33 ಎಸೆತಗಳಿಗೆ 80 ರನ್ ಚಚ್ಚಿ 'ಡರ್ಬನ್ ಹೀಟ್' ದಂಗುಬಡಿಸಿದ ಆಸಿಫ್!

ಡರ್ಬನ್, ನವೆಂಬರ್ 19: ಡರ್ಬನ್‌ನ ಕಿಂಗ್ಸ್ಮೆಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮಝನ್ಸಿ ಸೂಪರ್ ಲೀಗ್ ಪಂದ್ಯದಲ್ಲಿ ಕೇಪ್ ಟೌನ್ ಬ್ಲಿಟ್ಜ್ ಪರ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಪಾಕಿಸ್ತಾನ ದಾಂಡಿಗ ಆಸಿಫ್ ಆಲಿ ಅವರು ಎದುರಾಳಿ ಡರ್ಬನ್ ಹೀಟ್ ತಂಡವನ್ನು ದಂಗುಬಡಿಸಿದರು.
ಭಾನುವಾರ (ನವೆಂಬರ್ 18) ನಡೆದಿದ್ದ ಮಝನ್ಸಿ ಸೂಪರ್ ಲೀಗ್ 3ನೇ ಪಂದ್ಯದಲ್ಲಿ ಕೇಪ್ ಟೌನ್ ಬ್ಲಿಟ್ಜ್ ಪ್ರತಿನಿಧಿಸಿದ್ದ ಆಸಿಫ್, ಕೇವಲ 33 ಎಸೆತಗಳಿಗೆ 80 ರನ್ ಚಚ್ಚಿದ್ದರ ಪರಿಣಾಮವಾಗಿ ದರ್ಬನ್ ಹೀಟ್ ವಿರುದ್ಧ ಕೇಪ್ ಟೌನ್ 3 ವಿಕೆಟ್ ಗೆಲುವನ್ನಾಚರಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡರ್ಬನ್ ಹೀಟ್ ತಂಡ, ನಾಯಕ ಅಲ್ಬಿ ಮಾರ್ಕೆಲ್ 45, ಖಯಾ ಜೊಂಡೋ 49, ಮೊರ್ನೆ ವಾನ್ ವೈಕ್ 26 ರನ್ ನೆರವಿನೊಂದಿಗೆ 20 ಓವರ್ ಗಳಲ್ಲಿ 5 ವಿಕೆಟ್ ಕಳೆದು 157 ರನ್ ಪೇರಿಸಿತ್ತು.
ಗುರಿ ಬೆನ್ನತ್ತಿದ್ದ ದಾವಿದ್ ಮಲಾನ್ ನಾಯಕತ್ವದ ಕೇಪ್ ಟೌನ್ ಬ್ಲಿಟ್ಜ್‌ಗೆ ಆರಂಭಿಕ ಆಟಗಾರ ಜನ್ಮಾನ್ ಮಲಾನ್ 31 ರನ್ ಕೊಡುಗೆ ಮಾತ್ರ ಗಮನಾರ್ಹವೆನಿಸಿತ್ತು. ಉಳಿದ ಎಲ್ಲರೂ 12ರೊಳಗೆ ವಿಕೆಟ್ ಒಪ್ಪಿಸಿದ್ದರಿಂದ ಡರ್ಬನ್ ಸೋಲಿನ ಭೀತಿ ಅನುಭವಿಸಿತ್ತು.
ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಎತ್ತಿಕೊಂಡ ಪಾಕಿಸ್ತಾನ ಬ್ಯಾಟ್ಸ್ಮನ್ ಆಸಿಫ್, ಡರ್ಬನ್ ಹೀಟ್ ಗೆಲ್ಲಿಸುವ ಹೊಣೆಗಾರಿಕೆ ಹೊತ್ತುಕೊಂಡರು. 7 ಬೌಂಡರಿ, 5 ಸಿಕ್ಸರ್ ಸೇರಿ 80 ರನ್ ಸಿಡಿಸಿದ ಆಸಿಫ್ ತಂಡದ ಗೆಲುವಿನ ರುವಾರಿ ಎನಿಸಿದರು. ಕೇಪ್ ಟೌನ್ 19.1 ಓವರ್ ನಲ್ಲಿ 7 ವಿಕೆಟ್ ಕಳೆದು 158 ರನ್ ಪೇರಿಸಿ ಗೆಲುವಿನ ನಗು ಬೀರಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications