For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಫೈನಲ್ ಪ್ರವೇಶಿಸಿ ದಾಖಲೆ ಬರೆದ ರೋಹಿತ್ ಪಡೆ!

Mumbai Indians record in playoffs and Finals of IPL

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಸಂಘಟಿತ ಹೋರಾಟದ ಮೂಲಕ ಫೈನಲ್ ಪ್ರವೇಶಿಸಿದೆ. ನವೆಂಬರ್ 5ರಂದು ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿ ಅಂತಿಮ ಹಣಾಹಣಿಗೆ ಅರ್ಹತೆ ಪಡೆದಿದೆ. ಐಪಿಎಲ್ ನಲ್ಲಿ ಮತ್ತೊಮ್ಮೆ ಫೈನಲ್ ಹಂತ ತಲುಪುವ ಮೂಲಕ ಹೊಸ ದಾಖಲೆ ಬರೆದಿದೆ.

ಕ್ವಾಲಿಫೈಯರ್ 1 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಪಡೆ 20 ಓವರ್ ಗಳಲ್ಲಿ 200/5 ಸ್ಕೋರ್ ಮಾಡಿತ್ತು. ಡೆಲ್ಲಿ ತಂಡ ಶೂನ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು ಅತ್ಯಂತ ಕಳಪೆ ಆರಂಭ ಪಡೆದುಕೊಂಡಿತು. ಕೊನೆಗೆ 20 ಓವರ್ ಗಳಲ್ಲಿ 143/8 ಸ್ಕೋರ್ ಮಾಡಿ 57 ರನ್ ಗಳಿಂದ ಪಂದ್ಯ ಕಳೆದುಕೊಂಡಿತು.

2010ರಿಂದ ಮುಂಬೈ ಇಂಡಿಯನ್ಸ್ ತಂಡ 6 ಬಾರಿ ಐಪಿಎಲ್ ಫೈನಲ್ಸ್ ತಲುಪಿದ್ದು, 4 ಬಾರಿ ಕಪ್ ಗೆದ್ದಿದ್ದು, ಒಂದು ಬಾರಿ ರನ್ನರ್ ಆಪ್ ಆಗಿದೆ. ಮುಂಬೈ ತಂಡ 2013, 2015, 2017 ಹಾಗೂ 2019ರಲ್ಲಿ ಕಪ್ ಗೆದ್ದಿದೆ.

2010: ಸೆಮಿಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶ. ಫೈನಲ್ ನಲ್ಲಿ ಚೆನ್ನೈ ವಿರುದ್ಧ ಸೋಲು, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ.

2011: ಎಲಿಮಿನೇಟರ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸೋಲಿಸಿ, ಕ್ವಾಲಿಫೈಯರ್ 2 ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಕಂಡಿತು.

2012: ಎಲಿಮಿನೇಟರ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು.

2013: ಕ್ವಾಲಿಫೈಯರ್ 1ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು, ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವು, ಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದು ಮೊದಲ ಬಾರಿಗೆ ಚಾಂಪಿಯನ್.

2014: ಎಲಿಮಿನೇಟರ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು.

2015: ಕ್ವಾಲಿಫೈಯರ್ 1ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು, ಫೈನಲ್ ಪ್ರವೇಶ, ಫೈನಲ್ ನಲ್ಲಿ ಮತ್ತೆ ಚೆನ್ನೈ ವಿರುದ್ಧ ಗೆದ್ದು ಚಾಂಪಿಯನ್ಸ್.

2017: ಕ್ವಾಲಿಫೈಯರ್ 1ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಸೋಲು, ಕ್ವಾಲಿಫೈಯರ್ 2ರಲ್ಲಿ ಕೆಕೆಆರ್ ವಿರುದ್ಧ ಗೆಲುವು, ಫೈನಲ್ಸ್ ನಲ್ಲಿ ಪುಣೆ ವಿರುದ್ಧವೇ ಗೆದ್ದು ಮುಂಬೈ ಚಾಂಪಿಯನ್ಸ್

2019: ಕ್ವಾಲಿಫೈಯರ್ 1ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು-ಫೈನಲ್ಸ್ ನಲ್ಲಿ ಚೆನ್ನೈ ವಿರುದ್ಧವೇ ಗೆದ್ದು ಮುಂಬೈ ಚಾಂಪಿಯನ್ಸ್

ಒಟ್ಟಾರೆ, 199 ಪಂದ್ಯಗಳಿಂದ 114 ಗೆಲುವು, 80 ಸೋಲು ಶೇ 58.79 ಸರಾಸರಿ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ 5ನೇ ಬಾರಿಗೆ ಚಾಂಪಿಯನ್ಸ್ ಆಗಲು ಇನ್ನೊಂದು ಪಂದ್ಯ ಗೆದ್ದರೆ ಸಾಕು.

Story first published: Friday, November 6, 2020, 6:45 [IST]
Other articles published on Nov 6, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+