ನನ್ನ ಗಮನ ಏನಿದ್ದರೂ ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್ ಕಡೆಗೆ: ವೃದ್ದಿಮಾನ್ ಸಾಹಾ

ಟೀಂ ಇಂಡಿಯಾದಿಂದ ಹೊರಬಿದ್ದ ಬಳಿಕ, ದೇಶೀಯ ರಣಜಿ ತಂಡವಾದ ಬಂಗಾಳವನ್ನು ತೊರೆಯಲು ಮುಂದಾಗಿರುವ ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ತನ್ನ ಮುಂದಿನ ಗಮನ ಏನಿದ್ರೂ ಐಪಿಎಲ್ ಮತ್ತು ದೇಸಿ ಕ್ರಿಕೆಟ್ ಕಡೆಗೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಟೀಂ ಇಂಡಿಯಾ ಟೆಸ್ಟ್ ತಂಡದಿಂದ ಮತ್ತೆ ಕರೆ ಬರುವುದು ಬಹುತೇಕ ಅನುಮಾನವಾಗಿರುವುದರಿಂದ ಸಾಹಾ ಬ್ಯಾಕ್ ಅಪ್ ಪ್ಲಾನ್‌ನೊಂದಿಗೆ ಯೋಜನೆ ರೂಪಿಸಿಕೊಂಡಿದ್ದಾರೆ. ಇನ್ಮುಂದೆ ಮತ್ತೆ ಟೀಂ ಇಂಡಿಯಾ ಜೆರ್ಸಿ ತೊಡುವುದರ ಕನಸು ಎಂದರಿತ ಬಂಗಾಳ ಬ್ಯಾಟರ್ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ಗೆ ಕಡೆಗೆ ಗಮನ ಹರಿಸಲಿದ್ದಾರೆ.
ಐಪಿಎಲ್ 2022ರ ಸೀಸನ್‌ನಲ್ಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಪರ ಓಪನರ್ ಆಗಿ ಮಿಂಚಿದ ಸಾಹಾ, ಯುವ ಬ್ಯಾಟರ್ ಶುಭ್ಮನ್ ಗಿಲ್ ಜೊತೆಗೆ ಉತ್ತಮ ಜೊತೆಯಾಟವಾಡಿದರು.
"ನಾನು ಆಯ್ಕೆಯಾಗುವುದಿಲ್ಲ ಎಂದು ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಅಧಿಕೃತವಾಗಿ ಸ್ಪಷ್ಟಪಡಿಸಿರುವುದರಿಂದ, ನನ್ನ ಮುಖ್ಯ ಗಮನವು ದೇಶೀಯ ಕ್ರಿಕೆಟ್‌ನಲ್ಲಿದೆ ಮತ್ತು ನಂತರ ಸಹಜವಾಗಿ ಐಪಿಎಲ್" ಎಂದು ಸಾಹಾ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
"ಇಲ್ಲ ಇಲ್ಲ. ಕುಟುಂಬಕ್ಕೆ ಸಮಯವನ್ನು ವಿನಿಯೋಗಿಸುವುದು ಕಷ್ಟ, ಆದ್ದರಿಂದ ನಾನು ಈಗ ಅವರೊಂದಿಗೆ ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯಲು ಬಯಸುತ್ತೇನೆ, "ಎಂದು ಅವರು ಕೌಂಟಿ ಕ್ರಿಕೆಟ್ ಆಡುವ ಸಾಧ್ಯತೆಗಳನ್ನು ತಳ್ಳಿಹಾಕಿದರು.
ಬಂಗಾಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯಲು ಸಾಕಷ್ಟು ಸಮಯ ಕಾಯಬೇಕಾಯಿತು. 2014ರ ಡಿಸೆಂಬರ್‌ನಲ್ಲಿ ನಾಯಕ ಧೋನಿ ಟೆಸ್ಟ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಬಳಿಕ ಸಾಹಾಗೆ ಅವಕಾಶ ಸಿಕ್ಕಿತು. ಇದಾದ ಬಳಿಕ ತಂಡದಲ್ಲಿ ಸತತ ಅವಕಾಶ ಸಿಕ್ಕಿದ್ದು, ಕಳೆದ ವರ್ಷದ ಬಾರ್ಡರ್-ಗವಾಸ್ಕರ್ ಟ್ರೋಫಿ ಕೊನೆಯದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications