ಎಂಎಸ್‌ಎಲ್: ಎಲ್ಗರ್ ಅರ್ಧಶತಕ, ಜೋಝಿ ಸ್ಟಾರ್ಸ್ ಕೆಡವಿದ ಎಬಿಡಿ ಬಳಗ

ಸೆಂಚುರಿಯನ್, ನವೆಂಬರ್ 29: ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನಲ್ಲಿರುವ ಸೂಪರ್ ಸ್ಪೋರ್ಟ್ಸ್ ಪಾರ್ಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಝನ್ಸಿ ಸೂಪರ್ ಲೀಗ್ 13ನೇ ಪಂದ್ಯದಲ್ಲಿ ಜೋಝಿ ಸ್ಟಾರ್ಸ್ ತಂಡವನ್ನು ಷ್ವಾನೆ ಸ್ಪಾರ್ಟನ್ಸ್ 4 ವಿಕೆಟ್ ನಿಂದ ಸೋಲಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಜೋಝಿ ಸ್ಟಾರ್ಸ್ ತಂಡ, ರೀಜಾ ಹೆಂಡ್ರಿಕ್ಸ್ ಮತ್ತು ಪೆಟ್ರಸ್ ವಾನ್ ಬಿಲ್ಜಾನ್ ಬ್ಯಾಟಿಂಗ್ ಬಲದೊಂದಿಗೆ 20 ಓವರ್ ಗಳಲ್ಲಿ 5 ವಿಕೆಟ್ ಕಳೆದು 186 ರನ್ ಕಲೆ ಹಾಕಿತ್ತು. ಹೆಂಡ್ರಿಕ್ಸ್ 55, ನಾಯಕ ಡೇನ್ ವಿಲಾಸ್ 25, ಬಿಲ್ಜಾನ್ 42 ರನ್ ಸೇರಿಸಿದ್ದರು.
ಗುರಿ ಬೆನ್ನತ್ತಿದ ಷ್ವಾನೆ ಸ್ಪಾರ್ಟನ್ಸ್ ಪರ ಆರಂಭಿಕ ಆಟಗಾರ ಡೀನ್ ಎಲ್ಗರ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಎಲ್ಗರ್ 52 ಎಸೆತಗಳಿಗೆ ಅಜೇಯ 79 ರನ್ ಸೇರಿಸಿದರು. ಜೊತೆಗೆ ನಾಯಕ ಎಬಿ ಡಿ ವಿಲಿಯರ್ಸ್ 39, ಸೀನ್ ವಿಲಿಯಮ್ಸ್ ಅಜೇಯ 20 ರನ್ ಕೊಡುಗೆಯೊಂದಿಗೆ ಸ್ಪಾರ್ಟನ್ಸ್ 19.3 ಓವರ್ ಗಳಲ್ಲಿ 6 ವಿಕೆಟ್ ಕಳೆದು 188 ರನ್ ಪೇರಿಸಿ ಗೆಲುವನ್ನಾಚರಿಸಿತು.
Story first published: Thursday, November 29, 2018, 18:25 [IST]
Other articles published on Nov 29, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications