ಮುಂಬೈ ಇಂಡಿಯನ್ಸ್ ತಂಡದ ನಿರ್ದೇಶಕರಾಗಿ ಜಹೀರ್ ಖಾನ್ ನೇಮಕ

ಮುಂಬೈ, ಡಿಸೆಂಬರ್ 18: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್ 9)ನ ಪ್ರಮುಖ ತಂಡ ಮುಂಬೈ ಇಂಡಿಯನ್ಸ್ ಇಂದು(ಡಿಸೆಂಬರ್ 18) ಮಾಜಿ ಕ್ರಿಕೆಟರ್ ಜಹೀರ್ ಖಾನ್ ಅವರನ್ನು ತಂಡದ ನಿರ್ದೇಶಕರಾಗಿ ನೇಮಿಸಿರುವುದಾಗಿ ಪ್ರಕಟಿಸಿದೆ. ರೋಹಿತ್ ಶರ್ಮ ಅವರು ತಂಡವನ್ನು ಐಪಿಎಲ್ 2019ರಲ್ಲೂ ಮುನ್ನಡೆಸಲಿದ್ದಾರೆ.
ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ನಾಯಕರಾಗಿದ್ದ ಎಡಗೈ ವೇಗಿ ಜಹೀರ್ ಖಾನ್ ಅವರು ಇಂದು ಜೈಪುರದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ತಂಡದ ಮಾಲೀಕರಾದ ನೀತಾ ಅಂಬಾನಿ ಹಾಗೂ ಆಕಾಶ್ ಅಂಬಾನಿ ಅವರ ಜತೆ ಕಾಣಿಸಿಕೊಳ್ಳಲಿದ್ದಾರೆ.
ಎರಡು ದಶಕಗಳ ತಮ್ಮ ಕ್ರಿಕೆಟ್ ಅನುಭವವನ್ನು ಜಹೀರ್ ಅವರು ಈಗ ಮುಂಬೈ ಇಂಡಿಯನ್ಸ್ ಗೆ ನೀಡಲಿದ್ದಾರೆ. 2009, 2010 ಹಾಗೂ 2014ರ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಜಹೀರ್ 30 ಪಂದ್ಯಗಳಿಂದ 29 ವಿಕೆಟ್ ಗಳಿಸಿದ್ದರು.
ಐಪಿಎಲ್ 2019ರ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡವು 18 ಆಟಗಾರರನ್ನು ಉಳಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಹಾಗೂ ಜಸ್ ಪ್ರೀತ್ ಬೂಮ್ರಾ ಅವರು ತಂಡದ ಪ್ರಮುಖ ಆಟಗಾರರಾಗಿದ್ದಾರೆ.
ಜಹೀರ್ ಅವರು ಈ ವರೆಗೆ ಭಾರತ ತಂಡ ಪರ 92 ಟೆಸ್ಟ್ , 200 ಏಕದಿನ, 17 ಟಿ-20 ಪಂದ್ಯಗಳನ್ನು ಆಡಿ 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು
ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡ : ರೋಹಿತ್ ಶರ್ಮ (ನಾಯಕ), ಹಾರ್ದಿಕ್ ಪಾಂಡ್ಯ, ಜಸ್ ಪ್ರೀತ್ ಬೂಮ್ರಾ, ಕೃನಾಲ್ ಪಾಂಡ್ಯ, ಇಶಾನ್ ಕಿಶಾನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರಾಹುಲ್ ಚಾಹರ್, ಅನುಕೂಲ್ ರಾಯ್, ಸಿದ್ದೇಶ್ ಲಾಡ್, ಆದಿತ್ಯ ತಾರೆ, ಕ್ವಿಂಟಾನ್ ಡಿ ಕಾಕ್, ಕಿರಾನ್ ಪೊಲ್ಲಾರ್ಡ್, ಬೆನ್ ಕಟ್ಟಿಂಗ್, ಮಿಚೆಲ್ ಮೆಕ್ ಕ್ಲೆನೆಘನ್, ಎವಿನ್ ಲೆವಿಸ್, ಆಡಂ ಮಿಲ್ನೆ ಹಾಗೂ ಜಾಸನ್ ಬೆಹ್ರೊಡೊರ್ಫ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications