Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್ಲೆ ಮೀರಿ ವರ್ತಿಸಿದ ಬಾಂಗ್ಲಾ ಕ್ರಿಕೆಟಿಗ ಮುಷ್ಫಿಕರ್ ರಹೀಮ್‌ಗೆ ದಂಡ

Mushfiqur Rahim fined 25 percent of match fee for misbehaving on field

ಧಾಕಾ: ಪಂದ್ಯದ ವೇಳೆ ಎಲ್ಲೆ ಮೀರಿ ವರ್ತಿಸಿದಕ್ಕಾಗಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್‌ಗೆ ಪಂದ್ಯದ ಸಂಭಾವನೆಯ 25 ಶೇ. ದಂಡ ವಿಧಿಸಲಾಗಿದೆ. ಬಾಂಗ್ಲಬಂಧು ಟಿ20 ಕಪ್ 2020ರ ಎಲಿಮಿನೇಟರ್ ಪಂದ್ಯದ ವೇಳೆ ಮುಷ್ಫಿಕರ್ ನಿಯಮ ಮೀರಿ ವರ್ತಿಸಿದ್ದರು.

ಸೋಮವಾರದ ಪಂದ್ಯದಲ್ಲಿ ಫಾರ್ಚ್ಯೂನ್ ಬರಿಸಲ್ ಮತ್ತು ಬೆಕ್ಸಿಂಕೊ ಧಾಕಾ ತಂಡಗಳು ಕಾದಾಡಿದ್ದವು. ಈ ವೇಳೆ ಬೆಕ್ಸಿಂಕೋ ತಂಡದ ನಾಯಕರಾಗಿದ್ದ ಮುಷ್ಫಿಕರ್ ರಹೀಮ್, ವಿಕೆಟ್ ಕೀಪಿಂಗ್ ಮಾಡುತ್ತಿದ್ದಾಗ ಕ್ಯಾಚ್ ಹಿಡಿಯಲು ಬಂದ ತಂಡದ ಸಹ ಆಟಗಾರ ನಾಸಮ್ ಅಹ್ಮದ್‌ಗೆ ರಹೀಮ್ ಹೊಡೆಯಲು ಮುಂದಾಗಿದ್ದರು.

ಫಾರ್ಚ್ಯೂನ್ ಬರಿಸಲ್ ಗೆಲ್ಲಲು 19 ಎಸೆತಗಳಲ್ಲಿ 45 ರನ್ ಬೇಕಿತ್ತು. 17ನೇ ಓವರ್‌ನಲ್ಲಿ ಎದುರಾಳಿ ತಂಡದ ಅಫೀಫ್ ಹುಸೇನ್ ಅವರ ಕ್ಯಾಚ್‌ಗಾಗಿ ಮುಷ್ಫಿಕರ್ ಮುಂದಾದಾಗ ನಾಸಮ್ ಅಹ್ಮದ್‌ ಕೂಡ ಕ್ಯಾಚ್‌ಗಾಗಿ ಯತ್ನಿಸಿದ್ದರು. ಹೀಗಾಗಿ ಸಿಟ್ಟಿಗೆದ್ದ ಮುಷ್ಫಿಕರ್ ನಾಸಮ್‌ಗೆ ಹೊಡೆಯಲು ಮುಂದಾಗಿದ್ದರಲ್ಲದೆ, 'ಗ್ಲೌಸ್ ಹಾಕಿರುವ ನಾನಿರುವಾಗ ನೀನ್ಯಾಕೆ ಅಡ್ಡ ಬರುತ್ತೀಯ?' ಅಂತ ಎಂಬಂತೆ ಗದರಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.

ಪಂದ್ಯದ ವೇಳೆ ಮುಷ್ಫಿಕರ್ ವರ್ತನೆ ಟೀಕೆಗೆ ಗುರಿಯಾಗಿತ್ತು. ಕ್ಯಾಚ್‌ಗೆ ಮುಂದಾದ ಸಹ ಆಟಗಾರರಿಗೆ ಮುಷ್ಫಿಕರ್ ಮೆಚ್ಚುಗೆ ವ್ಯಕ್ತಪಡಿಸುವ ಬದಲು ಹೊಡೆಯಲು ಮುಂದಾಗಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಸರಿ ಕಂಡಿರಲಿಲ್ಲ. ಪಂದ್ಯದ ಬಳಿಕ ಮುಷ್ಫಿಕರ್ ತನ್ನ ವರ್ತನೆಗೆ ಕ್ರಮೆ ಕೇಳಿದ್ದರಾದರೂ ಬಾಂಗ್ಲಾ ಕ್ರಿಕೆಟ್‌ ಬೋರ್ಡ್‌ ಮುಷ್ಫಿಕರ್‌ಗೆ ದಂಡ ವಿಧಿಸಿದೆ.

Story first published: Wednesday, December 16, 2020, 10:21 [IST]
Other articles published on Dec 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+