿನುಗಿತ್ತು. ವಿಕೆಟ್ ಕೀಪಿಂಗ್ ವಿಚಾರದಲ್ಲಿ ಈಗಲೂ ಧೋನಿಗೆ ಸರಿಸಾಟಿ ಆಟಗಾರ ಇಲ್ಲ. ಅಷ್ಟರ ಮಟ್ಟಿಗೆ ಧೋನಿ ಕೀಪಿಂಗ್‌ನಲ್ಲಿ ಪರಿಣತಿ ಸಾಧಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications