For Quick Alerts
ALLOW NOTIFICATIONS  
For Daily Alerts
 

Ranji: ಸಚಿನ್‌ ತೆಂಡೂಲ್ಕರ್‌ ಅವರ 29 ವರ್ಷದ ಹಳೆಯ ದಾಖಲೆ ಮುರಿದ ಸರ್ಫರಾಜ್ ಖಾನ್ ಸಹೋದರ

ಮುಂಬೈನ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸರ್ಫರಾಜ್ ಖಾನ್ ರಣಜಿ ಟ್ರೋಫಿಯಲ್ಲಿ ಅಬ್ಬರಿಸಿ, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಪದಾರ್ಪಣೆ ಮಾಡಿದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರಿಂದಲೂ ಸೈ ಎನಿಸಿಕೊಂಡಿರುವ ಸರ್ಫರಾಜ್‌ ಎಲ್ಲರ ಗಮನ ಸೆಳೆದಿದ್ದರು. ಇದೇ ಹಾದಿಯಲ್ಲಿ ಅವರ ಸಹೋದರ ಸಹ ದಾಪುಗಾಲು ಇಟ್ಟಿದ್ದಾರೆ.

ಸರ್ಫರಾಜ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ಕೂಡ ದೊಡ್ಡ ಸಾಧನೆ ಮಾಡಿದ್ದಾರೆ. ಮುಂಬೈ ಮತ್ತು ವಿದರ್ಭ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಮುಶೀರ್ ಖಾನ್ ಅದ್ಭುತ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಸುಮಾರು 29 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿದ್ದಾರೆ.

Musheer Khan breaks Sachin Tendulkar s 29-year old record in ranji trophy final

ಫೈನಲ್‌ನಲ್ಲಿ ಶತಕ

ಮುಶೀರ್ ಖಾನ್ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡುತ್ತಿದ್ದಾರೆ. ಪಂದ್ಯದ ಎರಡನೇ ದಿನದಂದು ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಪೂರೈಸಿದ ಅವರು ಮೂರನೇ ದಿನ ಬ್ಯಾಟಿಂಗ್‌ಗೆ ಇಳಿದಾಗ ಅವರ ಕಣ್ಣು ಕೇವಲ ಶತಕದತ್ತಲೇ ಇತ್ತು.

ಮೊದಲಿಗೆ, ಅವರು ತಮ್ಮ ನಾಯಕ ಅಜಿಂಕ್ಯ ರಹಾನೆ ಅವರೊಂದಿಗೆ ತಮ್ಮ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ದರು ಮತ್ತು ರಹಾನೆ ಔಟಾದಾಗ, ಅವರು ಶ್ರೇಯಸ್ ಅಯ್ಯರ್ ಅವರೊಂದಿಗೆ ಉತ್ತಮ ಜೊತೆಯಾಟವನ್ನು ನೀಡಿದರು. ಅಲ್ಲದೆ ಅವರು ತಮ್ಮ ಶತಕವನ್ನೂ ಪೂರೈಸಿದರು. ಇದೀಗ ರಣಜಿ ಟ್ರೋಫಿ ಫೈನಲ್‌ನಲ್ಲಿ ಮುಂಬೈ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಇವರ ಪಾಲಾಗಿದೆ.

ಸಚಿನ್‌ ಎದುರೇ ದಾಖಲೆ ಉಡೀಸ್‌

ಮುಶೀರ್ ಖಾನ್ 255 ಎಸೆತಗಳನ್ನು ಎದುರಿಸಿ ಶತಕ ಪೂರೈಸಿದರು. ಮುಶೀರ್ ಖಾನ್ ಅವರ ವಯಸ್ಸು ಇಂದು ಅಂದರೆ ಮಾರ್ಚ್ 12 ರಂದು 19 ವರ್ಷ 14 ದಿನಗಳು. ಇತ್ತೀಚೆಗೆ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸಚಿನ್ ತೆಂಡೂಲ್ಕರ್ 1994-95ರಲ್ಲಿ ಮುಂಬೈ ಪರ ಆಡುತ್ತಿದ್ದಾಗ ರಣಜಿ ಟ್ರೋಫಿಯ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಶತಕ ಬಾರಿಸಿದ್ದರು.

Musheer Khan breaks Sachin Tendulkar s 29-year old record in ranji trophy final

ಆಗ ಸಚಿನ್ ತೆಂಡೂಲ್ಕರ್ ಅವರಿಗೆ 21 ವರ್ಷ. ಇಷ್ಟು ವರ್ಷ ಈ ದಾಖಲೆ ಸಚಿನ್ ಹೆಸರಲ್ಲೇ ಇತ್ತು. ಈಗ ಮುಶೀರ್ ಖಾನ್ ಅದನ್ನು ಮುರಿದಿದ್ದಾರೆ. ವಿಶೇಷವೆಂದರೆ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುತ್ತಿದ್ದಾಗ ಅವರೇ ವಾಂಖೆಡೆ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದರು.

ಈ ವರ್ಷದ ರಣಜಿ ಟ್ರೋಫಿಯಲ್ಲಿ ಮುಶೀರ್ ಖಾನ್ ಅಬ್ಬರಿಸಿದ್ದಾರೆ. ಅವರು ತಮ್ಮ ಬ್ಯಾಟ್‌ನಿಂದ ರನ್ ಗಳಿಸುತ್ತಿದ್ದಾರೆ. ಅದೇ ಋತುವಿನ ಕ್ವಾರ್ಟರ್ ಫೈನಲ್‌ನಲ್ಲಿ ಅವರು 357 ಎಸೆತಗಳಲ್ಲಿ 203 ರನ್‌ಗಳ ಅಜೇಯ ಇನ್ನಿಂಗ್ಸ್‌ ಕಟ್ಟಿದ್ದರು. ತಂಡ ಸೆಮಿಫೈನಲ್ ತಲುಪಿದಾಗ ಅಲ್ಲಿಯೂ ಅವರು 131 ಎಸೆತಗಳಲ್ಲಿ 55 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದ್ದರು. ಫೈನಲ್‌ನಲ್ಲಿ ಶತಕ ಪೂರೈಸಿ ಔಟ್ ಆಗಿದ್ದಾರೆ.

ವಿದರ್ಭ ವಿರುದ್ಧ ಮುಂಬೈ ಮುನ್ನಡೆ ಬೆಳೆಯುತ್ತಲೆ ಇದೆ. ಇದರೊಂದಿಗೆ ತಂಡ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವುದು ಬಹುತೇಕ ಖಚಿತವಾದಂತಿದೆ. ಮುಂಬೈ ತಂಡವು ದಾಖಲೆಯ 48ನೇ ಬಾರಿಗೆ ರಣಜಿ ಟ್ರೋಫಿಯಲ್ಲಿ ಫೈನಲ್ ಆಡುತ್ತಿದೆ. ಇದುವರೆಗೆ ಈ ತಂಡ 41 ಬಾರಿ ಪ್ರಶಸ್ತಿ ಜಯಿಸಿದೆ.

Story first published: Tuesday, March 12, 2024, 16:07 [IST]
Other articles published on Mar 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+