Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಪೊಲಾರ್ಡ್ ಅಬ್ಬರ, ಪಂಜಾಬ್ ವಿರುದ್ಧ ಮುಂಬೈಗೆ ರೋಚಕ ಜಯ

Mumbai vs Punjab, 24th Match - Live Cricket Score

ಮುಂಬೈ, ಏಪ್ರಿಲ್ 10: ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 24ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 3 ವಿಕೆಟ್ ರೋಚಕ ಗೆಲುವನ್ನಾಚರಿಸಿದೆ. ತಂಡದ ನಾಯಕ ಕೀರನ್ ಪೊಲಾರ್ಡ್ ಅಬ್ಬರದ ಅರ್ಧಶತಕದ ನೆರವಿನಿಂದ ಮುಂಬೈ ಜಯ ದಾಖಲಿಸಿತು. ಇದರೊಂದಿಗೆ ಪಂಜಾಬ್‌ನ ಕೆಎಲ್ ರಾಹುಲ್ ಸ್ಫೋಟಕ ಶತಕ ವ್ಯರ್ಥಗೊಂಡಂತಾಗಿದೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45900

ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್ XI ಪಂಜಾಬ್ ತಂಡ ಮುಂಬೈ ಇಂಡಿಯನ್ಸ್‌ಗೆ 198 ರನ್ ಗುರಿ ನೀಡಿತ್ತು. ಕೆಎಲ್ ರಾಹುಲ್ ಅಬ್ಬರದ ಶತಕ, ಕ್ರಿಸ್ ಗೇಲ್ ಅರ್ಧಶತಕದ ನೆರವಿನೊಂದಿಗೆ ಪಂಜಾಬ್ ಉತ್ತಮ ರನ್ ಕಲೆ ಹಾಕಿತು. ಆದರೆ ಮುಂಬೈ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 198 ರನ್ ಗುರಿ ಮುಟ್ಟಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ XI ಪಂಜಾಬ್ ಪರ ರಾಹುಲ್-ಗೇಲ್ ಉತ್ತಮ ಜೊತೆಯಾಟ ನೀಡಿದರು. ಗೇಲ್ 36 ಎಸೆತಕ್ಕೆ 63 ರನ್, ರಾಹುಲ್ 64 ಎಸೆತಕ್ಕೆ ಅಜೇಯ 100 ರನ್ ಗಳಿಸಿದರು. ಪಂಜಾಬ್ 20 ಓವರ್‌ಗೆ 4 ವಿಕೆಟ್ ಕಳೆದು 197 ರನ್ ಬಾರಿಸಿತು.

ಗುರಿ ಬೆನ್ನತ್ತಿದ ಮುಂಬೈ ಸಿದ್ದೇಶ್ ಲಾಡ್ 15, ಕ್ವಿಂಟನ್ ಡಿ ಕಾಕ್ 24, ಸೂರ್ಯಕುಮಾರ್ ಯಾದವ್ 21, ಇಶಾನ್ ಕಿಶನ್ 7, ಹಾರ್ದಿಕ್ ಪಾಂಡ್ಯ 19, ಕೃನಾಲ್ ಪಾಂಡ್ಯ 1 ರನ್‌ಗೆ ಔಟಾದಾಗ ಭೀತಿ ಅನುಭವಿಸಿತು. ಆದರೆ ತಂಡದ ಪರ ಬ್ಯಾಟಿಂಗ್ ಅಬ್ಬರ ನಡೆಸಿದ ಪೊಲಾರ್ಡ್ ಮುಂಬೈಗೆ ಆಸರೆಯಾಗಿ ಕಂಡರು.

ತಂಡದ ಗೆಲುವಿನ ಜವಾಬ್ದಾರಿ ಹೊತ್ತ ಪೊಲಾರ್ಡ್ 31 ಎಸೆತಗಳಿಗೆ 83 ರನ್ ಸೇರಿಸಿದರು. ಇದೇ ತಂಡದ ಗೆಲುವನ್ನು ಬರೆಯಿತು. 19.2ನೇ ಓವರ್‌ನಲ್ಲಿ ಅಂಕಿತ್ ರಜಪೂತ್‌ಗೆ ಪೊಲಾರ್ಡ್ ವಿಕೆಟ್ ಒಪ್ಪಿಸುವಾಗ ಅಂತಿಮ 4 ಎಸೆತಗಳಿಗೆ 4 ರನ್ ಗಳ ಅಗತ್ಯವಿತ್ತು. ಪಂದ್ಯ ಸೂಪರ್‌ಗೆ ಹೋಗುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಅಂತಿಮ ಎಸೆತಕ್ಕೆ 2 ರನ್ ತಂದ ಅಲ್ಝಾರಿ ಜೋಸೆಫ್ ತಂಡದ ಸಂಭ್ರಮಕ್ಕೆ ಕಾರಣರಾದರು.

ಮುಂಬೈ ಇಂಡಿಯನ್ಸ್ ತಂಡ: ಸಿದ್ದೇಶ್ ಲಾಡ್, ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಕೃನಾಲ್ ಪಾಂಡ್ಯ, ಕೀರನ್ ಪೊಲಾರ್ಡ್ (ಸಿ), ಹಾರ್ದಿಕ್ ಪಾಂಡ್ಯ, ರಾಹುಲ್ ಚಹಾರ್, ಅಲ್ಝಾರಿ ಜೋಸೆಫ್, ಜಾಸನ್ ಬೆಹ್ರೆನ್ಡಾರ್ಫ್, ಜಸ್‌ಪ್ರೀತ್ ಬೂಮ್ರಾ.

ಕಿಂಗ್ಸ್ XI ಪಂಜಾಬ್ ತಂಡ: ಲೋಕೇಶ್ ರಾಹುಲ್ (ವಿಕೆ), ಕ್ರಿಸ್ ಗೇಲ್, ಕರುಣ್ ನಾಯರ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಮನ್ದೀಪ್ ಸಿಂಗ್, ರವಿಚಂದ್ರನ್ ಅಶ್ವಿನ್ (ಸಿ), ಸ್ಯಾಮ್ ಕರನ್, ಹಾರ್ದಸ್ ವಿಲ್ಜೊಯೆನ್, ಮೊಹಮ್ಮದ್ ಶಮಿ, ಅಂಕಿತ್ ರಜಪೂತ್.

Story first published: Thursday, April 11, 2019, 0:42 [IST]
Other articles published on Apr 11, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+