Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡಿ ಕಾಕ್, ಮನೀಶ್ ಭರ್ಜರಿ ಬ್ಯಾಟಿಂಗ್: ಮುಂಬೈಗೆ ಸೂಪರ್‌ ಓವರ್ ಗೆಲುವು!

Mumbai vs Hyderabad, 51st Match - Live Cricket Score

ಮುಂಬೈ, ಮೇ 2: ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಗುರುವಾರ (ಮೇ 2) ನಡೆದ ಐಪಿಎಲ್ 51ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಸಮಬಲ ಸಾಧಿಸಿದವು. ಆದರೆ ಕನ್ನಡಿಗ ಮನೀಶ್ ಪಾಂಡೆ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಪಂದ್ಯ ಸೂಪರ್‌ ಓವರ್‌ಗೆ ತಿರುಗಿತ್ತು. ಅಂತಿಮವಾಗಿ ಎಂಐ ರೋಚಕ ಜಯ ಗಳಿಸಿದೆ. ಇದರೊಂದಿಗೆ ಮುಂಬೈ ಈ ಐಪಿಎಲ್‌ನಲ್ಲಿ ಪ್ಲೇ ಆಫ್ಸ್ ಪ್ರವೇಶಿಸಿದ 3ನೇ ತಂಡವಾಗಿ ಹೊರಹೊಮ್ಮಿದೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಮುಂಬೈಗೆ ರೋಹಿತ್ ಶರ್ಮಾ 24, ಕ್ವಿಂಟನ್ ಡಿ ಕಾಕ್ 69, ಸೂರ್ಯಕುಮಾರ್ ಯಾದವ್ 23, ಹಾರ್ದಿಕ್ ಪಾಂಡ್ಯ 18, ಕೀರನ್ ಪೊಲಾರ್ಡ್ 10, ಕೃನಾಲ್ ಪಾಂಡ್ಯ 9 ರನ್ ಸೇರಿಸಿದರು. ಎಂಐ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 162 ರನ್ ಮಾಡಿತು.

ಪಂದ್ಯದ ಸ್ಕೋರ್‌ಕಾರ್ಡ್ ಕೆಳಗಿದೆ

1
45927

ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್‌ಗೆ ವೃದ್ಧಿಮಾನ್ ಸಹಾ 25, ಮಾರ್ಟಿನ್ ಗಪ್ಟಿಲ್ 15, ಕೇನ್ ವಿಲಿಯಮ್ಸನ್ 3, ಮೊಹಮ್ಮದ್ ನಬಿ 31 ರನ್ ಸೇರಿಸಿದರು. ಆದರೆ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಕನ್ನಡಿಗ ಮನೀಶ್ ಪಾಂಡೆ (47 ಎಸೆತ, 71 ರನ್) ಪಂದ್ಯವನ್ನು ಸೂಪರ್‌ ಓವರ್‌ಗೆ ತಿರುಗಿಸಿದರು.

ಅಂತಿಮ ಎಸೆತಕ್ಕೆ ಹೈದರಾಬಾದ್‌ಗೆ 7 ರನ್‌ಗಳ ಅಗತ್ಯವಿತ್ತು. ಪಾಂಡೆ ಸಿಕ್ಸ್ ಬಾರಿಸಿದರು. ಎಸ್‌ಆರ್‌ಎಚ್ 20 ಓವರ್‌ಗೆ 162 ರನ್ ಗಳಿಸಿದ್ದರಿಂದ ಪಂದ್ಯ ಸೂಪರ್‌ ಓವರ್‌ನತ್ತ ಮುಖ ಮಾಡಿತು. ಆದರೆ ಸೂಪರ್ ಓವರ್‌ನಲ್ಲಿ ಹೈದರಾಬಾದ್ 6 ಎಸೆತಗಳಿಗೆ 8 ರನ್ ಕಲೆ ಹಾಕಲಷ್ಟೇ ಶಕ್ತವಾಯ್ತು. ಎಂಐ 3 ಎಸೆತಗಳಲ್ಲಿ 9 ರನ್ ಮಾಡಿತು.

ಸನ್ ರೈಸರ್ಸ್ ಹೈದರಾಬಾದ್ ತಂಡ: ವೃದ್ಧಿಮಾನ್ ಸಹಾ (W), ಮಾರ್ಟಿನ್ ಗಪ್ಟಿಲ್, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್ (ಸಿ), ಮೊಹಮ್ಮದ್ ನಬಿ, ವಿಜಯ್ ಶಂಕರ್, ರಶೀದ್ ಖಾನ್, ಅಭಿಷೇಕ್ ಶರ್ಮಾ, ಭುವನೇಶ್ವರ ಕುಮಾರ್, ಕೆ ಖಲೀಲ್ ಅಹ್ಮದ್, ಬಸಿಲ್ ಥಂಪಿ.

ಮುಂಬೈ ಇಂಡಿಯನ್ಸ್ ತಂಡ: ಕ್ವಿಂಟನ್ ಡಿ ಕಾಕ್ (ವಿಕೆ), ರೋಹಿತ್ ಶರ್ಮಾ (ಸಿ), ಎವಿನ್ ಲೆವಿಸ್, ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಬರೀಂದರ್ ಸ್ರನ್, ರಾಹುಲ್ ಚಾಹರ್, ಜಸ್‌ಪ್ರೀತ್‌ ಬೂಮ್ರಾ, ಲಸಿತ್ ಮಾಲಿಂಗ.

Story first published: Friday, May 3, 2019, 0:48 [IST]
Other articles published on May 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+