
ಗೌಟೆಂಗ್, ನವೆಂಬರ್ 26: ದಕ್ಷಿಣ ಆಫ್ರಿಕಾದ ಗೌಟೆಂಗ್ ನಲ್ಲಿರುವ ಸೆಂಚುರಿಯನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 25) ನಡೆದ ಮಝನ್ಸಿ ಸೂಪರ್ ಲೀಗ್ 10ನೇ ಪಂದ್ಯದಲ್ಲಿ ಷ್ವಾನೆ ಸ್ಪಾರ್ಟನ್ಸ್ ವಿರುದ್ಧ ನೆಲ್ಸನ್ ಮಂಡೇಲಾ ಬೇ ಜೈಂಟ್ಸ್ 7 ರನ್ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಜಯ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನೆಲ್ಸನ್ ಮಂಡೇಲಾ ಬೇ ಜೈಂಟ್ಸ್ ತಂಡ, ಆರಂಭಿಕ ಆಟಗಾರ ಮಾರ್ಕೊ ಮಾರಿಸ್ 47 ರನ್, ರೂಡಿ ಸೆಕೆಂಡ್ 26 ರನ್ ನೆರವಿನೊಂದಿಗೆ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದು 143 ರನ್ ಪೇರಿಸಿತ್ತು.
ಮಳೆ ಪಂದ್ಯಕ್ಕೆ ಅಡ್ಡಿಯಾದ್ದರಿಂದ ಡಿಎಸ್‌ಎಲ್ ನಿಯಮದ ಆಧಾರದಲ್ಲಿ ಷ್ವಾನೆ ಸ್ಪಾರ್ಟನ್ಸ್ ಗೆ 5.1 ಓವರ್‌ಗೆ 43 ರನ್ ಗುರಿ ನೀಡಲಾಗಿತ್ತು. ಆದರೆ ಎಬಿ ಡಿ ವಿಲಿಯರ್ಸ್ ಬಳಗ 5.1 ಓವರ್ ಗೆ 3 ವಿಕೆಟ್ ಕಳೆದು 35 ರನ್ ಪೇರಿಸಿ ಶರಣಾಯಿತು. ನೆಲ್ಸನ್ ಮಂಡೇಲಾ ಬೇ ಜೈಂಟ್ಸ್ ಲಭಿಸಿದ ಮೂರನೇ ಜಯವಿದು.