ಅತಿ ಶ್ರೀಮಂತ ಕ್ರೀಡಾ ತಂಡಗಳ ಮಾಲೀಕರ ಪಟ್ಟಿಯಲ್ಲಿ ಮುಖೇಶ್ ನಂ.1

ನವದೆಹಲಿ, ಮಾರ್ಚ್ 18: ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ ಅತಿ ಶ್ರೀಮಂತ ಕ್ರೀಡಾ ತಂಡಗಳ ಮಾಲೀಕರ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಮುಖೇಶ್ ಅಂಬಾನಿ ನಂ.1 ಸ್ಥಾನಕ್ಕೇರಿದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಒಟ್ಟಾರೆ 50 ಬಿಲಿಯನ್ ಡಾಲರ್ ಮೊತ್ತವನ್ನು ಹೊಂದಿದ್ದಾರೆ.
20008ರಲ್ಲಿ 100 ಮಿಲಿಯನ್ ಡಾಲರ್ ಮೊತ್ತ ನೀಡಿ, ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತಂಡವನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಖರೀದಿಸಿತ್ತು. ಐಪಿಎಲ್ ನಲ್ಲಿ 2013, 2015 ಹಾಗೂ 2017ರಲ್ಲಿ ಕಪ್ ಗೆದ್ದು ಯಶಸ್ವಿ ತಂಡ ಎನಿಸಿಕೊಂಡಿದೆ.
ಭಾರತದ ಅತ್ಯಂತ ಶ್ರೀಮಂತ ಉದ್ಯಮಿಯಾಗಿರುವ ಮುಖೇಶ್ ಅವರ ಒಡೆತನದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ಅವರ ಪತ್ನಿ ನೀತಾ ಅಂಬಾನಿ ಹಾಗೂ ಪುತ್ರ ಆಕಾಶ್ ಅಂಬಾನಿ ನಿಭಾಯಿಸುತ್ತಿದ್ದಾರೆ.
ಐಪಿಎಲ್ 2019ರಲ್ಲಿ ಮಾರ್ಚ್ 24ರಂದು ವಾಂಖೆಡೆ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವಾಡಲಿದೆ.
Story first published: Monday, March 18, 2019, 17:15 [IST]
Other articles published on Mar 18, 2019
Read in English: MI boss leads Forbes list
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications