ICC Players Of The Month For May 2021 : ಮೇ ತಿಂಗಳ 'ಪ್ಲೇಯರ್ ಆಫ್ ದ ಮಂಥ್'ಗೆ ಮುಷ್ಫಿಕರ್, ಬ್ರೈಸ್ ಹೆಸರು

ಅಬುಧಾಬಿ: ಮೇ ತಿಂಗಳ ಐಸಿಸಿ ಪ್ಲೇ ಆಫ್ ದ ಮಂಥ್ ಪ್ರಶಸ್ತಿಗೆ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ಮತ್ತು ಸ್ಕಾಟ್ಲೆಂಡ್‌ನ ಆಲ್ ರೌಂಡರ್ ಕ್ಯಾಥರಿನ್ ಬ್ರೈಸ್ ಹೆಸರಿಸಲ್ಪಟ್ಟಿದ್ದಾರೆ. ತಮ್ಮ ತಮ್ಮ ತಂಡಕ್ಕೆ ನೀಡಿದ ಪ್ರದರ್ಶನಕ್ಕಾಗಿ ಇಬ್ಬರನ್ನೂ ಪ್ರಶಸ್ತಿಗಾಗಿ ಹೆಸರಿಸಲಾಗಿದೆ.
ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಷ್ಫಿಕರ್ ರಹೀಮ್ ಅತ್ಯಧಿಕ ರನ್ ಸರದಾರರಲ್ಲಿ ಮೊದಲ ಸ್ಥಾನದಲ್ಲಿದ್ದರು. ಬಾಂಗ್ಲಾ ಪರ ಮೂರು ಏಕದಿನ ಪಂದ್ಯಗಳನ್ನಾಡಿದ್ದ ಮುಷ್ಫಿಕುರ್ 237 ರನ್ ಗಳಿಸಿದ್ದರು.
ಮುಷ್ಫಿಕರ್ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡ, ಶ್ರೀಲಂಕಾ ವಿರುದ್ಧ ಚೊಚ್ಚಲ ಏಕದಿನ ಸರಣಿ ಗೆದ್ದ ಸಾಧನೆ ಮಾಡಿತ್ತು. ದ್ವಿತೀಯ ಪಂದ್ಯದಲ್ಲಿ 125 ರನ್ ಗಳಿಸಿದ್ದ ಮುಷ್ಫಿಕರ್ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಕಾರಣರಾಗಿದ್ದರು.
ಪುರುಷರು ಅಥವಾ ಮಹಿಳಾ ಐಸಿಸಿ ರ್‍ಯಾಂಕಿಂಗ್‌ನಲ್ಲಿ ನಂ.10ರೊಳಗೆ ಸ್ಥಾನ ಪಡೆದ ಮೊದಲ ಸ್ಕಾಟ್ಲೆಂಡ್ ಆಟಗಾರ್ತಿ ಕ್ಯಾಥರಿನ್ ಬ್ರೈಸ್. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕ್ಯಾಥರಿನ್ 96 ರನ್ ಮತ್ತು 5 ವಿಕೆಟ್ ಸಾಧನೆ ತೋರಿದ್ದರು. ಹೀಗಾಗಿ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ಕ್ಯಾಥರಿನ್ ಪಾತ್ರರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications