ಟೆನಿಸ್ ಟೂರ್ನಮೆಂಟ್ ಗೆದ್ದ ಮಾಜಿ ನಾಯಕ ಎಂಎಸ್ ಧೋನಿ


ರಾಂಚಿ, ಡಿಸೆಂಬರ್ 02: ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗದಿರುವ ಮಾಜಿ ನಾಯಕ ಎಂಎಸ್ ಧೋನಿ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಟೆನಿಸ್ ಆಟವಾಡಿದ್ದಾರೆ. ಬರೀ ಆಡಿದ್ದಷ್ಟೇ ಟೂರ್ನೆಮೆಂಟ್ ನಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಸ್ಥಳೀಯ ಟೆನಿಸ್ ಟೂರ್ನಮೆಂಟ್ ನಲ್ಲಿ ಧೋನಿ ಡಬ್ಬಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ ಎಂಬ ಸುದ್ದಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಲಾಗಿದೆ.
ಜೆಎಸ್ಸಿಎ ಇಂಟರ್ನ್ಯಾಷನಲ್ಸ್ಟೇಡಿಯಂನಲ್ಲಿ ನಡೆದ ಕ್ರಿಕೆಟ್ ಕ್ಲಬ್ ಟೆನ್ನಿಸ್ಟೂರ್ನಿಯಲ್ಲಿ ಧೋನಿ ಅವರು ಡಬಲ್ಸ್ವಿಭಾಗದಲ್ಲಿ ಸ್ಥಳೀಯ ಆಟಗಾರನ ಜೊತೆಗೆ ಆಡಿ, ಚಾಂಪಿಯನ್ ಆಗಿದ್ದಾರೆ. ಈ ಪಂದ್ಯದಲ್ಲಿ ಧೋನಿ ಟೀಮ್ ಎದುರಾಳಿ ತಂಡವನ್ನು 6-3 6-3 ರ ನೇರ ಸೆಟ್ಗಳಿಂದ ಸೋಲಿಸಿದ್ದಾರೆ.
ಈ ಟೂರ್ನಿ ಗೆದ್ದ ಧೋನಿ ಅವರು ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋಗಳನ್ನು ಧೋನಿ ಅವರ ಅಭಿಮಾನಿಗಳು ತಮ್ಮ ಇನ್ಸ್ಟಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿರುವ ಧೋನಿ ಅವರು ಇತ್ತೀಚೆಗೆ ಪ್ರೋ ಕಬಡ್ಡಿ ಲೀಗ್ ಪರ ತೊಡೆ ತಟ್ಟಿ, ಜೈಕಾರ ಹಾಕಿದ್ದರು.
ಆಸ್ಟ್ರೇಲಿಯಾದ ಪ್ರವಾಸದಲ್ಲಿರುವ ಭಾರತ ತಂಡವು ಟಿ20ಐ ಸರಣಿಯನ್ನು 1-1ರಲ್ಲಿ ಡ್ರಾ ಮಾಡಿಕೊಂಡಿದೆ. ಸದ್ಯ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಅಭ್ಯಾಸ ಪಂದ್ಯವಾಡುತ್ತಿದೆ. ಡಿಸೆಂಬರ್ 06ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಮುಂಬರುವ ಏಕದಿನ ಸರಣಿಗೆ ಧೋನಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದ್ದು, ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಅವರು ಸದ್ಯ ತಂಡದಲ್ಲಿರುವ ವಿಕೆಟ್ ಕೀಪರ್ ಗಳಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications