ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ 17 ಮಂದಿಯ ಪಾಕಿಸ್ತಾನ ತಂಡ ಪ್ರಕಟ

ಲಂಡನ್, ಆಗಸ್ಟ್ 21: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ 17 ಮಂದಿಯ ಪಾಕಿಸ್ತಾನ ತಂಡ ಪ್ರಕಟಗೊಂಡಿದೆ. ಆಗಸ್ಟ್ 28ರಿಂದ ಟಿ20 ಸರಣಿ ಆರಂಭವಾಗಲಿದ್ದು, ಪ್ರಕಟಿತ ತಂಡದಲ್ಲಿ ಹದಿ ಹರೆಯದ ವೇಗಿ ನಸೀಮ್ ಶಾ ಕೂಡ ಇದ್ದಾರೆ.
ಕೇವಲ 6 ಟೆಸ್ಟ್ ಪಂದ್ಯಗಳನ್ನಷ್ಟೇ ಆಡಿರುವ 17ರ ಹರೆಯದ ನಸೀಮ್ ಶಾ ಇನ್ನಷ್ಟೇ ವೈಟ್ ಬಾಲ್ ಕ್ರಿಕೆಟ್ ಆಡಬೇಕಿದೆ. ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯೊಂದಿಗೆ ಶಾ ವೈಟ್‌ಬಾಲ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ನಸೀಮ್ ಅಲ್ಲದೆ ಪಾಕ್ ಅಂಡರ್ 19 ತಂಡ, ಪ್ರಥಮದರ್ಜೆ ಕ್ರಿಕೆಟ್ ಮತ್ತು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ 19ರ ಹರೆಯದ ಬ್ಯಾಟ್ಸ್‌ಮನ್ ಹೈದರ್ ಅಲಿ ಕೂಡ ತಂಡದಲ್ಲಿ ಸೇರಿಸಲ್ಪಟ್ಟಿದ್ದಾರೆ. ಬಾಬರ್ ಅಝಾಮ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಪಾಕಿಸ್ತಾನ ತಂಡ
ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಹೈದರ್ ಅಲಿ, ಹ್ಯಾರಿಸ್ ರವೂಫ್, ಇಫ್ತಿಖರ್ ಅಹ್ಮದ್, ಇಮಾದ್ ವಾಸಿಮ್, ಖುಶ್ದಿಲ್ ಷಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಅಮೀರ್, ನಸೀಮ್ ಶಾ, ಸರ್ಫರಾಜ್ ಅಹ್ಮದ್, ಶದಾಬ್ ಖಾನ್, ಶೋಯೆಬ್ ಮಲಿಕ್ ಮತ್ತು ವಹಾಬ್ ರಿಯಾಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications