Maharaja T20 Trophy: ಕರುಣ್ ನಾಯರ್ ಆರ್ಭಟ: ಮಂಗಳೂರು ವಾರ್‌ಗೆದ್ದ ಮೈಸೂರು
ಭರವಸೆಯ ಆಟಗಾರ ಎಸ್‌ಯು ಕಾರ್ತಿಕ್ (69) ಹಾಗೂ ನಾಯಕ ಕರುಣ್ ನಾಯರ್ (64) ಇವರುಗಳ ಜವಾಬ್ದಾರಿಯುತ ಆಟದ ನೆರವಿನಿಂದ ಮೈಸೂರು ವಾರಿಯರ್ಸ್ ಮಹಾರಾಜ್ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ 6 ವಿಕೆಟ್‌ಗಳಿಂದ ಮಂಗಳೂರು ಡ್ರಾಗನ್ಸ್ ತಂಡವನ್ನು ಸೋಲಿಸಿತು.
ಮಂಗಳೂರು ಡ್ರಾಗನ್ಸ್ ನೀಡಿದ 179 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮೈಸೂರು ತಂಡದ ಆರಂಭ ಉತ್ತಮವಾಗಿತ್ತು. ವಾರಿಯರ್ಸ್ ತಂಡದ ಆರಂಭಿಕರು 6.5 ಓವರ್‌ಗಳಲ್ಲಿ 42 ರನ್ ಸೇರಿಸಿತು. ಮೈಸೂರು ಪರ ಅಜಿತ್ ಕಾರ್ತಿಕ್ (14) ಜವಾಬ್ದಾರಿ ಮರೆತರು.

ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟ
ಎರಡನೇ ವಿಕೆಟ್‌ಗೆ ಎಸ್‌ಯು ಕಾರ್ತಿಕ್, ಕರುಣ್ ನಾಯರ್ ಅಮೋಘ ಜೊತೆಯಾಟ ನೀಡಿತು. ಈ ಜೋಡಿ ಮಂಗಳೂರು ತಂಡದ ಬೌಲರ್‌ಗಳನ್ನು ಕಾಡಿತು. ಈ ಜೋಡಿ ಸುಮಾರು 10 ಓವರ್‌ಗಳ ವರೆಗೆ ಬ್ಯಾಟ್ ಮಾಡಿ, ಶತಕದ ಜೊತೆಯಾಟವನ್ನು ನೀಡಿತು. ಕಾರ್ತಿಕ್ 52 ಎಸೆತಗಳಲ್ಲಿ 69 ರನ್ ಬಾರಿಸಿದರು. ಇವರ ಮನಮೋಹಕ ಇನಿಂಗ್ಸ್‌ನಲ್ಲಿ 7 ಬೌಂಡರಿ, 2 ಸಿಕ್ಸರ್ ಸಿಡಿಸಿದ್ದಾರೆ.
ನಾಯಕ ಕರುಣ್ ನಾಯರ್ 31 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ 64 ರನ್ ಸಿಡಿಸಿದರು. ಮನೋಜ್ ಭಂಡಾರೆ ಅಜೇಯ 10 ರನ್ ಬಾರಿಸಿ ತಂಡಕ್ಕೆ ನೆರವಾದರು. ಮೈಸೂರು 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 179 ರನ್ ಸೇರಿಸಿ ಜಯ ಸಾಧಿಸಿತು.
ಸಿದ್ಧಾರ್ಥ್ ಅರ್ಧಶತಕ
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಮಂಗಳೂರು ಡ್ರಾಗನ್ಸ್ ಆರಂಭಿಕರಾದ ರೋಹನ್ ಪಾಟೀಲ್ (12) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ನಿಕಿನ್ ಜೋಸ್ (14) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆರಂಭಿಕ ತುಷಾರ್ ಸಿಂಗ್ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 43 ರನ್ ಸಿಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಕೃಷ್ಣಮೂರ್ತಿ ಸಿದ್ಧಾರ್ಥ್ ಅಮೋಘ ಬ್ಯಾಟಿಂಗ್ ನಡೆಸಿದರು. 36 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಲೋಚನ್ ಗೌಡ್ 25, ಎಂಬಿ ದರ್ಶನ್ 18 ರನ್ ಸಿಡಿಸಿದರು. ಅಂತಿಮವಾಗಿ ಮಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 178 ರನ್ ಸಿಡಿಸಿತು.
ಮೈಸೂರು ಪರ ಅಜಿತ್ ಕಾರ್ತಿಕ್, ಕೆ.ಗೌತಮ್, ಮನೋಜ್ ಭಂಡಾರೆ ತಲಾ ಎರಡು ವಿಕೆಟ್ ಪಡೆದರು.
ಬೆಂಗಳೂರುಗೆ ಭರ್ಜರಿ ಜಯ
ಶುಭಮನ್ ಹೆಗ್ಡೆ ಅಜೇಯ 85, ಸುರಜ್ ಅಹುಜಾ ಅಜೇಯ 82 ರನ್ ಗಳ ಜೊತೆಯಾಟದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ 6 ವಿಕೆಟ್‌ಗಳಿಂದ ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಬೆಂಗಳೂರು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯಿತು.
ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಲಯನ್ಸ್ ಪರ ಬೆಂಗಳೂರು ಮೋಹಿತ್ 56, ಅಭಿನವ್ ಮನೋಹರ್ ಅಜೇಯ 59 ರನ್‌ಗಳ ಬಾರಿಸಿದರು. ಶಿವಮೊಗ್ಗ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 227 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬೆಂಗಳೂರು 19 ಓವರ್‌ಗಳಲ್ಲಿ ಸವಾಲಿನ 228 ರನ್ ಸೇರಿಸಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications