ಕೊಹ್ಲಿಗೆ ಬರ್ತ್‌ಡೇ ಸಂಭ್ರಮ: ಮುಂಬೈ ಇಂಡಿಯನ್ಸ್ ಟ್ವೀಟ್‌ಗೆ ಕಿಡಿಕಾರಿದ ಅಭಿಮಾನಿಗಳು
ಟೀಮ್ ಇಂಡಿಯಾದ ಸ್ಟಾರ್, ಆರ್‌ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂದು 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಿಶ್ವದ ಅನೇಕ ಸ್ಥಳದಿಂದ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ದಿಗ್ಗಜರು, ಸೆಲೆಬ್ರೆಟಿಗಳು ಕಿಂಗ್ ಕೊಹ್ಲಿಗೆ ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಮತ್ತು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ಕೊಹ್ಲಿಗೆ ಹುಟ್ಟುಹಬ್ಬದ ಸಂದೇಶಗಳು ಸುನಾಮಿಯಂತೆ ಹರಿದುಬಂದಿದೆ. ಈ ಶುಭಾಶಯ ಪ್ರಮಾಣವೇ ತಿಳಿಸುತ್ತದೆ ಕೊಹ್ಲಿ ಜನಪ್ರಿಯತೆ ಎಷ್ಟಿದೆ ಎಂದು.

ವಿವಾದಕ್ಕೆ ಕಾರಣವಾದ ಮುಂಬೈ ಇಂಡಿಯನ್ಸ್ ಟ್ವೀಟ್
ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು, ಸೆಲೆಬ್ರೆಟಿಗಳು ಕೊಹ್ಲಿ ಬರ್ತ್‌ಡೇಗೆ ಶುಭಾಶಯ ತಿಳಿಸಿದ್ದಾರೆ. ಇದರ ನಡುವೆ ಒಂದು ಟ್ವೀಟ್ ವಿವಾದವನ್ನು ಹುಟ್ಟುಹಾಕಿದ್ದು, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸುಖಾಸುಮ್ಮನೆ ವಿವಾದ ಮೈಮೇಲೆ ಎಳೆದುಕೊಂಡಿದೆ.

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ನಡುವೆ ಬಿರುಕು ಮೂಡಿದ್ಯಾ?
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ತಿಕ್ಕಾಟ ನಡೀತಿದ್ಯಾ? ಎಂಬ ಗುಮಾನಿ ಅಭಿಮಾನಿಗಳಲ್ಲಿ ಮೂಡಿದೆ. 2019ರ ಐಸಿಸಿ ವಿಶ್ವಕಪ್ ಬಳಿಕ ಇಬ್ಬರ ನಡುವೆ ಶೀತಲ ಸಮರ ನಡೀತಿದೆ ಎಂಬ ವದಂತಿಗಳು ಹರಡಿವೆ.
ಇಬ್ಬರು ಕ್ರಿಕೆಟಿಗರು ಬಹಿರಂಗವಾಗಿ ಏನೂ ಹೇಳದಿದ್ದರೂ ಒಬ್ಬರನ್ನೊಬ್ಬರು ಒಳಗೊಳಗೆ ದ್ವೇಷಿಸುತ್ತಿದ್ದಾರೆ ಎಂದು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ. ಇತ್ತೀಚೆಗೆ ರೋಹಿತ್ ಐಪಿಎಲ್ ಆಡುವಷ್ಟು ಸಮರ್ಥರಾಗಿದ್ದು, ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗದೇ ಇರುವುದು ಪುಷ್ಠಿ ನೀಡಿದೆ.

ಐಪಿಎಲ್‌ನಲ್ಲೂ ಇಬ್ಬರ ಸಂಬಂಧ ಅಷ್ಟಕಷ್ಟೇ ಅಂತಿದೆ
ಐಪಿಎಲ್ 2020 ರಲ್ಲಿ ಮುಖಾಮುಖಿಯಾದ ಇಬ್ಬರು ಭಾರತದ ಸೂಪರ್‌ಸ್ಟಾರ್‌ಗಳು ಪರಸ್ಪರ ದೂರವಾಗಿದ್ದರು. ಇಬ್ಬರೂ ನಗುವನ್ನು ಹಂಚಿಕೊಳ್ಳಲಿಲ್ಲ ಮತ್ತು ರೋಹಿತ್ ಶರ್ಮಾ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡದೇ ಇರುವುದು ಬಹಳಷ್ಟು ವಿವಾದಗಳಿಗೆ ಕಾರಣವಾಗಿದೆ.
ಹಾರ್ದಿಕ್ ಪಾಂಡ್ಯ ಜೊತೆಗಿನ ಕೊಹ್ಲಿ ಫೋಟೋ ಶೇರ್ ಮಾಡಿದ MI
ಗುರುವಾರ, ಇತರ ಐಪಿಎಲ್ ಫ್ರಾಂಚೈಸಿಗಳಂತೆ, ಮುಂಬೈ ಇಂಡಿಯನ್ಸ್ ಟ್ವಿಟ್ಟರ್‌ನಲ್ಲಿ ವಿರಾಟ್ ಕೊಹ್ಲಿಗೆ ಶುಭಾಶಯ ತಿಳಿಸಿದೆ. ಆದರೆ ವಿರಾಟ್ ಜೊತೆಗೆ ಹಾರ್ದಿಕ್ ಪಾಂಡ್ಯ ಅವರ ಚಿತ್ರವನ್ನು ಪೋಸ್ಟ್ ಮಾಡಿ ಭಾರತದ ನಾಯಕ ವಿರಾಟ್ ಕೊಹ್ಲಿಗೆ ಶುಭ ಹಾರೈಸಿದೆ. ಈ ಫೋಟೋ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications