Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

GT vs MI: ಅಗ್ರ ಸ್ಥಾನಕ್ಕಾಗಿ ಮುಂಬೈ, ಗುಜರಾತ್ ಫೈಟ್‌

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಲಯದಲ್ಲಿರುವ ಮುಂಬೈ ಇಂಡಿಯನ್ಸ್‌ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮಂಗಳವಾರ ಕಾದಾಟ ನಡೆಸಲಿವೆ. ಈ ರಣ ರೋಚಕ ಕಾದಾಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಿದ್ಧರಾಗಿದ್ದಾರೆ. ಈ ಎರಡೂ ತಂಡಗಳು ಈಗ 14 ಅಂಕಗಳನ್ನು ಕಲೆ ಹಾಕಿದ್ದು, ಪ್ಲೇ ಆಫ್‌ ರೇಸ್‌ನಲ್ಲಿವೆ. ಮುಂಬೈ 3, ಗುಜರಾತ್‌ 4ನೇ ಸ್ಥಾನದಲ್ಲಿದ್ದು, ಇಂದು ಗೆಲ್ಲುವ ತಂಡ ನಿಶ್ಚಿತವಾಗಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಲಿದೆ.

ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆಯಲಿರುವ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮುಂಬೈ ಈ ಪಂದ್ಯದಲ್ಲಿ ಯಾವುದೇ ತಂಡ ಜಯ ಸಾಧಿಸಿದರೂ, ನೇರವಾಗಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯಲಿವೆ. ಈಗಾಗಲೇ ಉಭಯ ತಂಡಗಳು 6 ಬಾರಿ ಕಾದಾಟ ನಡೆಸಿದ್ದು, ಗುಜರಾತ್ 4 ಬಾರಿ, ಮುಂಬೈ 2 ಬಾರಿ ಜಯ ಸಾಧಿಸಿದೆ. ಉಭಯ ತಂಡಗಳು ಅಂಗಳಕ್ಕೆ ಇಳಿದಾಗ 233 ರನ್‌ ಗರಿಷ್ಠ ಮೊತ್ತವಾಗಿದೆ.

Mumbai Indians vs Gujarat Titans Set for a High-Stakes IPL Clash with Playoff Spot on the Line

ಭರ್ಜರಿ ಲಯದಲ್ಲಿರುವ ಬ್ಯಾಟರ್ಸ್‌

ಮುಂಬೈ ಇಂಡಿಯನ್ಸ್ ತಂಡದ ಟಾಪ್‌ ಆರ್ಡರ್ ಬ್ಯಾಟರ್ಸ್‌ ಭರ್ಜರಿ ಲಯದಲ್ಲಿದ್ದಾರೆ. ಆರಂಭಿಕರಾ ರಯಾನ್‌ ರಿಕಲ್ಟನ್‌ ಹಾಗೂ ರೋಹಿತ್ ಶರ್ಮಾ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಸಹ ಕ್ಲಾಸಿಕ್‌ ಬ್ಯಾಟಿಂಗ್ ನಡೆಸುತ್ತಿದ್ದು, ಆರೆಂಜ್ ಕ್ಯಾಪ್‌ ಮೇಲೆ ಕಣ್ಣು ನೆಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ, ತಿಲಕ್‌ ವರ್ಮಾ ತವರಿನ ಅಂಗಳದಲ್ಲಿ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಮುಂಬೈ ತಂಡದ ಬ್ಯಾಟಿಂಗ್ ವಿಭಾಗವೂ ಬಲಾಢ್ಯವಾಗಿದೆ. ವೇಗಿ ದೀಪಕ್ ಚಹಾರ್‌, ಟ್ರೆಂಟ್ ಬೌಲ್ಟ್‌ ಹೊಸ ಚೆಂಡಿನಲ್ಲಿ ಎದುರಾಳಿಗಳಿಗೆ ಕಾಡಬಲ್ಲರು. ಇನ್ನು ಜಸ್ಪ್ರಿತ್‌ ಬುಮ್ರಾ ತಮ್ಮ ಯಾರ್ಕರ್‌ ಮೂಲಕ ಬ್ಯಾಟರ್‌ಗಳಿಗೆ ಕಟ್ಟಿ ಹಾಕಬಲ್ಲರು. ಹಾರ್ದಿಕ್ ಪಾಂಡ್ಯ, ಈ ಆವೃತ್ತಿಯಲ್ಲಿ ಬೌಲಿಂಗ್‌ನಲ್ಲಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಪಿನ್ ಬೌಲರ್ ಆಗಿ ಕರಣ್ ಶರ್ಮಾ ಮ್ಯಾಜಿಕ್ ನಡೆಸಲು ಸಿದ್ದರಾಗಿದ್ದಾರೆ.

Mumbai Indians vs Gujarat Titans Set for a High-Stakes IPL Clash with Playoff Spot on the Line

ಯುವ ಆಟಗಾರರೇ ಆಕರ್ಷಣೆ

ಗುಜರಾತ್ ತಂಡದ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಯುವ ಆಟಗಾರರು ಭರ್ಜರಿ ಕಾಣಿಕೆ ನೀಡುತ್ತಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಬಿ ಸಾಯಿ ಸುದರ್ಶನ್‌, ಶುಭಮನ್‌ ಗಿಲ್‌ ಉತ್ತಮ ಅಡಿಪಾಯವನ್ನು ತಂಡಕ್ಕೆ ಹಾಕಿಕೊಡುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್‌, ವಾಶಿಂಗ್ಟನ್‌ ಸುಂದರ್, ಶಾರೂಖ್ ಖಾನ್‌, ರಾಹುಲ್ ತೆವಾಟಿಯಾ ಬಿಗ್‌ ಹಿಟ್ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಹೊಸ ಚೆಂಡಿನಲ್ಲಿ ಮೊಹಮ್ಮದ್ ಸಿರಾಜ್‌, ಇಶಾಂತ್ ಕಿಶನ್‌ ಬಿಗುವಿನ ದಾಳಿ ನಡೆಸುವ ಅನಿವಾರ್ಯತೆ ಇದೆ. ಮಿಡ್ಲ್ ಓವರ್‌ಗಳಲ್ಲಿ ಪ್ರಸಿದ್ಧ್ ಕೃಷ್ಣಾ ಕಮಾಲ್ ಪ್ರದರ್ಶನ ನೀಡಿದ್ದಾರೆ. ಸ್ಪಿನ್ ವಿಭಾಗದಲ್ಲಿ ರಶೀದ್ ಖಾನ್‌, ಸಾಯಿ ಕಿಶೋರ್‌ ಪಿರ್ಕಿ ಜಾದು ನಡೆಸಿದರೆ, ಗುಜರಾತ್ ಜಯ ಸನಿಹವಾಗುತ್ತದೆ.

Story first published: Tuesday, May 6, 2025, 7:11 [IST]
Other articles published on May 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+