'ಈ ಸಲ ಕಪ್ ನಮ್ದೇ' ಎಂದ ಮುಂಬೈ ಇಂಡಿಯನ್ಸ್-ಟ್ವಿಟರ್ ಪ್ರತಿಕ್ರಿಯೆಗಳು

ಹೈದರಾಬಾದ್, ಮೇ 13: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ಕ್ಕೆ ಭಾನುವಾರ (ಮೇ 12) ತೆರೆ ಬಿದ್ದಿದೆ. ಹೈದರಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೇವಲ 1 ರನ್‌ನಿಂದ ಮಣಿಸಿದ ಮುಂಬೈ ಇಂಡಿಯನ್ಸ್ ಐಪಿಎಲ್ 4ನೇ ಟ್ರೋಫಿ ಗೆಲುವನ್ನು ಸಂಭ್ರಮಿಸಿತು.
ಮುಂಬೈ ನೀಡಿದ್ದ 150 ರನ್ ಸಾಧಾರಣ ರನ್ ಗುರಿ ಬೆನ್ನತ್ತಿದ್ದ ಚೆನ್ನೈ ಮತ್ತೆ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಮುನ್ಸೂಚನೆ ನೀಡಿತ್ತು. ಆದರೆ ರೋಚಕ ಹಂತಕ್ಕೆ ತಲುಪಿದ ಪಂದ್ಯದಲ್ಲಿ ಮುಂಬೈ ಮೇಲುಗೈ ಸಾಧಿಸಿತು.
2019ರ ಐಪಿಎಲ್ ಮುಗಿದಿದೆ. ಆದರೆ ಭಾರತದ ಈ ಅದ್ದೂರಿ ಕ್ರಿಕೆಟ್ ಹಬ್ಬದ ಗುಂಗು ಕೊಂಚ ಕಾಲ ಇದ್ದೇ ಇದೆ. ಐಪಿಎಲ್ ಗುಂಗು ಕಳೆದು ಹೋಗುವ ಮುನ್ನ ಫೈನಲ್ ಪಂದ್ಯದ ಒಂದಿಷ್ಟು ಕ್ಷಣಗಳ ಇಣುಕುನೋಟ ಇಲ್ಲಿದೆ.
4ನೇ ಬಾರಿಗೆ ಕಪ್ ಗೆದ್ದ ಮುಂಬೈ
ಐಪಿಎಲ್ 2019ರ ಫೈನಲ್ ಪಂದ್ಯಕ್ಕೂ ಮುನ್ನ ತಲಾ 3 ಸಾರಿ ಟ್ರೋಫಿ ಗೆದ್ದ ಬಲಿಷ್ಟ ತಂಡಗಳಾಗಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಗುರುತಿಸಿಕೊಂಡಿದ್ದವು. ಆದರೆ ಕೇವಲ 1 ರನ್‌ನಿಂದ ಮುಂಬೈ ಈ ಸಾರಿ 4ನೇ ಐಪಿಎಲ್ ಕಪ್ ತನ್ನದಾಗಿಸಿಕೊಂಡಿತು.
'ಕಪ್ ಬಿಡಲ್ಲ' ಅಂದರೆ ಎಂಐ ಕೇಳಲಿಲ್ಲ!
ಅಸಲಿಗೆ 'ಈ ಸಲ ಕಪ್ ನಮ್ದೇ' ಸಾಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ್ದು (ಅಭಿಮಾನಿಗಳದ್ದು). ಈ ಐಪಿಎಲ್‌ನಲ್ಲಿ ಆರ್‌ಸಿಬಿ ಅಭಿಮಾನಿಗಳು 'ಈ ಸಲ ಕಪ್ ಬಿಡಲ್ಲ ಅಂದರೂ ಮುಂಬೈ ಇಂಡಿಯನ್ಸ್ ಬಿಡಲಿಲ್ಲ; ಕಪ್ ಗೆದ್ದೇಬಿಟ್ಟಿತು. 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಪ್ಲೇ ಆಫ್ ಪ್ರವೇಶದ ಕನಸನ್ನು ಕೈಚೆಲ್ಲಿದ ಮೊದಲ ತಂಡವಾಗಿ ಕೊಹ್ಲಿ ನಾಯಕತ್ವದ ಆರ್‌ಸಿಬಿ ಗುರುತಿಸಿಕೊಂಡಿತ್ತು.
ಹೀರೋ ಆಗಿ ಮೆರೆದ ಮಾಲಿಂಗ
ರೋಚಕ ಹಂತಕ್ಕೆ ತಿರುಗಿದ್ದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ ಅಂತಿಮ ಎಸೆತಕ್ಕೆ 2 ರನ್‌ಗಳ ಅಗತ್ಯವಿತ್ತು. ಮುಂಬೈ ವೇಗಿ ಲಸಿತ್ ಮಾಲಿಂಗ, ಶಾರ್ದೂಲ್ ಠಾಕೂರ್ ಅವರನ್ನು ಎಲ್‌ಬಿಡಬ್ಲ್ಯೂ ಮೂಲಕ ಔಟ್ ಮಾಡಿ ಮುಂಬೈ ಗೆಲುವಿನ ಹೀರೋ ಆಗಿ ಮೆರೆದರು.
ನೋ ಬಾಲ್ ನಾಟಕ
ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನಲ್ಲಿ ನಾಟಕೀಯ ಕ್ಷಣವೂ ಕಾಣಸಿಕ್ಕಿತ್ತು. ಅಂತಿಮ ಓವರ್ ಎಸೆಯಲು ಬಂದಿದ್ದ ಸಿಎಸ್‌ಕೆ ಬೌಲರ್ ಡ್ವೇನ್ ಬ್ರಾವೋ ಎರಡು ಎಸೆತಗಳು ವೈಡ್ ಬಾಲ್ ಆಗಿದ್ದವು. ಆದರೆ ಅಂಪೈರ್ ವೈಡ್ ತೀರ್ಪು ನೀಡಲಿಲ್ಲ. ಸ್ಟ್ರೈಕ್‌ನಲ್ಲಿದ್ದ ಕೀರನ್ ಪೊಲಾರ್ಡ್ ಸಿಟ್ಟಿಗೆದ್ದು ನೋಬಾಲ್ ಲೈನ್ ನಲ್ಲಿ ಬ್ಯಾಟ್ ಹಿಡಿದು ನಿಂತಿದ್ದು ನಡೆಯಿತು.
ರನ್ ಔಟ್ ಆದ ಧೋನಿ
ಪಂದ್ಯದಲ್ಲಿ ಸಿಎಸ್‌ಕೆ ಸೋಲಿಗೆ ನಾಯಕ ಎಂಎಸ್ ಧೋನಿಯ ರನ್ ಔಟ್ ಕೂಡ ಕಾರಣವಾಗಿತ್ತು. 12.4ನೇ ಓವರ್‌ನಲ್ಲಿ ಧೋನಿ ಔಟ್ ಆದರು. ಆದರೆ ಈ ಔಟ್ ತೀರಾ ಗೊಂದಲಮಯವಾಗಿತ್ತು. ಅಂತಿಮವಾಗಿ ಡಿಸಿಶನ್ ರಿವ್ಯೂ ಸಿಸ್ಟಮ್ (ಡಿಆರ್‌ಎಸ್) ಪ್ರಕಾರ ಧೋನಿಯನ್ನು ರನ್ ಔಟ್ ಎಂದು ಘೋಷಿಸಲಾಯ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications