Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿವರ್ಸ್ ಥ್ರೋ ರನೌಟ್, ಇದು ಧೋನಿ ವಿಶೇಷ

ಪುಣೆ, ಏಪ್ರಿಲ್ 27: ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ವಿಕೆಟ್ ಕೀಪಿಂಗ್ ಕೈಚಳಕದ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪುಣೆಯ ವಿಕೆಟ್ ಕೀಪರ್ ಧೋನಿ ಅವರು ರಿವರ್ಸ್ ಥ್ರೋ ಮೂಲಕ ರನೌಟ್ ಮಾಡಿದ ವಿಡಿಯೋ ಸಕತ್ ಹಿಟ್ ಆಗಿದೆ.

ಕೆಕೆಆರ್ ಇನಿಂಗ್ಸ್‌ನ ಮೂರನೆ ಓವರ್‌ನಲ್ಲಿ ಪುಣೆ ತಂಡದ ಸ್ಪಿನ್ನರ್ ಸುಂದರ್ ಎಸೆದ ಚೆಂಡನ್ನು ಫೈನ್ ಲೆಗ್‌ನತ್ತ ತಳ್ಳಿದ ನಾಯಕ ಗೌತಮ್ ಗಂಭೀರ್ ಒಂದು ರನ್ ಗಳಿಸುವ ಪ್ರಯತ್ನಕ್ಕೆ ಮುಂದಾದರು. ಮತ್ತೊಂದು ತುದಿಯಲ್ಲಿದ್ದ ನರೇನ್ ನಾಯಕನ ಕರೆಗೆ ಓಗೊಟ್ಟು ರನ್ ಕದಿಯಲು ಬಂದರು.

Must-see Video: MS Dhoni special behind the stumps removes Sunil Narine in IPL 2017


ಫೀಲ್ಡರ್ ಶಾರ್ದೂಲ್ ಠಾಕೂರ್ ತಕ್ಷಣವೇ ಚೆಂಡನ್ನು ಸಂಗ್ರಹಿಸಿ ವಿಕೆಟ್‌ಕೀಪರ್ ಧೋನಿಗೆ ರವಾನಿಸಿದರು. ಒಂದು ಕ್ಷಣವೂ ವ್ಯರ್ಥ ಮಾಡದ ಧೋನಿ ಹಿಂತಿರುಗಿ ನೋಡದೇ ಸ್ಟಂಪ್‌ಗೆ ಗುರಿಯಾಗಿಸಿ ಚೆಂಡನ್ನು ಹೊಡೆದು ನರೇನ್ ಗುರಿ ತಲುಪುವ ಮೊದಲೇ ಬೆಲ್ಸ್ ಬೀಳಿಸಿದರು. ರಿಪ್ಲೇಯನ್ನು ವೀಕ್ಷಿಸಿದ ಟಿವಿ ಅಂಪೈರ್ ನರೇನ್ ವಿರುದ್ಧ ಔಟ್ ತೀರ್ಪು ನೀಡಿದರು. ವಿಡಿಯೋ ಇಲ್ಲಿ ನೋಡಿ

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+