Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗ್ಯಾಲರಿಯಲ್ಲಿ ಮತ್ತೆ ಕಾಣಿಸಿಕೊಂಡ ಪ್ರೇಯರ್ ಆಂಟಿ: ಮುಂಬೈ ಇಂಡಿಯನ್ಸ್‌ಗೆ ಗೆಲುವು

Mumbai Indians Lucky Charm Prayer Aunty Is Back: Mumbai Won Again

ದುಬೈ ಇಂಟರ್‌ನ್ಯಾಷ್‌ನಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ರೋಹಿತ್ ಪಡೆ ದಾಖಲೆಯ ಆರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ಡೆಲ್ಲಿ ತಂಡದ ವಿರುದ್ಧ 57 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್ ತಲುಪಿತು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ನಾಯಕ ರೋಹಿತ್ ಶರ್ಮ ಹಾಗೂ ಉಪನಾಯಕ ಕಿರಾನ್ ಪೊಲಾರ್ಡ್ ಶೂನ್ಯಕ್ಕೆ ಔಟಾದ್ರೂ 200ರನ್ ಕಲೆಹಾಕಿತು.

ಈ ಪಂದ್ಯದ ನಡುವೆ ನೋಡುಗರನ್ನು ಸೆಳೆದಿದ್ದು ಗ್ಯಾಲರಿ ಸ್ಟ್ಯಾಂಡ್‌ಗಳಲ್ಲಿದ್ದ ಪ್ರೇಯರ್ ಆಂಟಿ. ಹೌದು ಮುಂಬೈ ಇಂಡಿಯನ್ಸ್‌ ಪಂದ್ಯಗಳಲ್ಲಿ ಸ್ಟ್ಯಾಂಡ್‌ಗಳಲ್ಲಿ ಕಾಣಿಸಿಕೊಳ್ಳುವ ಮುಂಬೈ ಇಂಡಿಯನ್ಸ್ ಪಾಲಿನ ಅದೃಷ್ಟ ಎಂದೇ ಈ ಪ್ರೇಯರ್ ಆಂಟಿ ಗುರುತಿಸಿಕೊಂಡಿದ್ದಾರೆ. ಆಕೆ ವಿದೇಶದಲ್ಲೂ ಈಗ ಗುರುತಿಸಿಕೊಂಡಿರುವುದು ಆಕೆಯ ಜನಪ್ರಿಯತೆಯನ್ನು ತೋರಿಸಿದೆ.

2017 ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪುಣೆ ಸೂಪರ್‌ಜೈಂಟ್ ನಡುವಿನ ಅಂತಿಮ ಪಂದ್ಯದ ನಡುವೆ ಅವರು ಮೊದಲ ಬಾರಿಗೆ ಕಾಣಿಸಿಕೊಂಡರು. ಪುಣೆಗೆ ಐದು ಎಸೆತಗಳಲ್ಲಿ ಏಳು ರನ್ ಅಗತ್ಯವಿದ್ದಾಗ, ಅವರು ಕಣ್ಣು ಮುಚ್ಚಿ ಥ್ರಿಲ್ಲರ್ ವೀಕ್ಷಿಸಲು ನಿರಾಕರಿಸಿದರು. ಆದರೆ ಆಶ್ಚರ್ಯಕರ ರೀತಿಯಲ್ಲಿ ಮುಂಬೈ ಆ ವರ್ಷ ಟ್ರೋಫಿಯನ್ನು ಎತ್ತಿತು ಮತ್ತು ಜನರು ತಂಡಕ್ಕಾಗಿ ಮಾಡಿದ ಆಕೆಯ ಪ್ರಾರ್ಥನೆಯನ್ನು ಮೆಚ್ಚಿದರು. ಪಂದ್ಯ ಮುಗಿಯುವವರೆಗೂ ಕಣ್ಣು ಮುಚ್ಚಿದ್ದ ಆಂಟಿಯು ಅಂದು ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದ್ರು.

ಹೀಗೆ ಸುದ್ದಿಯಾದ ಬಳಿಕ ಅಂತೂ ವಿಷಯ ಬಹಿರಂಗಗೊಂಡಿತು. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರ ಒಂದು ಟ್ವೀಟ್‌ನಲ್ಲಿ ಆ ಮಹಿಳೆ ಬೇರೆ ಯಾರೂ ಅಲ್ಲ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮಾಲೀಕರಾದ ನೀತಾ ಅಂಬಾನಿಯ ತಾಯಿ ಎಂದು ತಿಳಿದುಬಂದಿತು.

ನೀತಾ ಅಂಬಾನಿ ಮುಂಬೈ ಫ್ರ್ಯಾಂಚೈಸ್‌ನ ಮಾಲೀಕರಾಗಿದ್ದು, ಆಕೆಯ ತಾಯಿ ತಂಡದ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ ಮತ್ತು ಜನಪ್ರಿಯವಾಗಿ 'ನಾನಿ' ಎಂದು ಕರೆಯಲಾಗುತ್ತದೆ. ಅವರ ಹೆಸರು ಪೂರ್ಣಿಮಾ ದಲಾಲ್, ಮತ್ತು ಅವರು ಪ್ರಸಿದ್ಧ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯ ಅತ್ತೆ. ಅವರು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸ್ಟ್ಯಾಂಡ್‌ಗೆ ಮರಳಿದ್ದರು ಜೊತೆಗೆ ಮುಂಬೈ ಪರ ಪ್ರಾರ್ಥನೆಯಲ್ಲಿ ತೊಡಗಿದ್ದರು.

ಇದನ್ನು ನೋಡಿದ ಫ್ಯಾನ್ಸ್ ಅರ್ಧ ಇನ್ನಿಂಗ್ಸ್ ಮುಗಿಯುವ ಮೊದಲೇ ಇವತ್ತು ಮುಂಬೈ ಇಂಡಿಯನ್ಸ್ ಗೆದ್ದೇ ಗೆಲ್ಲುತ್ತದೆ ಎಂದು ಟ್ರೋಲ್ ಮಾಡಿದ್ದರು. ಅಂತೆಯೇ ಮತ್ತೊಮ್ಮೆ ಮುಂಬೈ ಗೆದ್ದು ಬೀಗಿದೆ.

Story first published: Friday, November 6, 2020, 0:09 [IST]
Other articles published on Nov 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+