Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈ ತಂಡ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ: ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್

Naseer Hussain praises England said Everything they touched just turned to gold

ಪಾಕಿಸ್ತಾನ ಪ್ರವಾಸ ತೆರಳಿ ಟೆಸ್ಟ್ ಸರಿಯಲ್ಲಿ ಭಾಗಿಯಾಗಿರುವ ಇಂಗ್ಲೆಂಡ್ ತಂಡ ಮೂರನೇ ಪಂದ್ಯದಲ್ಲಿಯೂ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಕೂಡ ಇಂಗ್ಲೆಂಡ್ ತಂಡ ಗೆದ್ದು ಕೊಂಡಿದ್ದು ತವರಿನಲ್ಲಿಯೇ ಪಾಕಿಸ್ತಾನಕ್ಕೆ ಮುಖಭಂಗವುಂಟು ಮಾಡಿದೆ. ಇಂಗ್ಲೆಂಡ್ ತಂಡದ ಈ ಪ್ರದರ್ಶನದ ಬಗ್ಗೆ ಮಾಜಿ ನಾಯಕ ನಾಸಿರ್ ಹುಸೇನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಇಂಗ್ಲೆಂಡ್ ತಂಡ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಎಂದಿದ್ದಾರೆ.

ಸ್ಕೈ ಸ್ಪೋರ್ಟ್ಸ್‌ಗೆ ಪ್ರತಿಕ್ರಿಯೆ ನೀಡಿರುವ ನಾಸಿರ್ ಹುಸೇನ್ ಬೌಲಿಂಗ್ ವಿಭಾಗದಲ್ಲಿ ತಂಡ ಬಹಳ ಅದ್ಭುತವಾಗಿದೆ. ಮೂರು ಪಂದ್ಯಗಳಲ್ಲಿಯೂ ಅಮೋಘ ಪ್ರದರ್ಶನ ನೀಡಿದೆ. ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಹೊರತಾಗಿಯೂ ಅದ್ಭುತ ಪ್ರದರ್ಶನ ನೀಡಿರುವುದು ಗಮನಾರ್ಹ ಎಂದಿದ್ದಾರೆ ನಾಸಿರ್ ಹುಸೇನ್. ಜೇಮ್ಸ್ ಆಂಡರ್ಸನ್ ಸರಣಿಯ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಪರವಾಗಿ ಕಣಕ್ಕಿಳಿದಿರಲಿಲ್ಲ.

"ಬಹಳ ಕಾಲದ ಬಳಿಕ ಫ್ಲ್ಯಾಟ್ ಪಿಚ್‌ಗಳನ್ನು ಇಲ್ಲಿ ನೋಡಿದ್ದೇವೆ. ಕರಾಚಿಯಲ್ಲಿಯೂ ಪಿಚ್ ಹೆಚ್ಚು ತಿರುವು ಪಡೆದುಕೊಳ್ಳಲಿಲ್ಲ. ನಾಲ್ಕನೇ ದಿನವೂ ತಿರುವು ಕಾಣಲಿಲ್ಲ. ಸರಣಿಯ ಎಲ್ಲಾ ಪಿಚ್‌ಗಳು ಕೂಡ ಸರಣಿಯುದ್ದಕ್ಕೂ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ. ರಾವಲ್ಪಿಂಡ್ ಪಿಚ್‌ನ ಬಳಿಕ ಇದು ತಿರುವು ಪಡೆಯಬಹುದು ಎಂದು ಭಾವಿಸಿದ್ದೆವು" ಎಂದಿದ್ದಾರೆ ನಾಸಿರ್ ಹುಸೇನ್.

