
ಗೌಟೆಂಗ್, ಡಿಸೆಂಬರ್ 6: ದಕ್ಷಿಣ ಆಫ್ರಿಕಾದ ಗೌಟೆಂಗ್‌ನಲ್ಲಿರುವ ಸೂಪರ್ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ನಡೆದ ಮಝನ್ಸಿ ಸೂಪರ್ ಲೀಗ್ 21ನೇ ಪಂದ್ಯದಲ್ಲಿ ಫಾ ಡು ಪ್ಲೆಸಿಸ್ ನಾಯಕತ್ವದ ಪಾರ್ಲ್ ರಾಕ್ಸ್ ವಿರುದ್ಧ ಎಬಿ ಡಿ ವಿಲಿಯರ್ಸ್ ಮುಂದಾಳತ್ವದ ಷ್ವಾನೆ ಸ್ಪಾರ್ಟನ್ಸ್ 4 ವಿಕೆಟ್ ಜಯ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಾರ್ಲ್ ರಾಕ್ಸ್ ತಂಡ, ಪ್ಲೆಸಿಸ್ 38, ಡ್ವೇನ್ ಬ್ರಾವೋ 25, ಡೇವಿಡ್ ವೈಸ್ 16, ಡೇನ್ ಪ್ಯಾಟರ್ಸನ್ 15 ರನ್ ನೆರವಿನೊಂದಿಗೆ ಪಾರ್ಲ್ ರಾಕ್ಸ್ 17.4 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 121 ರನ್ ಪೇರಿಸಿತು. ರಾಕ್ಸ್ ಇನ್ನಿಂಗ್ಸ್ ವೇಳೆ ಸ್ಪಾರ್ಟನ್ಸ್‌ನ ಲುಥೊ ಸಿಪಮ್ಲಾ, ಶಾನ್ ವಾನ್ ಬರ್ಗ್ ತಲಾ 3 ವಿಕೆಟ್ ಕೆಡವಿ ಗಮನ ಸೆಳೆದರು.
ಗುರಿ ಬೆನ್ನಟ್ಟಿದ ಡಿ ವಿಲಿಯರ್ಸ್ ಬಳಗಕ್ಕೆ ಆಂಡ್ರಿಯಾ ಅಗತಂಗಲೋವ್ 23, ರಾಬಿ ಫ್ರಿಲಿನ್ಕ್ ಅಜೇಯ 22 ರನ್, ಟೋನಿ ಡಿ ಜೋರ್ಜಿ 17 ರನ್ ಕೂಡಿಸಿ ಬೆಂಬಲಿಸಿದರು. ಷ್ವಾನೆ ಸ್ಪಾರ್ಟನ್ಸ್ 19.3 ಓವರ್‌ನಲ್ಲಿ 6 ವಿಕೆಟ್ ಕಳೆದು 122 ರನ್ ಗಳಿಸಿ ಗೆಲುವನ್ನಾಚರಿಸಿತು.