200 ಟಿ20 ಪಂದ್ಯಗಳನ್ನಾಡಿದ ವಿಶ್ವದ ಮೊದಲ ತಂಡ ಮುಂಬೈ ಇಂಡಿಯನ್ಸ್!

ನವದೆಹಲಿ, ಏಪ್ರಿಲ್ 14: ಐಪಿಎಲ್‌ನಲ್ಲಿ ಬರೋಬ್ಬರಿ 100 ಗೆಲುವು ಕಂಡ ಮೊದಲ ತಂಡವಾಗಿ ಮಿಂಚಿದ ಮುಂಬೈ ಇಂಡಿಯನ್ಸ್ ಮುಡಿಗೆ ಮತ್ತೊಂದು ಹಿರಿಮೆಯ ಗರಿ ಸೇರಿದೆ. ವಿಶ್ವದಲ್ಲಿ 200 ಟಿ20 ಪಂದ್ಯಗಳನ್ನಾಡಿದ ಮೊದಲ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿದೆ.
ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ
ಶನಿವಾರ (ಏಪ್ರಿಲ್ 13) ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 27ನೇ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ ಕಣಕ್ಕಿಳಿಯುವ ಮೂಲಕ ಮುಂಬೈ ಈ ದಾಖಲೆಗೆ ಕಾರಣವಾಯ್ತು. ಆದರೆ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 4 ವಿಕೆಟ್ ಗೆಲುವನ್ನಾಚರಿಸಿತು.
ಅತೀ ಹೆಚ್ಚು ಟಿ20 ಪಂದ್ಯಗಳನ್ನಾಡಿದ ವಿಶ್ವದ ತಂಡಗಳಲ್ಲಿ ಇಂಗ್ಲೆಂಡ್‌ನ ಸಾಮರ್‌ಸೆಟ್ ತಂಡ ದ್ವಿತೀಯ ಸ್ಥಾನದಲ್ಲಿದೆ. ಸಾಮರ್‌ಸೆಟ್ ಒಟ್ಟು 199 ಪಂದ್ಯಗಳನ್ನಾಡಿದ ದಾಖಲೆ ಹೊಂದಿದೆ. ಇನ್ನು ತೃತೀಯ ಸ್ಥಾನದಲ್ಲಿ ಇಂಗ್ಲೆಂಡ್‌ನ ಮತ್ತೊಂದು ಕ್ಲಬ್ ಹ್ಯಾಂಪ್ಶೈರ್ ಇದೆ. ಹ್ಯಾಂಪ್ಶೈರ್ ಒಟ್ಟು 194 ಪಂದ್ಯಗಳನ್ನಾಡಿದೆ.
ಈ ಯಾದಿಯಲ್ಲಿ 4ನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 188 ಪಂದ್ಯಗಳ ದಾಖಲೆ ಹೊಂದಿದೆ. 5ನೇ ಸ್ಥಾನವನ್ನು ಇಂಗ್ಲೆಂಡ್‌ನ ಸಸೆಕ್ಸ್ (187 ಪಂದ್ಯಗಳು) ಕೌಂಟಿ ಕ್ರಿಕೆಟ್ ಕ್ಲಬ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಹಂಚಿಕೊಂಡಿವೆ. ಅಂದ್ಹಾಗೆ ಮುಂಬೈ 178 ಪಂದ್ಯಗಳನ್ನು ಐಪಿಎಲ್‌ನಲ್ಲಿ ಆಡಿದ್ದರೆ ಇನ್ನುಳಿದ 22 ಪಂದ್ಯಗಳನ್ನು ಚಾಂಪಿಯನ್ಸ್ ಲೀಗ್ ಟಿ20ಯಲ್ಲಿ ಆಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications