ರಾಸ್ಸಿ ಅಬ್ಬರ, ಎಬಿಡಿ ಬಳಗದೆದುರು ಜೋಝಿ ಸ್ಟಾರ್ಸ್ ದಾಖಲೆ ರನ್ ಜಯ!

ಜೊಹಾನ್ಸ್ ಬರ್ಗ್, ಡಿಸೆಂಬರ್ 12: ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿರುವ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಮಝನ್ಸಿ ಸೂಪರ್ ಲೀಗ್ 28ನೇ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ನಾಯಕತ್ವದ ಷ್ವಾನೆ ಸ್ಪಾರ್ಟನ್ಸ್ ಎದುರು ಜೋಝಿ ಸ್ಟಾರ್ಸ್ ಭರ್ಜರಿ 101 ರನ್ ಗೆಲುವನ್ನಾಚರಿಸಿದೆ.
ಪಂದ್ಯದ ವೇಳೆ ಅಬ್ಬರಿಸಿದ ಜೋಝಿ ಸ್ಟಾರ್ಸ್‌ನ ರಾಸ್ಸಿ ವ್ಯಾನ್ ಡೆರ್ ಡಸೆನ್ ಅವರು ತಂಡದ ಗೆಲುವಿನ ರುವಾರಿ ಎನಿಸಿದರು. 44 ಎಸೆತಗಳಿಗೆ ರಾಸ್ಸಿ ಅಜೇಯ 96 ರನ್ ಚಚ್ಚಿದರು. ಮತ್ತೊಬ್ಬ ಆಟಗಾರ ಡೇನಿಯಲ್ ಕ್ರಿಸ್ಚಿಯನ್ ಅವರು 19 ಎಸೆತಕ್ಕೆ 52 ರನ್ ಗಳಿಸಿದ್ದು ಮತ್ತು ಆರಂಭಿಕ ಆಟಗಾರ ರಿಯಾನ್ ರಿಕೆಲ್ಟನ್ 45 ರನ್ ಸೇರಿಸಿದ್ದು ತಂಡಕ್ಕೆ ಇನ್ನಷ್ಟು ಬಲ ತುಂಬಿತು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಜೋಝಿ ಸ್ಟಾರ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದು 239 ರನ್ ಕಲೆ ಹಾಕಿತ್ತು. ಗಿಹಾನ್ ಕ್ಲೋಟೆ ಅರ್ಧ ಶತಕ (50 ರನ್) ಹೊರತಾಗಿಯೂ ಷ್ವಾನೆ ಸ್ಪಾರ್ಟನ್ಸ್ 17.2 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 138 ರನ್ ಗಳಿಸಿ ಶರಣಾಯಿತು.
Story first published: Wednesday, December 12, 2018, 17:29 [IST]
Other articles published on Dec 12, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications