ಬಾಬರ್ ಅಜಂ ನೋಡಿ ಭಾರತೀಯ ಬ್ಯಾಟರ್‌ಗಳು ಕಲಿಯಬೇಕು: ನಾಸಿರ್ ಹುಸೇನ್
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದ ಬಳಿಕ ವಿಮರ್ಶೆಗಳು ಜೋರಾಗಿ ನಡೆಯುತ್ತಿದೆ. ಭಾರತ ಪದೇ ಪದೇ ಐಸಿಸಿ ಟೂರ್ನಿಗಳಲ್ಲಿ ಅನುಭವಿಸುತ್ತಿರುವ ಸೋಲುಗಳಿಗೆ ಹಾಗೂ ನಿರ್ಣಾಯಕ ಘಟ್ಟದಲ್ಲಿ ಎಡವುತ್ತಿರುವ ವಿಚಾರವಾಗಿ ತಮ್ಮದೇ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಟೀಮ್ ಇಂಡಿಯಾ ಬ್ಯಾಟರ್‌ಗಳ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನಿಡಿದ್ದು ಭಾರತೀಯ ದಾಂಡಿಗರು ಪಾಕಿಸ್ತಾನದ ನಾಯಕ ಬಾಬರ್ ಅಜಂ ನೋಡಿ ಕಲಿಯಬೇಕು ಎಂದಿದ್ದಾರೆ.
"ಭಾರತೀಯ ಆಟಗಾರರ ಪ್ರದರ್ಶನದ ಬಗ್ಗೆ ನನಗೆ ನಿಜಕ್ಕೂ ಬಹಳ ಬೇಸರವಾಗಿದೆ. ನಾನು ಹೇಳುವ ಈ ವಿಚಾರದ ಬಗ್ಗೆ ಭಾರತೀಯ ಅಭಿಮಾನಿಗಳು ನನ್ನತ್ತ ಧಾವಿಸಬಹುದು. ಆದರೆ ಭಾರತೀಯ ಅಗ್ರ ಕ್ರಮಾಂಕದ ಆಟಗಾರರು ಚೆಂಡು ತಿರುವು ಪಡೆಯುತ್ತಿರುವಾಗ ಹೇಗೆ ಆಡಬೇಕು ಎಂಬುದನ್ನು ಪಾಕಿಸ್ತಾನದ ಬಾಬರ್ ಅಜಂ ಹಾಗೂ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರನ್ನು ನೋಡಿ ಕಲಿಯಬೇಕಿದೆ. ಇಬ್ಬರು ಕೂಡ ಅದನ್ನು ಬಹಳ ನಿಧಾನವಾಗಿ ಮಾಡುತ್ತಾರೆ" ಎಂದಿದ್ದಾರೆ ಇಂಗ್ಲೆಂಡ್ ಮಾಜಿ ನಾಯಕ ಹಾಗೂ ಕಾಮೆಂಟೇಟರ್ ನಾಸಿರ್ ಹುಸೇನ್.

ಭಾರತ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಆಡಿದ್ದರೂ ಎರಡು ಬಾರಿಯೂ ಸೋಲು ಅನುಭವಿಸಿದಂತಾಗಿದೆ. ಇದಕ್ಕೂ ಮುನ್ನ 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಫೈನಲ್ ಆಡಿ ಸೋಲು ಕಂಡಿತ್ತು.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡು ಆರಂಭದಲ್ಲಿ ಯಶಸ್ಸು ಸಾಧಿಸಿತು. ಆದರೆ ಸ್ಟೀವ್ ಸ್ಮಿತ್ ಹಾಗೂ ಟ್ರೆವಿಸ್ ಹೆಡ್ ಅವರ ಅಮೋಘ ಜೊತೆಯಾಟ ಪಂದ್ಯದಲ್ಲಿ ಭಾರತಕ್ಕೆ ಹಿನ್ನಡೆಯುಂಟಾಗಲು ಕಾರಣವಾದರು. ಈ ಜೊತೆಯಾಟವೇ ಎರಡು ತಂಡಗಳ ಮಧ್ಯೆ ದೊಡ್ಡ ಅಂತರಕ್ಕೆ ಕಾರಣವಾಯಿತು. ಇದೇ ಹಿನ್ನಲೆಯಲ್ಲಿ ಟೀಮ್ ಇಂಡಿಯಾದ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಬೌಲರ್‌ಗಳತ್ತ ಬಿಟ್ಟು ಮಾಡಿದರು.
ಪಂದ್ಯದ ಮುಕ್ತಾಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಶನ್ ಕಾರ್ಯಕ್ರಮದಲ್ಲಿ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದ ಬಳಿಕ ಭಾರತ ಉತ್ತಮ ಆರಂಭವನ್ನು ಪಡೆಯಿತು ಎಂದರು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಹಿನ್ನಡೆ ಕಾಣಲು ಬೌಲರ್‌ಗಳು ಕಾರಣ ಎಂದು ದೂರಿದರು. ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಆಟಗಾರರು ಬೇಗನೆ ವಿಕೆಟ್ ಕಳೆದುಕೊಂಡಿದ್ದರೂ ಅಂತಿಮವಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್‌ಗಳಿಸಲು ಶಕ್ತವಾಯಿತು. ಟ್ರವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಅವರ ಶತಕ ಈ ಬೃಹತ್ ಮೊತ್ತಕ್ಕೆ ಕಾರಣವಾಯಿತು.
ಇನ್ನು ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಲೋಕದಲ್ಲಿ ಐತಿಹಾಸಿಕ ಸಾಧನೆಯೊಂದನ್ನು ಮಾಡಿದಂತಾಗಿದೆ. ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆದ್ದ ಮೊದಲ ದೇಶ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಆಸ್ಟ್ರೇಲಿತಾ. 1987, 1999, 2003, 2007 ಹಾಗೂ 2015ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಂಡ ಸಾಧನೆ ಮಾಡಿದೆ. 2006 ಹಾಗೂ 2009ರಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡ ಗೆದ್ದುಕೊಂಡಿದ್ದ ಆಸ್ಟ್ರೇಲಿಯಾ 2021ರಲ್ಲಿ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇದೀಗ ಟೆಸ್ಟ್ ಮಾದರಿಯಲ್ಲಿಯೂ ಚಾಂಪಿಯನ್ ಪಟ್ಟಕ್ಕೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications