ಮುಂಬೈ ಇಂಡಿಯನ್ಸ್ ತಂಡವನ್ನು ಈ ಬಾರಿಯ ಐಪಿಎಲ್‌ನಲ್ಲಿ ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಈ ವೇಳೆ ನಾಲ್ಕು ಜನ ಆಟಗಾರರ ಹೆಸರುಗಳು ಕಣ್ಣು ಮುಂದೆ ಬರುತ್ತವೆ. ಆದರೆ ಈಗ ಬರುತ್ತಿರುವ ಸುದ್ದಿಯ ಪ್ರಕಾರ ಮುಂಬೈ ಇಂಡಿಯನ್ಸ್ ತನ್ನ ಹಳೆಯ ನಾಯಕನನ್ನೇ ಬ್ಯಾಕ್ ಮಾಡಲು ನಿರ್ಧರಿಸಿದೆ. ಹಾಗಿದ್ದರೆ ಮುಂಬೈ ಯಾವ ನಾಯಕನ ಬೆನ್ನಿಗೆ ನಿಲ್ಲಲಿದೆ ಎಂಬ ಬಗ್ಗೆ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ.
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಅಲ್ಲದೆ ಪ್ಲೇ ಆಫ್‌ಗೆ ಸಹ ಕ್ವಾಲಿಫೈ ಆಗಿರಲಿಲ್ಲ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು. ಆದರೆ ಅವರ ನಾಯಕತ್ವದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಆದರೆ ಟೀಮ್ ಮ್ಯಾನೇಜ್ಮೆಂಟ್ ಮಾತ್ರ ಮತ್ತೆ ಹಾರ್ದಿಕ್ ಪಾಂಡ್ಯ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿವೆ.

ಹಾರ್ದಿಕ್ ಪಾಂಡ್ಯ ತಮ್ಮ ನಾಯಕತ್ವದ ಗುಣಗಳಿಂದಲೇ ಸದ್ದು ಮಾಡಿದ ಆಟಗಾರ. ತಾವು ಗುಜರಾತ್ ಟೈಟಾನ್ಸ್ ಚುಕ್ಕಾಣಿ ಹಿಡಿದ ಎರಡು ವರ್ಷದಲ್ಲೂ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಪ್ಲೇಯರ್. ಅಲ್ಲದೆ ಮೊದಲ ಪ್ರಯತ್ನದಲ್ಲೇ ಚಾಂಪಿಯನ್ ಪಟ್ಟವನ್ನು ತೊಡಿಸಿದ ನಾಯಕ. ಇವರ ಸ್ಕಿಲ್ ಹಾಗೂ ಎಬಿಲಿಟಿ ಕಂಡು ಮುಂಬೈ ಈ ಪ್ಲೇಯರ್‌ನನ್ನು ಟ್ರೇಡ್ ಮಾಡಿ ನಾಯಕತ್ವ ನೀಡಿತು. ಆದರೆ ತಂಡದಲ್ಲಿದ್ದ ರೋಹಿತ್ ಶರ್ಮಾ, ಜಸ್ಪ್ರಿತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಈ ನಿರ್ಧಾರದಿಂದ ಬೇಸರಗೊಂಡಿದ್ದರು. ಮತ್ತೆ ಮ್ಯಾನೇಜ್ಮೆಂಟ್ ಹಾರ್ದಿಕ್ ಬೆನ್ನಿಗೆ ನಿಲ್ಲುವ ಸಾಧ್ಯತೆ ಇದೆ.
ಹಾರ್ದಿಕ್ ಪಾಂಡ್ಯ ಅವರನ್ನು ಭವಿಷ್ಯ ಟೀಮ್ ಇಂಡಿಯಾ ನಾಯಕ ಎಂದೇ ಗುರುತಿಸಲಾಗಿತ್ತು. ಆದರೆ, ಈ ರೇಸ್‌ನಲ್ಲಿ ಸೂರ್ಯಕುಮಾರ್ ಯಾದವ್ ಇವರಿಗಿಂತ ಮುಂದೆ ಹೋಗಿ ಪಟ್ಟ ಏರಿದರು. ಹಾರ್ದಿಕ್ ಯಾವಾಗಲೂ ತಮ್ಮ ನ್ಯೂನತೆಗಳನ್ನು ಮೆಟ್ಟನಿಂತು ಭರ್ಜರಿ ಕಮ್ ಬ್ಯಾಕ್ ಮಾಡುವ ಪ್ಲೇಯರ್. ದೇಶೀಯ ಟೂರ್ನಿಯಲ್ಲೂ ಇವರು ಸ್ಥಿರ ಪ್ರದರ್ಶನ ನೀಡಿ ತಮ್ಮ ತಂಡಕ್ಕೆ ನೆರವಾಗಿದ್ದಾರೆ. ಇವರು ಮತ್ತೆ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗುವ ಮೂಲಕ ಭವಿಷ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಆಸೆಗೆ ಜೀವ ಬಂದಂತೆ ಆಗಿದೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ತನ್ನ ನಾಯಕತ್ವದ ಗುಣಗಳು ಹಾಗೂ ಆಟದ ಶೈಲಿಯಿಂದ ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆಯುವ ಪ್ಲೇಯರ್. ಟೀಮ್ ಇಂಡಿಯಾದ ನಾಯಕರಾಗಿ ರೋಹಿತ್ ಶರ್ಮಾ ಇದ್ದಾಗ, ಹಾರ್ದಿಕ್ ಪಾಂಡ್ಯ ಅವರನ್ನು ಉತ್ತರಾಧಿಕಾರಿ ಎಂದೇ ಹೇಳಾಲಾಗುತ್ತಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಟೀಮ್ ಇಂಡಿಯಾ ಚುಕ್ಕಾಣಿ ಸೂರ್ಯಕುಮಾರ್ ಯಾದವ್ ಹೆಗಲೇರಿತು. ಇನ್ನು ಅಜಿತ್ ಅಗರ್ಕರ್ ಅವರು ಸೂರ್ಯ ಮೇಲೆ ಒಲ್ಲವು ಹೊಂದಿದ್ದರು. ಅಲ್ಲದೆ ಹಾರ್ದಿಕ್ ಅವರನ್ನು ನಾಯಕತ್ವದಿಂದ ದೂರ ಇಟ್ಟರು.
ಮುಂಬೈ ಇಂಡಿಯನ್ಸ್ ಮತ್ತೆ ಹಾರ್ದಿಕ್ ಅವರನ್ನು ಬ್ಯಾಕ್ ಮಾಡುವ ಸೂಚನೆ ನೀಡಿದೆ. ಈ ಮೂಲಕ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿಯುವ ಹಾರ್ದಿಕ್ ಕನಸಿಗೆ ರೆಕ್ಕೆ ಬಂದತಾಗುತ್ತದೆ.