ಆಶಸ್ ಸರಣಿಯ ಮೊದಲ ಒಂದ್ಯದಲ್ಲಿ ಇಂಗ್ಲೆಂಡ್ ತಂಡ 2 ವಿಕೆಟ್‌ಗಳ ಅಂತರದಿಂದ ಸೋಲಕು ಅನುಭವಿಸಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ನಥನ್ ಲಿಯಾನ್ ಅವರ ದಿಟ್ಟ ಜೊತಯಾಟದ ಕಾರಣದಿಂದಾಗಿ ಆಸಿಸ್ ಪಡೆ ಸ್ಮರಣೀಯ ಗೆಲುವು ಸಾಧಿಸುವಂತಾಗಿದೆ. ಇಂಗ್ಲೆಂಡ್ ತಂಡದ ಈ ಸಳಿನ ಬಳಿಕ ತಂಡದ ಆಟದ ಶೈಲಿಯ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದು ವಿಶೇಷವಾಗಿ ಬ್ಯಾಸ್‌ಬಾಲ್ ಶೈಲಿಯ ಆಟಕ್ಕೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಕಾಮೆಂಟೇಟರ್ ನಾಸಿರ್ ಹುಸೇನ್ ಈ ವಿಚಾರವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಈ ಪ್ರತಿಷ್ಠಿತ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಬ್ಯಾಸ್‌ಬಾಲ್ ಪ್ರಯೋಗ ಮಾಡುವ ಅಗತ್ಯವಿರಲಿಲ್ಲ ಎಂದಿದ್ದಾರೆ ನಾಸಿರ್ ಹುಸೇನ್.

"ನಮರಂಜನೆ ನೀಡಬೇಕು ಎಂಬುದನ್ನು ಮುಂದಿಟ್ಟುಕೊಂಡು ನೀವು ತಲೆಮರೆಸಿಕೊಳ್ಳಲು ಸಾಧ್ಯವಿಲ್ಲ. ರಿಕಿ ಪಾಂಟಿಂಗ್ ಓರ್ವ ವಿನ್ನರ್ ಆಗಿರುವ ಕಾರಣ ಅವರ ಮಾತನ್ನು ಆನು ಅರ್ಥ ಮಾಡಿಕೊಳ್ಳಬಲ್ಲೆ. ನಿಮಗೆ ನೆನಪಿದ್ದರೆ ಇಂಗ್ಲೆಂಡ್ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಕೂಡ ಸೋತಿತ್ತು. ಇದರ ಮಧ್ಯೆ ಅವರು ಆಡಿದ್ದು ಐರ್ಲಂಡ್ ತಂಡದ ವಿರುದ್ಧ ಎನ್ನುವುದು ನನಗೆ ತಿಳಿದಿದೆ. ಈಗ ಅವರು ಇಲ್ಲಿಉಯೂ ಸೋಲು ಕಂಡಿದ್ದಾರೆ. ಅಂದರೆ ಗೆಲ್ಲಬಹುದಾಗಿದ್ದ ಮತ್ತು ಗೆಲ್ಲಲೇಬೇಕಾಗಿದ್ದ ಎರಡು ಪಂದ್ಯಗಳನ್ನು ಅವರು ಸೋತಿದ್ದಾರೆ" ಎಂದು ನ್ಯೂಜಿಲೆಂಡ್ ವಿರುದ್ಧ ವರ್ಷಾರಂಭದಲ್ಲಿ ಅನುಭವಿಸಿದ ಒಂದು ರನ್‌ಗಳ ಅಂತರದ ಸೋಲನ್ನು ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದ್ದಾರೆ ನಾಸಿರ್ ಹುಸೇನ್.
ಗಮನಾರ್ಹ ಸಂಗತಿಯೆಂದರೆ ಒಂದು ಕ್ಯಾಲೆಂಡರ್ ವರ್ಷದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಡಿಕ್ಲೇರ್ ಮಾಡಿದ ನಂತರ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಮೊದಲ ತಂಡ ಇಂಗ್ಲೆಂಡ್ ಎನಿಸಿಕೊಂಡಿದೆ. ನ್ಯೂಜಿಲಂಡ್ ವಿರುದ್ಧದ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 435 ರನ್ ಗಳಿಸಿತ್ತು. ನಂತರ ಫಾಲೋ-ಆನ್‌ಗೆ ಒಳಗಾಗುವ ಮುನ್ನ ನ್ಯೂಜಿಲೆಂಡ್ 209 ಕ್ಕೆ ಆಲೌಟ್ ಆಗಿತ್ತು. ಹಾಗಿದ್ದರೂ ಕೇನ್ ವಿಲಿಯಮ್ಸನ್ ಪಡೆ ವೆಲ್ಲಿಂಗ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಹೋರಾಡಿ ಗೆಲುವು ಸಾಧಿಸಿತ್ತು.
"ಆಸ್ಟ್ರೇಲಿಯಾ ವಿರುದ್ಧ ನಾವು ಆಶಸ್ ಸರಣಿಯಲ್ಲಿ ಬ್ಯಾಸ್‌ಬಾಲ್ ಇಲ್ಲದೆಯೇ 2001ರಿಂದ ತವರಿನಲ್ಲಿ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದೇವೆ. ಹಳೇಯ ಶೈಲಿಯಲ್ಲಿಯೇ ಇಷ್ಟು ಅದ್ಭುತವಾದ ದಾಖಲೆಯಿದ್ದಾಗ ಆಸ್ಟ್ರೇಲಿಯಾವನ್ನು ಮಣಿಸಲು ಬ್ಯಾಸ್‌ಬಾಲ್ ಅಗತ್ಯವಿಲ್ಲ" ಎಂದಿದ್ದಾರೆ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್.
"ನಾನು ಹೇಳಲು ಬಯಸುವ ಸಂಗತಿಯೆಂದರೆ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಗಳು ಮತ್ತು ವಿಶ್ವದ ನಂಬರ್ 1 ತಂಡ ಯಾಕೆ ಎನ್ನುವುದನ್ನು ಅವರು ತೋರಿಸಿದ್ದಾರೆ. ಅವರ ತಂಡದಲ್ಲಿ ಕೆಲ ಗಂಭೀರ ಆಟಗಾರರನ್ನು ಮತ್ತು ಕೆಲ ಕಠಿಣ ಆಟಗಾರರನ್ನು ಹೊಂದಿದ್ದಾರೆ" ಎಂದಿದ್ದಾರೆ ನಾಸಿರ್ ಹುಸೇನ್. ಈ ಮೂಲಕ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಬ್ಯಾಸ್‌ಬಾಲ್ ಆಟಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.