For Quick Alerts
ALLOW NOTIFICATIONS  
For Daily Alerts
 

MI vs GT: ಗುಜರಾತ್ ಆಸೆಗೆ ಪೆಟ್ಟು: ಮುಂಬೈ 2ನೇ ಕ್ವಾಲಿಫೈಯರ್‌ಗೆ ಕ್ವಾಲಿಫೈ

ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸಂಘಟಿತ ಆಟದ ಪ್ರದರ್ಶನ ನೀಡಿದ್ದ ಗುಜರಾತ್‌ ಟೈಟಾನ್ಸ್ ತಂಡವನ್ನು ಮಣಿಸಿತು. ಈ ಮೂಲಕ ಮುಂಬೈ ಇಂಡಿಯನ್ಸ್‌ ತಂಡ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ. ಅಹಮದಾಬಾದ್‌ನಲ್ಲಿ ಭಾನುವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 228 ರನ್‌ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 208 ರನ್‌ ಗಳಿಸಿ ಸೋಲು ಕಂಡಿತು. ಈ ಮೂಲಕ ಗುಜರಾತ್‌ ಟೈಟಾನ್ಸ್ ತಂಡ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ತನ್ನ ಅಭಿಯಾನವನ್ನು ಮುಗಿಸಿದೆ. ಶುಭಮನ್‌ ಗಿಲ್‌ ಪಡೆ ಪ್ಲೇ ಆಫ್‌ನಿಂದ ಹೊರ ಬಿದ್ದಿದೆ.

Mumbai Indians Triumph Over Gujarat Titans in Eliminator Advance to Qualifier 2

ಸವಾಲಿನ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಶುಭಮನ್‌ ಗಿಲ್‌ ನಿರಾಸೆ ಅನುಭವಿಸಿದರು. ಇನಿಂಗ್ಸ್‌ನ 4ನೇ ಎಸೆತದಲ್ಲಿ ಗಿಲ್‌ ಔಟ್‌ ಆದರು. ಉತ್ತಮವಾಗಿ ಬ್ಯಾಟ್ ಮಾಡಿದ ಕುಸಾಲ್‌ ಮೆಂಡಿಸ್‌ ಭರವಸೆ ಮೂಡಿಸಿದರು. ಇವರು ಎರಡನೇ ವಿಕೆಟ್‌ಗೆ ಸಾಯಿ ಸುದರ್ಶನ್‌ ಹಾಗೂ ಮೆಂಡೀಸ್‌ ಜೋಡಿ 34 ಎಸೆತಗಳಲ್ಲಿ 64 ರನ್‌ ಸೇರಿಸಿತು. ಈ ವೇಳೆ ಕುಸಾಲ್‌ ಮೆಂಡೀಸ್‌ 20 ರನ್‌ ಬಾರಿಸಿದ್ದ ವೇಳೆ ಹಿಟ್‌ ವಿಕೆಟ್‌ ಆದರು.

ಸುದರ್ಶನ್‌, ಸುಂದರ್‌ ಅಮೋಘ ಜೊತೆಯಾಟ

ಗುಜರಾತ್‌ ಟೈಟಾನ್ಸ್‌ ತಂಡದ ಭರವಸೆಯ ಬ್ಯಾಟರ್‌ ಸಾಯಿ ಸುದರ್ಶನ್‌ ಹಾಗೂ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೊಡಿ 44 ಎಸೆತಗಳಲ್ಲಿ 84 ರನ್‌ ಸಿಡಿಸಿದರು. ಈ ಜೋಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿತು. ಇನ್ನು ವಾಷಿಂಗ್ಟನ್‌ 5 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 48 ರನ್‌ ಬಾರಿಸಿ, ಜಸ್ಪ್ರಿತ್‌ ಬುಮ್ರಾ ಅವರು ಎಸೆದ ಯಾರ್ಕರ್‌ಗೆ ಉತ್ತರಿಸುವಲ್ಲಿ ವಿಫಲರಾಗಿ ಪೆವಿಲಿಯನ್‌ ಸೇರಿದರು.

Mumbai Indians Triumph Over Gujarat Titans in Eliminator Advance to Qualifier 2

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಸಾಯಿ ಸುದರ್ಶನ್‌, ಮಹತ್ವದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದರು. ಇವರು ಕ್ರೀಸ್‌ನಲ್ಲಿ ಇರುವ ವರೆಗೂ ಗುಜರಾತ್‌ ಕ್ಯಾಂಪ್‌ನಲ್ಲಿ ಮಂದಹಾಸ ಮೂಡಿಸಿತ್ತು. ಸುದರ್ಶನ್‌ 49 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ 80 ರನ್‌ ಸಿಡಿಸಿದರು. ಉಳಿದಂತೆ ಗುಜರಾತ್‌ ಟೈಟಾನ್ಸ್ ತಂಡದ ಬ್ಯಾಟರ್‌ಗಳು ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಪರಿಣಾಮ ಟೈಟಾನ್ಸ್‌ 20 ರನ್‌ಗಳ ಸೋಲು ಕಂಡಿತು.

ಭರ್ಜರಿ ಜೊತೆಯಾಟದ ಕಾಣಿಕೆ

ಇದಕ್ಕೊ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರರಾದ ರೋಹಿತ್‌ ಶರ್ಮಾ ಹಾಗೂ ಜಾನಿ ಬೇರ್‌ ಸ್ಟೋ (48) ಜೋಡಿ ಮೊದಲ ವಿಕೆಟ್‌ಗೆ 84 ರನ್ ಸೇರಿಸಿತು. ಎರಡನೇ ವಿಕೆಟ್‌ಗೂ ಸೂರ್ಯಕುಮಾರ್‌ ಯಾದವ್ (33) ಹಾಗೀ ರೋಹಿತ್ ಶರ್ಮಾ ಜೋಡಿ 34 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಆರಂಭಿಕ ರೋಹಿತ್ ಶರ್ಮಾ 9 ಬೌಂಡರಿ, 4 ಸಿಕ್ಸರ್‌ ಸಹಾಯದಿಂದ 81 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು.

ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ (25), ಹಾರ್ದಿಕ್ ಪಾಂಡ್ಯ (ಅಜೇಯ 22) ರನ್‌ಗಳನ್ನು ಹೆಚ್ಚಿಸುವಲ್ಲಿ ಸಫಲರಾದರು. ಪರಿಣಾಮ ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತವನ್ನು ಕಲೆ ಹಾಕುವಲ್ಲಿ ಸಫಲವಾಯಿತು.

Story first published: Friday, May 30, 2025, 23:42 [IST]
Other articles published on May 30, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+