"ಮೂರು ಪಂದ್ಯಗಳಲ್ಲಿಯೂ ಎಲ್ಲಾ ವಿಕೆಟ್‌ಗಳನ್ನು ಪಡೆದಿರುವುದು, ಎಲ್ಲಾ ಮೂರು ಪಂದ್ಯಗಳನ್ನು ಕೂಡ ಗೆದ್ದುಕೊಂಡಿರುವುದು ಅಲ್ಲದೆ ಇಷ್ಟು ಪ್ರಮಾಣದಲ್ಲಿ ವೇಋಗವಾಗಿ ರನ್‌ಗಳನ್ನು ಗಳಸಿರುವುದು ನೋಡಿದರೆ ಎಲ್ಲವೂ ಇಂಗ್ಲೆಂಡ್ ತಂಡ ಅಂದುಕೊಂಡತೆಯೇ ನಡೆದಿದೆ. ಇದು ನಿಜಕ್ಕೂ ಕೂಡ ಅದ್ಭುತವಾದ ಸಂಗತಿ" ಎಂದಿದ್ದಾರೆ ನಾಸಿರ್ ಹುಸೇನ್.

17 ವರ್ಷಗಳ ಬಳಿಕ ಪಾಕಿಸ್ತಾನ ನೆಲದಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ಇಂಗ್ಲೆಂಡ್ ತಂಡ ಪಾಕ್ ಪಡೆಗೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಪಾಕಿಸ್ತಾನ ತನ್ನ ತವರಿನಲ್ಲಿಯೇ ಇಂಗ್ಲೆಂಡ್ ವಿರುದ್ಧ ವೈಟ್‌ಬಾಶ್ ಅವಮಾನಕ್ಕೆ ತುತ್ತಾಗಿದೆ. ಕರಾಚಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿಯೂ ಪಾಕಿಸ್ತಾನ ಹೀನಾಯ ಸೋಲು ಅನುಭವಿಸುವ ಮೂಲಕ ಟೆಸ್ಟ್ ಸರಣಿಯನ್ನು ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ 0-3 ಅಂತರದಿಂದ ಬಿಟ್ಟುಕೊಟ್ಟಿದೆ.

ಮತ್ತೊಮ್ಮೆ ಸರ್ವಾಂಗೀಣ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ ಪಾಕಿಸ್ತಾನ ಪಡೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲ್ಲಲು 167 ರನ್‌ಗಳ್ನು ಸ್ವೀಕರಿಸಿದ ಇಂಗ್ಲೆಂಡ್ ತಂಡ ಕೇವಲ 2 ವಿಕೆಟ್ ಕಳೆದುಕೊಂಡ ತನ್ನ ಆಕ್ರಮಣಕಾರಿ ಶೈಲಿಯಲ್ಲಿ ಬೆನ್ನಟ್ಟಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಶಾನ್ ಮಸೂದ್, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಸೌದ್ ಶಕೀಲ್, ಫಹೀಮ್ ಅಶ್ರಫ್, ನೌಮನ್ ಅಲಿ, ಮೊಹಮ್ಮದ್ ವಾಸಿಮ್ ಜೂನಿಯರ್, ಅಬ್ರಾರ್ ಅಹ್ಮದ್
ಬೆಂಚ್: ಇಮಾಮ್-ಉಲ್-ಹಕ್, ಮೊಹಮ್ಮದ್ ನವಾಜ್, ಮೊಹಮ್ಮದ್ ಅಲಿ, ಜಾಹಿದ್ ಮಹಮೂದ್, ಸರ್ಫರಾಜ್ ಅಹ್ಮದ್
ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಆಲಿ ರಾಬಿನ್ಸನ್, ಮಾರ್ಕ್ ವುಡ್, ಜ್ಯಾಕ್ ಲೀಚ್
ಬೆಂಚ್: ವಿಲ್ ಜ್ಯಾಕ್ಸ್, ಜೇಮ್ಸ್ ಆಂಡರ್ಸನ್, ಜೇಮೀ ಓವರ್ಟನ್, ಕೀಟನ್ ಜೆನ್ನಿಂಗ್ಸ್

Story first published: Tuesday, December 20, 2022, 18:25 [IST]
Other articles published on Dec 20, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+