For Quick Alerts
ALLOW NOTIFICATIONS  
For Daily Alerts
 

IPL 2019: ಬಟ್ಲರ್ ಭರ್ಜರಿ ಬ್ಯಾಟಿಂಗ್, ಮುಂಬೈ ವಿರುದ್ಧ ರಾಜಸ್ಥಾನ್‌ಗೆ ಗೆಲುವು

Mumbai vs Rajasthan, 27th Match - Live Cricket Score

ಮುಂಬೈ, ಏಪ್ರಿಲ್ 13: ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ 27ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 4 ವಿಕೆಟ್ ಜಯ ಸಾಧಿಸಿದೆ. ಜೋಸ್ ಬಟ್ಲರ್ ಅವರ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ರಾಜಸ್ಥಾನ್ ಟೂರ್ನಿಯ 2ನೇ ಗೆಲುವು ದಾಖಲಿಸಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45903

ಮುಂಬೈ ನೀಡಿದ್ದ 188 ರನ್ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಬಟ್ಲರ್ 89 (43), ಅಜಿಂಕ್ಯಾ ರಹಾನೆ 37, ಸಂಜು ಸ್ಯಾಮ್ಸನ್ 31 ರನ್ ಬೆಂಬಲದೊಂದಿಗೆ 19.3ನೇ ಓವರ್‌ಗೆ 6 ವಿಕೆಟ್ ಕಳೆದು 188 ರನ್ ಬಾರಿಸಿತು. ರಾಜಸ್ಥಾನ್ ಇನ್ನಿಂಗ್ಸ್‌ ವೇಳೆ ಮುಂಬೈಯ ಕೃನಾಲ್ ಪಾಂಡ್ಯ 3, ಜಸ್‌ಪ್ರೀತ್ ಬೂಮ್ರಾ 2 ವಿಕೆಟ್ ಪಡೆದು ಗಮನ ಸೆಳೆದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ಪರ ಪರ ಡಿ ಕಾಕ್-ರೋಹಿತ್ 96 ರನ್ ಜೊತೆಯಾಟವಿತ್ತರು. ರೋಹಿತ್ ಶರ್ಮಾ 47 ರನ್ (32 ಎಸೆತ) ಸೇರಿಸಿ ಔಟ್ ಆದರೆ ಡಿ ಕಾಕ್ 81 ರನ್ (52 ಎಸೆತ) ಕೊಡುಗೆಯಿತ್ತರು.

ಇನ್ನು ಸೂರ್ಯಕುಮಾರ್ ಯಾದವ್ 16, ಇಶನ್ ಕಿಶನ್ 5, ಕೀರನ್ ಪೊಲಾರ್ಡ್ 6, ಹಾರ್ದಿಕ್ ಪಾಂಡ್ಯ 28 ರನ್‌ ನೆರವಿನೊಂದಿಗೆ ಮುಂಬೈ 20 ಓವರ್‌ಗಳಲ್ಲಿ 187 ರನ್ ಪೇರಿಸಿತು. ಮುಂಬೈ ಇನ್ನಿಂಗ್ಸ್ ವೇಳೆ ರಾಜಸ್ಥಾನ್‌ನ ಜೋಫ್ರಾ ಆರ್ಚರ್ 39 ರನ್‌ಗೆ 3 ವಿಕೆಟ್ ಪಡೆದರು.

ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಅಲ್ಝಾರಿ ಜೋಸೆಫ್, ರಾಹುಲ್ ಚಾಹರ್, ಜಾಸನ್ ಬೆಹ್ರೆನ್ಡಾರ್ಫ್, ಜಸ್‌ಪ್ರೀತ್ ಬೂಮ್ರಾ.

ರಾಜಸ್ಥಾನ್ ರಾಯಲ್ಸ್ ತಂಡ: ಅಜಿಂಕ್ಯ ರಹಾನೆ (ಸಿ), ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆ), ಸ್ಟೀವನ್ ಸ್ಮಿತ್, ರಾಹುಲ್ ತ್ರಿಪಾಠಿ, ಲಿಯಾಮ್ ಲಿವಿಂಗ್ಸ್ಟೋನ್, ಕೃಷ್ಣಪ್ಪ ಗೌತಮ್, ಜೋಫ್ರ ಆರ್ಚರ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕತ್, ಧವಳ್ ಕುಲಕರ್ಣಿ.

Story first published: Saturday, April 13, 2019, 19:58 [IST]
Other articles published on Apr 13, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+