ಪಾಕಿಸ್ತಾನ ಬ್ಯಾಟ್ಸ್‌ಮನ್ ನಾಸಿರ್ ಜಮ್ಶೆದ್‌ಗೆ 17 ತಿಂಗಳ ಜೈಲು ಶಿಕ್ಷೆ

ಇಸ್ಲಮಾಬಾದ್, ಫೆಬ್ರವರಿ 8: ಪಾಕಿಸ್ತಾನ ಮಾಜಿ ಬ್ಯಾಟ್ಸ್‌ಮನ್ ನಾಸಿರ್ ಜಮ್ಶೆದ್ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್)ನಲ್ಲಿ ಸ್ಪಾಟ್-ಫಿಕ್ಸಿಂಗ್ ನಡೆಸಿದ್ದಕ್ಕಾಗಿ ಶುಕ್ರವಾರ (ಫೆಬ್ರವರಿ 7) ನಾಸಿರ್‌ಗೆ 17 ತಿಂಗಳ ಕಾರಾಗೃಹ ಬಂಧನ ವಿಧಿಸಲಾಗಿದೆ.
ನಾಸಿರ್ ಜಮ್ಶೆದ್ ಜೊತೆಗೆ ಯೂಸುಫ್ ಅನ್ವರ್ ಮತ್ತು ಮೊಹಮ್ಮದ್ ಇಜಾಝ್ ಅವರನ್ನೂ ಬಂಧಿಸಲಾಗಿದೆ. ಪಾಕ್‌ನ ನ್ಯಾಷನಲ್ ಕ್ರೈಮ್ ಏಜೆನ್ಸಿ (ಎನ್‌ಸಿಎ) ತನಿಖೆಯಲ್ಲಿ ಮೂವರೂ ಫಿಕ್ಸಿಂಗ್‌ಗೆ ಸಂಬಂಧಿಸಿ ತಪ್ಪನ್ನೆಸಗಿರುವುದು ಕಂಡುಬಂದಿದೆ.
ಬಂಧಿತರಲ್ಲಿ ಜಾಸಿರ್‌ಗೆ 17 ತಿಂಗಳು, ಅನ್ವರ್‌ಗೆ 40 ತಿಂಗಳು ಮತ್ತು ಇಜಾಝ್‌ಗೆ 30 ತಿಂಗಳು ಶಿಕ್ಷೆ ವಿಧಿಸಲಾಗಿದೆ. 2018ರ ಫೆಬ್ರವರಿಯಲ್ಲಿ ದುಬೈನಲ್ಲಿ ನಡೆದಿದ್ದ ಪಾಕಿಸ್ತಾನ್ ಸೂಪರ್ ಲೀಗ್‌ನ ಇಸ್ಲಮಾಬಾದ್ ಯುನೈಟೆಡ್ ಮತ್ತು ಪೇಶ್ವರ್ ಝಲ್ಮಿ ಪಂದ್ಯದಲ್ಲಿ ಆಟಗಾರರನ್ನು ಫಿಕ್ಸಿಂಗ್‌ಗೆ ಪ್ರೋತ್ಸಾಹಿಸಿದ ಆರೋಪ ನಾಸಿರ್ ಜಮ್ಶೆದ್ ಮೇಲಿದೆ.
ಇಸ್ಲಮಾಬಾದ್ ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ 2 ಎಸೆತಗಳನ್ನು ಡಾಟ್ ಮಾಡುವಂತೆ ನಾಸಿರ್ ಅವರು ಶರ್ಜೀಲ್ ಖಾನ್ ಎಂಬವರಲ್ಲಿ ಫಿಕ್ಸಿಂಗ್ ನಡೆಸಿದ್ದರು. ಇದಕ್ಕಾಗಿ ಶರ್ಜೀಲ್‌ಗೆ ಐದು ವರ್ಷಗಳ ನಿಷೇಧ ಹೇರಲಾಗಿದೆ. 30ರ ಹರೆಯದ ನಾಸಿರ್ ಜಮ್ಶೆದ್ 48 ಏಕದಿನ ಇನ್ನಿಂಗ್ಸ್‌ಗಳಲ್ಲಿ 31.51ರ ಸರಾಸರಿಯಲ್ಲಿ 1418 ರನ್, 18 ಟಿ20 ಇನ್ನಿಂಗ್ಸ್‌ಗಳಲ್ಲಿ 363 ರನ್ ಮತ್ತು 4 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 51 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications