For Quick Alerts
ALLOW NOTIFICATIONS  
For Daily Alerts
 

ಸಯ್ಯದ್ ಮುಷ್ತಾಕ್ ಅಲಿ: ತಮಿಳುನಾಡು ಕ್ವಾರ್ಟರ್ ಫೈನಲ್‌ಗೆ ಲಗ್ಗೆ

Mushtaq Ali T20: Tamil Nadu march into quarterfinals

ಚೆನ್ನೈ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ತಮಿಳುನಾಡು ತಂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಸೋಮವಾರ (ಜನವರಿ 18) ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಲೀಗ್‌ ಹಂತದ ಕೊನೇ ಪಂದ್ಯದಲ್ಲಿ ತಮಿಳುನಾಡು ತಂಡ ಬೆಂಗಾಲ್ ವಿರುದ್ಧ 8 ವಿಕೆಟ್ ಜಯ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಾಲ್ ತಂಡ, ಶ್ರೀವತ್ಸ್ ಗೋಸ್ವಾಮಿ 21, ಕೈಫ್ ಅಹ್ಮದ್ 63, ನಾಯಕ ಅನುಸ್ತೂಪ್‌ ಮಜುಂದಾರ್ 34, ಸುವಂಕರ್ ಬಲ್ 14 ರನ್‌ ಕೊಡುಗೆಯೊಂದಿಗೆ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 163 ರನ್ ಗಳಿಸಿತ್ತು.

ಗುರಿ ಬೆಂಬತ್ತಿದ ತಮಿಳುನಾಡು, ಹರಿ ನಿಶಾಂತ್ 14, ಎನ್ ಜಗದೀಶನ್ ಅಜೇಯ 71, ಅರುಣ್ ಕಾರ್ತಿಕ್ 30, ನಾಯಕ ದಿನೇಶ್ ಕಾರ್ತಿಕ್ ಅಜೇಯ 47 ರನ್‌ನೊಂದಿಗೆ 18 ಓವರ್‌ಗೆ 2 ವಿಕೆಟ್ ಕಳೆದು 167 ರನ್ ಗಳಿಸಿತು. ಈ ಗೆಲುವಿನೊಂದಿಗೆ ಎಲೈಟ್ ಗ್ರೂಪ್‌ 'ಬಿ'ಯಲ್ಲಿರುವ ತಮಿಳುನಾಡು ಆಡಿರುವ 5 ಪಂದ್ಯಗಳಲ್ಲಿ 5 ಜಯದೊಂದಿಗೆ ಅಗ್ರ ಸ್ಥಾನದಲ್ಲಿ ಲೀಗ್‌ ಸ್ಪರ್ಧೆ ಮುಗಿಸಿದೆ.

ಬೆಂಗಾಲ್ ಇನ್ನಿಂಗ್ಸ್‌ನಲ್ಲಿ ತಮಿಳುನಾಡಿನ ಅಪರಾಜಿತ್ 2, ಸಾಯ್ ಕಿಶೋರ್ 1, ಮುರುಗನ್ ಅಶ್ವಿನ್ 1, ಜಿ ಪೆರಿಯಾಸ್ವಾಮಿ 1 ವಿಕೆಟ್ ಪಡೆದರೆ, ತಮಿಳುನಾಡು ಇನ್ನಿಂಗ್ಸ್‌ನಲ್ಲಿ ಬೆಂಗಾಲ್‌ನ ಅರ್ನಾಬ್‌ ನಂದಿ 1, ಮುಖೇಶ್ ಕುಮಾರ್ 1 ವಿಕೆಟ್ ಪಡೆದರು. ಗ್ರೂಪ್‌ 'ಎ'ಯಲ್ಲಿರುವ ಕರ್ನಾಟಕ 5ರಲ್ಲಿ 4 ಗೆಲುವಿನೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

Story first published: Tuesday, January 19, 2021, 0:13 [IST]
Other articles published on Jan 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+