ಕ್ಯಾಚ್ ಹಿಡಿಯಲು ಅಡ್ಡಬಂದ ಸಹ ಆಟಗಾರನಿಗೆ ಬಾರಿಸಲು ಮುಂದಾದ ಮುಷ್ಫೀಕರ್ ರಹೀಮ್: ವಿಡಿಯೋ

ಬಾಂಗ್ಲಾದೇಶದ ಬಂಗಬಂಧು ಟಿ20 ಕಪ್‌ನಲ್ಲಿ ಬಾಂಗ್ಲಾದ ಹಿರಿಯ ಆಟಗಾರ ಬೆಕ್ಸಿಮ್ಕೋ ಢಾಕಾ ತಂಡದ ನಾಯಕ ಮುಷ್ಫಿಕರ್ ರಹೀಮ್ ಕೆಟ್ಟ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ತಾನು ಚೆಂಡನ್ನು ಕ್ಯಾಚ್ ಹಿಡಿಯಲು ಮುಂದಾದಾಗ ಸಹ ಆಟಗಾರ ಅಡ್ಡ ಬಂದ ಎಂಬ ಕಾರಣಕ್ಕೆ ತಾಳ್ಮೆ ಕಳೆದುಕೊಂಡು ಬಾರಿಸಲು ಮುಂದಾಗಿದ್ದರು. ಈ ವರ್ತನೆ ಟ್ವಿಟ್ಟರ್‌ನಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿದೆ.
ಢಾಕಾ ಹಾಗೂ ಫಾರ್ಚೂನ್ ಬಾರಿಶಾಲ್ ತಂಡಗಳ ಮಧ್ಯೆ ಈ ಪಂದ್ಯ ನಡೆಯುತ್ತಿತ್ತು. ಭಾರೀ ಪೈಪೋಟಿಯಲ್ಲಿ ನಡೆದ ಈ ಪಂದ್ಯವನ್ನು ಅಂತಿಮವಾಗಿ 9 ರನ್‌ಗಳಿಂದ ಮುಷ್ಫಿಕರ್ ರಹೀಮ್ ನೇತೃತ್ವದ ಢಾಕಾ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಜಿದ್ದಾಜಿದ್ದಿನ ಪೈಪೋಟಿ
ಈ ಪಂದ್ಯ 17ನೇ ಓವರ್‌ನ ಅಂತಿಮ ಎಸೆತದಲ್ಲಿ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಎದುರಾಳಿ ಫಾರ್ಚೂನ್ ಬಾರಿಶಾಲ್ ತಂಡಕ್ಕೆ 19 ಎಸೆತಗಳಲ್ಲಿ 45 ರನ್‌ಗಳ ಅವಶ್ಯಕತೆಯಿತ್ತು, ಐದು ವಿಕೆಟ್‌ಗಳು ಬಾಕಿಯಿತ್ತು. ಬ್ಯಾಟ್ಸ್‌ಮನ್ ಆಫಿಫ್ ಹುಸೈನ್ ಉತ್ತಮ ಲಯದಲ್ಲಿದ್ದು, ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸಲು ಪ್ರಯತ್ನಿಸಿದರು. ಆದರೆ ಈ ಸಂದರ್ಭದಲ್ಲಿ ಚೆಂಡು ಸರಿಯಾಗಿ ಬ್ಯಾಟ್‌ಅನ್ನು ಸಂಪರ್ಕಿಸದೆ ಗಾಳಿಯಲ್ಲಿ ಹಾರಿತ್ತು.

ಬುಸುಗುಟ್ಟಿದ ರಹೀಮ್
ಈ ಚೆಂಡನ್ನು ಹಿಡಿಯಲು ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ಹಾಗೂ ಗಲ್ಲಿಯಲ್ಲಿ ನಿಂತಿದ್ದ ನಸುಮ್ ಧಾವಿಸಿದರು. ಕೊನೆಗೆ ವಿಕೆಟ್ ಕೀಪರ್ ರಹೀಮ್ ಈ ಕ್ಯಾಚ್‌ಅನ್ನು ಯಶಸ್ವಿಯಾಗಿ ಪಡೆದರಾದರೂ ನಸುಮ್ ಮೇಲೆ ಆಕ್ರೋಶದಿಂದ ಹಲ್ಲೆಗೆ ಮುಂದಾದರು. ಆದರೆ ಬಳಿಕ ನಿಯಂತ್ರಿಸಿಕೊಂಡರಾದರೂ ಅವರ ಆಕ್ರೋಶ ತಣಿದಿರಲಿಲ್ಲ. ಮೈದಾನದಲ್ಲೇ ತಾಳ್ಮೆಗೆಟ್ಟು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಟ್ವಿಟ್ಟರ್‌ನಲ್ಲಿ ಭಾರೀ ಟೀಕೆ
ನಾಯಕ ಮುಷ್ಫಿಕರ್ ರಹೀಮ್ ಅವರ ಈ ವರ್ತನೆ ಸಹ ಆಟಗಾರರಿಗೂ ಆಶ್ಚರ್ಯವನ್ನು ತಂದಿತ್ತು. ಎಲ್ಲರೂ ಸಮಾಧಾನಿಸುವ ಪ್ರಯತ್ನ ಮಾಡಿದರು. ಆದರೆ ಟ್ವಿಟ್ಟರ್‌ನಲ್ಲಿ ಮಾತ್ರ ಈ ವರ್ತನೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications