Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಎಸ್‌ಎಲ್‌: ಡಿ ವಿಲಿಯರ್ಸ್ ಬಳಗಕ್ಕೆ ಸೋಲುಣಿಸಿದ ಡರ್ಬನ್ ಹೀಟ್

MSL T20 2018: Kyle Abbott’s fiery spell delivers first win for the Heat

ಡರ್ಬನ್, ನವೆಂಬರ್ 22: ಡರ್ಬನ್‌ನ ಕಿಂಗ್ಸ್ಮೆಡ್ ಕ್ರೀಡಾಂಗಣದಲ್ಲಿ ನಡೆದ ಮಝನ್ಸಿ ಸೂಪರ್ ಲೀಗ್ 6ನೇ ಪಂದ್ಯದಲ್ಲಿ ಎಬಿ ಡಿ ವಿಲಿಯರ್ಸ್ ನಾಯಕತ್ವದ ಷ್ವಾನೆ ಸ್ಪಾರ್ಟನ್ಸ್ ವಿರುದ್ಧ ಡರ್ಬನ್ ಹೀಟ್ 10 ರನ್ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಜಯ ಸಾಧಿಸಿದೆ. ಡರ್ಬನ್ ಹೀಟ್‌ಗೆ ಟೂರ್ನಿಯಲ್ಲಿ ಲಭಿಸಿದ ಮೊದಲ ಜಯ ಇದು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಷ್ವಾನೆ ಸ್ಪಾರ್ಟನ್ಸ್‌ ಬೆಂಬಲಕ್ಕೆ ಆರಂಭಿಕ ಆಟಗಾರ ಗಿಹಾನ್ ಕ್ಲೋಟೆ ನಿಂತರು. ಗಿಹಾನ್ 43 ಎಸೆತಗಳಿಗೆ 55 ರನ್ ಸೇರಿಸಿದರು. ಗಿಹಾನ್ ಬಿಟ್ಟರೆ ಸಿಕಂದರ್ ರಾಝಾ ಅವರ 20 ರನ್ನೇ ಹೆಚ್ಚೆನಿಸಿತು. ನಾಯಕ ಡಿ ವಿಲಿಯರ್ಸ್ ಕೂಡ 10 ರನ್ ನೀಡಿ ಔಟಾದರು.

ಇತ್ತ ಡರ್ಬನ್‌ ಹೀಟ್‌ ಮಾರಕ ಬೌಲಿಂಗ್ ದಾಳಿ ಕೂಡ ನಡೆಸಿತು. ಡರ್ಬನ್‌ ಹೀಟ್‌ನ ಕೈಲ್ ಅಬ್ಬೋಟ್, 27 ರನ್ ಗೆ 4 ವಿಕೆಟ್ ಉರುಳಿಸಿ ಡಿ ವಿಲಿಯರ್ಸ್ ಬಳಗವನ್ನು ಕಾಡಿದರು. ಷ್ವಾನೆ ಸ್ಪಾರ್ಟನ್ಸ್ 19 ಓವರ್‌ಗೆ 9 ವಿಕೆಟ್ ಕಳೆದು 139 ರನ್ ಪೇರಿಸಿತು.

ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ ಡರ್ಬನ್ ಹೀಟ್ ಗೆಲ್ಲಲು 16.3 ಓವರ್‌ಗೆ 120 ರನ್ ಗುರಿ ನೀಡಲಾಗಿತ್ತು. ಹಾಶಿಮ್ ಆಮ್ಲಾ 24, ಮೊರ್ನೆ ವ್ಯಾನ್ 22, ಹೆನ್ರಿಕ್ ಕ್ಲೇಸೆನ್ 21, ನಾಯಕ ಅಲ್ಬಿ ಮಾರ್ಕೆಲ್ 26, ಖಯಾ ಜೊಂಡೋ 25 ರನ್ ಗಳಿಸಿದ್ದರಿಂದ ಡರ್ಬನ್ ಹೀಟ್ 16.3 ಓವರ್‌ನಲ್ಲಿ 6 ವಿಕೆಟ್ ಕಳೆದು 129 ರನ್ ಪೇರಿಸಿ ಗೆಲುವು ತನ್ನದಾಗಿಸಿತು.

Story first published: Thursday, November 22, 2018, 19:45 [IST]
Other articles published on Nov 22, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+