For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಹಾಲಿ ಚಾಂಪಿಯನ್ ಸಿಎಸ್‌ಕೆಗೆ ಸೋಲು, ಎಂಐ ಚಾಂಪಿಯನ್!

IPL 2019: ಎಲ್ಲದರಲ್ಲೂ ಚೆನೈ ತಂಡವನ್ನು ಹಿಂದಿಕ್ಕಿದ ರೋಹಿತ್ ಶರ್ಮಾ..! | Oneindia kannada
Mumbai vs Chennai, IPL 2019 Final - Live Cricket Score

ಹೈದರಾಬಾದ್, ಮೇ 12: ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ಮತ್ತೆ ಚಾಂಪಿಯನ್ ಎನಿಸಿಕೊಂಡಿದೆ. ಹೈದರಾಬಾದ್‌ನಲ್ಲಿ ಭಾನುವಾರ (ಮೇ 12) ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು 1 ರನ್‌ನಿಂದ ಮಣಿಸಿ ಎಂಐ 4ನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್, ಕ್ವಿಂಟನ್ ಡಿ ಕಾಕ್ 29, ರೋಹಿತ್ ಶರ್ಮಾ 15, ಕೀರನ್ ಪೊಲಾರ್ಡ್ 41, ಇಶಾನ್ ಕಿಶಾನ್ 23 ರನ್ ನೆರವಿನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 149 ರನ್ ಪೇರಿಸಿತು. ಎಂಐ ಇನ್ನಿಂಗ್ಸ್‌ನಲ್ಲಿ ಸಿಎಸ್‌ಕೆಯ ದೀಪಕ್ ಚಾಹರ್ 3, ಶಾರ್ದೂಲ್ ಠಾಕೂರ್ ಮತ್ತು ಇಮ್ರಾನ್ ತಾಹಿರ್ 2 ವಿಕೆಟ್‌ನೊಂದಿಗೆ ಮಿಂಚಿದರು.

ಪಂದ್ಯದ Live Scorecard ಕೆಳಗಿದೆ

1
45949

ಗುರಿ ಬೆಂಬತ್ತಿದ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಬ್ಯಾಟಿಂಗ್ ಆರ್ಭಟ ನಡೆಸಿದ ಶೇನ್ ವ್ಯಾಟ್ಸನ್ 80 (59 ಎಸೆತ) ತಂಡದ ಗೆಲುವಿನ ಹೀರೋ ಎನಿಸುವುದರಲ್ಲಿದ್ದರು. ಅಂತಿಮ ಓವರ್‌ನಲ್ಲಂತೂ ಪಂದ್ಯ ರೋಚಕ ಘಟ್ಟ ತಲುಪಿತ್ತು. ಕೊನೆಯ ಎಸೆತಕ್ಕೆ ಸಿಎಸ್‌ಕೆ ಗೆಲುವಿಗೆ 2 ರನ್‌ಗಳ ಅಗತ್ಯವಿತ್ತು.

ಮುಂಬೈ ವೇಗಿ ಲಸಿತ್ ಮಾಲಿಂಗಾ ಅಂತಿಮ ಎಸೆತಕ್ಕೆ ಶಾರ್ದೂಲ್ ಠಾಕೂರ್ ಅವರನ್ನು ಎಲ್‌ಬಿಡಬ್ಲ್ಯೂಮೂಲಕ ಔಟ್ ಮಾಡಿದ್ದರಿಂದ ಮುಂಬೈ ರೋಚಕ ಗೆಲುವಿನ ಸಂಭ್ರಮಾಚರಿಸುವಂತಾಯ್ತು. ಚೆನ್ನೈ ಬ್ಯಾಟಿಂಗ್ ವೇಳೆ ಮುಂಬೈ ಬೌಲರ್ ಜಸ್‌ಪ್ರೀತ್ ಬೂಮ್ರಾ 2, ಕೃನಾಲ್ ಪಾಂಡ್ಯ, ಮಾಲಿಂಗ, ರಾಹುಲ್ ಚಾಹರ್ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಕೊಡುಗೆಯಿತ್ತರು. ಐಪಿಎಲ್ ಇತಿಹಾಸದಲ್ಲಿ 4ನೇ ಬಾರಿ ಕಪ್‌ ಗೆದ್ದ ಹಿರಿಮೆ ಎಂಐಯದ್ದಾದರೆ, ಸಿಎಸ್‌ಕೆ 3 ಗೆಲುವುಗಳೊಂದಿಗೆ ಮುಂಬೈ ಬೆನ್ನಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಫಾ ಡು ಪ್ಲೆಸಿಸ್, ಶೇನ್ ವ್ಯಾಟ್ಸನ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ (ವಿಕೆ & ಸಿ), ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್.

ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರಾನ್ ಪೊಲಾರ್ಡ್, ರಾಹುಲ್ ಚಹಾರ್, ಮಿಚೆಲ್ ಮ್ಯಾಕ್ಕ್ಲೆನಾನ್, ಜಸ್‌ಪ್ರೀತ್‌, ಲಸಿತ್ ಮಾಲಿಂಗ.

Story first published: Monday, May 13, 2019, 7:32 [IST]
Other articles published on May 13, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+