ಸ್ಪಿನ್ ಮಾಂತ್ರಿಕ ಮುರುಳೀಧರನ್ ಸಾಧನೆಗೆ ಮತ್ತೊಂದು ಗರಿ!
ಲಂಡನ್, ಜೂನ್ 09 : ಸ್ಪಿನ್ ಮಾಂತ್ರಿಕ, ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರಿಗೆ ಅಂತಾರಾಷ್ಟ್ರಿಯ ಕ್ರಿಕೆಟ್ ಸಮಿತಿಯು (ಐಸಿಸಿ) 'ಹಾಲ್ ಆಫ್ ಫೇಮ್' ನೀಡಿ ಗೌರವಿಸಿತು.
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯದ ಆರಂಭಕ್ಕೂ ಮುನ್ನ ಲಂಕಾ ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರಿಗೆ ಐಸಿಸಿ ಕಾರ್ಯನಿರ್ವಾಹಕ ಅಧಿಕಾರಿ ಡೇವ್ ರಿಚರ್ಡ್ ಸನ್ ಅವರು 'ಹಾಲ್ ಆಫ್ ಫೇಮ್' ಕ್ಯಾಪ್ ನೀಡಿ ಗೌರವಿಸಿದರು. [ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾಕ್ಕೆ 7 ವಿಕೆಟ್ ಅಂತರದ ಜಯ]

ಐಸಿಸಿಯ ಈ ಪ್ರತಿಷ್ಠಿತ ಗೌರವ ಪಡೆದ ಶ್ರೀಲಂಕಾದ ಮೊದಲ ಹಾಗೂ ಒಟ್ಟಾರೆ 83ನೇ ಆಟಗಾರ ಎನ್ನುವ ಖ್ಯಾತಿಗೆ ಮುರುಳೀಧರನ್ ಪಾತ್ರರಾದರು.
ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್'ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ದಾಖಲೆ ನಿರ್ಮಿಸಿರುವ ಮುರುಳಿ, 133 ಟೆಸ್ಟ್ ಪಂದ್ಯಗಳಲ್ಲಿ 800 ವಿಕೆಟ್ ಹಾಗೂ 350 ಏಕದಿನ ಪಂದ್ಯಗಳಲ್ಲಿ 534 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications