ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ನಾಯಕ ಎಂ.ಎಸ್.ಧೋನಿ ಪಂದ್ಯ ಗೆದ್ದ ಬಳಿಕವೂ ಕ್ರೀಡಾ ಸ್ಫೂರ್ತಿ ಮೆರೆದು ಸುದ್ದಿಯಾಗಿದ್ದಾರೆ.
ಕೆ.ಎಲ್.ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸಿಎಸ್ಕೆ ವಿರುದ್ಧ 10 ವಿಕೆಟ್ಗಳ ಅಂತರದಿಂದ ಭಾರೀ ಸೋಲು ಅನುಭವಿಸಿತು. ಈ ಸೋಲಿನ ಆಘಾತವು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಭಾರೀ ಆಘಾತ ಮೂಡಿಸಿತು.

ಈ ಸೋಲಿನ ಆಘಾತದಲ್ಲಿದ್ದ ತಂಡದ ನಾಯಕ ಕೆ.ಎಲ್.ರಾಹುಲ್ ಹಾಗೂ ಪ್ರಮುಖ ಬ್ಯಾಟ್ಸ್ಮನ್ ಮಾಯಾಂಕ್ ಅಗರ್ವಾಲ್ ಅವರನ್ನು ಧೋನಿ ಪಂದ್ಯದ ನಂತರ ಕ್ರೀಡಾಂಗಣದಲ್ಲಿ ಪ್ರತ್ಯೇಕವಾಗಿ ಭೇಟಿಯಾದರು. ಒಂದಷ್ಟು ಹೊತ್ತು ಗಂಭೀರ ಚರ್ಚೆ ನಡೆಸಿದರು. ಈ ವೇಳೆ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರಿಗೂ ಉಪಯುಕ್ತ ಟಿಪ್ಸ್ ನೀಡಿದರು.

ಒಂದು ತಂಡವಾಗಿ ಪಂಜಾಬ್ ಹೇಗೆ ಆಡಬೇಕಿತ್ತು?, ಎಲ್ಲಿ ಎಡವಿತು? ಮಾಡಿದ ತಪ್ಪುಗಳೇನು? ಏನು ಮಾಡಿದ್ದರೆ ಏನಾಗುತ್ತಿತ್ತು ಎನ್ನುವ ಬಗ್ಗೆ ಧೋನಿ ಮಾತನಾಡಿದ್ದಾರೆ. ಮುಂದೆ ಇದನ್ನೆಲ್ಲಾ ಯಾವ ರೀತಿ ಸರಿಪಡಿಸಿಕೊಳ್ಳಬಹುದು ಎನ್ನುವುದರ ಕುರಿತು ಟಿಪ್ಸ್ ನೀಡಿದ್ದಾರೆ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಧೋನಿ ಕರ್ನಾಟಕದ ಪ್ರತಿಭಾವಂತ ಕ್ರಿಕೆಟಿಗರ ಜತೆಗೆ ಸಂಭಾಷಣೆ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದೆ. ಐಪಿಎಲ್ ಟ್ವಿಟ್ಟರ್ನಲ್ಲಿ ಈ ವಿಡಿಯೋವನ್ನು ಪ್ರಕಟಿಸಲಾಗಿದೆ. ಸದ್ಯ ನಿರಂತರ ಸೋಲಿಗೆ ಕಾರಣವಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಚಿಂತೆಗೆ ಕಾರಣವಾಗಿದೆ.