For Quick Alerts
ALLOW NOTIFICATIONS  
For Daily Alerts
 

ಸೂಪರ್‌ ಕಿಂಗ್ಸ್ ಸೋಲಿಸಿ ಐಪಿಎಲ್ 2019 ಫೈನಲ್‌ಗೆ ಲಗ್ಗೆಯಿಟ್ಟ ಇಂಡಿಯನ್ಸ್

IPL 2019 : IPL ನಲ್ಲಿ ಚೆನೈಗೆ ಭಾರಿ ಆಘಾತ..! | Oneindia Kannada
Mumbai vs Chennai, Qualifier 1 - Live Cricket Score

ಚೆನ್ನೈ, ಮೇ 7: ಪ್ಲೇ ಆಫ್ಸ್‌ಗೆ ಕೊಂಚ ಲೇಟಾಗಿ ಪ್ರವೇಶಿಸಿದ್ದರೂ 2019ರ ಐಪಿಎಲ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ ಮೊದಲ ತಂಡವಾಗಿ ರೋಹಿತ್ ಶರ್ಮಾ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡ ಗುರುತಿಸಿಕೊಂಡಿದೆ. ಚೆನ್ನೈಯಲ್ಲಿ ಮಂಗಳವಾರ (ಮೇ 7) ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ ಮುಂಬೈ ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು. ಎಂಐ ಫೈನಲ್‌ಗೆ ಪ್ರವೇಶಿಸುತ್ತಿರುವುದು ಇದು ಐದನೇ ಬಾರಿ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದ ಚೆನ್ನೈ ಉತ್ತಮ ಆಟ ತೋರಿಸಲಿಲ್ಲ. ಫಾ ಡು ಪ್ಲೆಸಿಸ್ 6, ಸುರೇಶ್ ರೈನಾ 5, ಶೇನ್ ವ್ಯಾಟ್ಸನ್ 10, ಮುರುಳಿ ವಿಜಯ್ 26 ರನ್‌ ಗಳಿಸಿ ಔಟಾದರು. ಆದರೆ ಅಂಬಾಟಿ ರಾಯುಡು ಮತ್ತು ಎಂಸ್ ಧೋನಿ ಜೊತೆಯಾಟ ತಂಡವನ್ನು ಕೊಂಚ ರನ್ ಕುಸಿತದಿಂದ ಪಾರು ಮಾಡಿತು.

ಪಂದ್ಯದ Score card ಕೆಳಗಿದೆ

1
45946

ಧೋನಿ ಅಜೇಯ 37, ರಾಯುಡು ಅಜೇಯ 42 ರನ್ ಸೇರಿಸಿದ್ದರಿಂದ ಸಿಎಸ್‌ಕೆ 4 ವಿಕೆಟ್ ನಷ್ಟದಲ್ಲಿ 131 ರನ್ ಗಳಿಸಿತು. ಚೆನ್ನೈ ಇನ್ನಿಂಗ್ಸ್ ವೇಳೆ ರಾಹುಲ್ ಚಾಹರ್ 2, ಕೃನಾಲ್ ಪಾಂಡ್ಯ ಮತ್ತು ಜಯಂತ್ ಯಾದವ್ ತಲಾ 1 ವಿಕೆಟ್ ಪಡೆದರು.

ಸುಲಭ ರನ್‌ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕೂಡ ಆರಂಭಿಕ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಅದರಲ್ಲೂ ಎದುರಾಳಿ ಬೌಲರ್ ಇಮ್ರಾನ್ ತಾಹಿರ್ 2 ವಿಕೆಟ್‌ಗಳನ್ನು ಉರುಳಿಸಿ ತಂಡಕ್ಕೆ ಭೀತಿಯೊಡ್ಡಿದರು. ಆದರೆ ಸೂರ್ಯ ಕುಮಾರ್ ಯಾದವ್ 71 (54 ಎಸೆತ), ಇಶಾನ್ ಕಿಶಾನ್ 28, ಹಾರ್ದಿಕ್ ಪಾಂಡ್ಯ 13 ರನ್ ಸೇರಿಸಿ ತಂಡವನ್ನು ಗೆಲುವಿನ ದಡಕ್ಕೆ ತಂದರು.

ಮುಂಬೈ 18.3 ಓವರ್‌ಗೆ 4 ವಿಕೆಟ್ ಕಳೆದು 132 ರನ್ ಗೆರೆ ದಾಟಿತು. ಮುಂಬೈ ಗೆಲುವಿನ ರುವಾರಿ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಅಂತೂ ಈ ಗೆಲುವಿನೊಂದಿಗೆ ಎಂಐ ನಾಲ್ಕನೇ ಬಾರಿಗೆ ಕಪ್ ಎತ್ತುವ ಮುನ್ಸೂಚನೆ ನೀಡಿದಂತಾಗಿದೆ. ಚೆನ್ನೈ ತಂಡ ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಮತ್ತೆ ಪ್ರಶಸ್ತಿ ಸುತ್ತಿಗಾಗಿ ಕಾದಾಡಲಿದೆ.

ಮುಂಬೈ ಇಂಡಿಯನ್ಸ್ ತಂಡ: ಫಾ ಡು ಪ್ಲೆಸಿಸ್, ಶೇನ್ ವ್ಯಾಟ್ಸನ್, ಸುರೇಶ್ ರೈನಾ, ಮುರಳಿ ವಿಜಯ್, ಎಂಎಸ್ ಧೋನಿ (ಸಿ & ವಿ.ಕೆ), ಅಂಬಾಟಿ ರಾಯುಡು, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್, ದೀಪಕ್ ಚಾಹರ್, ಇಮ್ರಾನ್ ತಾಹಿರ್.

ಚೆನ್ನೈ ಸೂಪರ್‌ ಕಿಂಗ್ಸ್ ತಂಡ: ಕ್ವಿಂಟನ್ ಡಿ ಕಾಕ್ (ವಿಕೆ), ರೋಹಿತ್ ಶರ್ಮಾ (ಸಿ), ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ಜಯಂತ್ ಯಾದವ್, ರಾಹುಲ್ ಚಾಹರ್, ಜಸ್‌ಪ್ರೀತ್‌ ಬೂಮ್ರಾ, ಲಸಿತ್ ಮಾಲಿಂಗ.

Story first published: Tuesday, May 7, 2019, 23:34 [IST]
Other articles published on May 7, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+