Rohit Sharma: ರೋಹಿತ್ ಹೆಸರಿನಲ್ಲಿ ವಾಂಖೆಡೆಯಲ್ಲಿ ಸ್ಟ್ಯಾಂಡ್
ಟೀಮ್ ಇಂಡಿಯಾದ ಯಶಸ್ವಿ ನಾಯಕರ ಪಟ್ಟಿಯನ್ನು ನೋಡುತ್ತಾ ಹೋದಾಗ ಈ ಪಟ್ಟಿಯಲ್ಲಿ ಹಲವು ಆಟಗಾರರ ಹೆಸರುಗಳು ಕಾಣಿಸಿಕೊಳ್ಳುತ್ತುವೆ. ಇತ್ತೀಚಿನ ದಿನಗಳಲ್ಲಿಯ ಪ್ರದರ್ಶನ ನೋಡಿದರೆ ರೋಹಿತ್ ಶರ್ಮಾ ಅವರ ಹೆಸರು ಸಹ ಇದೇ ಪಟ್ಟಿಯಲ್ಲಿ ನಿಸ್ಸಂದೇಹವಾಗಿ ಕಾಣಿಸಿಕೊಳ್ಳುತ್ತದೆ. ಮುಂಬೈ ತಂಡದ ಪರ ದೇಶೀಯ ಟೂರ್ನಿಗಳಲ್ಲಿ ಆಡುವ ರೋಹಿತ್ ಶರ್ಮಾ ಅವರಿಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ತನ್ನ ಗೌರವವನ್ನು ಸೂಚಿಸಿದೆ.
ರೋಹಿತ್ ತವರು ಮೈದಾನ ವಾಂಖೆಡೆ ಕ್ರೀಡಾಂಗಣದಲ್ಲಿ ವಿಶೇಷ ಸ್ಟ್ಯಾಂಡ್ ನಿರ್ಮಿಸಲು ತೀರ್ಮಾನಿಸಲಾಗಿದೆ. ರೋಹಿತ್ ಹೆಸರಿನಲ್ಲಿ ಸ್ಟ್ಯಾಂಡ್ ನಿರ್ಮಿಸಲು ಎಂಸಿಎ ಕೂಡ ಅನುಮೋದನೆ ನೀಡಿದೆ. ರೋಹಿತ್ ಅವರನ್ನು ಗೌರವಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಇವರ ಜೊತೆಗೆ ಶರದ್ ಪವಾರ್ ಮತ್ತು ಅಜಿತ್ ವಾಡೇಕರ್ ಹೆಸರಿನ ಸ್ಟ್ಯಾಂಡ್‌ಗಳು ಸಹ ಮುಂಬೈನ ವಾಂಖೇಡೆ ಅಂಗಳದಲ್ಲಿ ಕಾನೀಸಿಕೊಳ್ಳಲಿವೆ. ಆದರೆ ಈ ಬಗ್ಗೆ ಇನ್ನೂ ಎಂಸಿಎನಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.

ಯಾರ ಹೆಸರಿನಲ್ಲಿವೆ ಸ್ಟ್ಯಾಂಡ್‌ಗಳು
ಈಗಾಗಲೇ ಟೀಮ್ ಇಂಡಿಯಾದ ಸ್ಟಾರ್ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್ ಹಾಗೂ ಸುನಿಲ್ ಗವಾಸ್ಕರ್ ಅವರ ಸ್ಟ್ಯಾಂಡ್‌ಗಳು ಈಗಾಗಲೇ ವಾಂಖೇಡೆ ಅಂಗಳದಲ್ಲಿವೆ. ಇನ್ನು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಈ ರಾಜ್ಯಕ್ಕೆ ಕೀರ್ತಿ ತಂದಿರುವ ವೀರೇಂದ್ರ ಸೆಹ್ವಾಗ್, ವೀರಾಟ್ ಕೊಹ್ಲಿ ಹೆಸರಿನ ಸ್ಟ್ಯಾಂಡ್‌ಗಳು ಇವೆ. ಇನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲೂ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಹೆಸರನಲ್ಲೂ ಸ್ಟ್ಯಾಂಡ್‌ಗಳಿವೆ.

ರೋಹಿತ್ ಸಾಧನೆ
ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಐಸಿಸಿ ಪ್ರಾಯೋಜಿತ ಎಲ್ಲ ಟೂರ್ನಿಗಳ ಫೈನಲ್‌ಗೆ ಪ್ರವೇಶ ಪಡೆದ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ. 2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಟಿ20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಪಟ್ಟವನ್ನು ಟೀಮ್ ಇಂಡಿಯಾ ಅಲಂಕರಿಸಿತ್ತು. ಅಲ್ಲದೆ ಪಾಕಿಸ್ತಾನ ಆಯೋಜಿಸಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ, ನ್ಯೂಜಿಲೆಂಡ್ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿತ್ತು.
ರೋಹಿತ್ ಶರ್ಮಾ ಅವರ ನಾಯಕತದಲ್ಲಿ ಟೀಮ್ ಇಂಡಿಯಾ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಆದರೆ ಫೈನಲ್‌ನಲ್ಲಿಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಇನ್ನು 2023ರಲ್ಲಿ ನಡೆದಿದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲೂ ಟೀಮ್ ಇಂಡಿಯಾ ಆಸೀಸ್ ವಿರುದ್ಧ ಸೋಲು ಕಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications